ಒಟh್ಞ.dsಟ್ಠ್ಢaಃಠಿಜಿಞಛಿsಟ್ಛಜ್ಞಿdಜಿa.್ಚಟಞಬಹುಕಾಲದಿಂದ ತಣ್ಣಗಿದ್ದ ಕಸ್ತೂರಿರಂಗನ್ ವರದಿ ವಿವಾದ ಪಶ್ಚಿಮಘಟ್ಟದಲ್ಲಿಮತ್ತೆ ಕಿಚ್ಚು ಹೊತ್ತಿಸಿದೆ. ವರದಿ ಆಧರಿಸಿ ಪರಿಸರ ಸೂಕ್ಷ್ಮ ವಲಯ (ಇಎಸ್ ಎ) ಘೋಷಣೆಗೆ ಕೇಂದ್ರ ಸರಕಾರ ಹೊರಡಿಸಿರುವ 7ನೇ ಕರಡು ಅಧಿಸೂಚನೆಗೆ ಉಡುಪಿ ಜಿಲ್ಲೆಯ 35 ಗ್ರಾಮ ಪಂಚಾಯಿತಿಗಳು ಸೇರಿದಂತೆ ಘಟ್ಟ ಪ್ರದೇಶದಲ್ಲಿತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಇಎಸ್ ಎ ವ್ಯಾಪ್ತಿಗೆ ಪ್ರದೇಶ ಸೇರ್ಪಡೆಯಾದರೆ ಕೃಷಿ, ವಸತಿ, ರಸ್ತೆ, ಪ್ರವಾಸೋದ್ಯಮ ಸೇರಿದಂತೆ ಸ್ಥಳೀಯ ಅಭಿವೃದ್ಧಿ ಚಟುವಟಿಕೆಗಳ ಮೇಲೆ ನಿರ್ಬಂಧ ಬೀಳಬಹುದು ಎಂಬ ಆತಂಕ ಜನರಲ್ಲಿಮೂಡಿದೆ. ಹೀಗಾಗಿ ವರದಿ ವಿರೋಧಿ ಹೋರಾಟಕ್ಕೆ ಮತ್ತೆ ವೇಗ ಬಂದಿದೆ.
20,668 ಚದರ ಕಿ.ಮೀ. ವ್ಯಾಪ್ತಿ: ಪಶ್ಚಿಮಘಟ್ಟದ ಸುಮಾರು ಶೇ.37ರಷ್ಟು ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸುವ ಪ್ರಸ್ತಾವ ಕೇಂದ್ರದ ಮುಂದಿದೆ. ಕರ್ನಾಟಕದಲ್ಲಿ10 ಜಿಲ್ಲೆಗಳ 1,449 ಗ್ರಾಮಗಳು ಹಾಗೂ 20,668 ಚದರ ಕಿ.ಮೀ.ಗೂ ಅಧಿಕ ಪ್ರದೇಶ ಇಎಸ್ ಎ ವ್ಯಾಪ್ತಿಗೆ ಬರುವ ಸಾಧ್ಯತೆ ಇದೆ.
ಗಣಿಗಾರಿಕೆ, ಕಲ್ಲುಗಣಿಗಾರಿಕೆ ಮತ್ತು ದೊಡ್ಡ ಪ್ರಮಾಣದ ಮೂಲಸೌಕರ್ಯ ಯೋಜನೆಗಳ ಮೇಲೆ ಕಠಿಣ ನಿರ್ಬಂಧಗಳು ಜಾರಿಯಾಗುವ ಸಾಧ್ಯತೆ ಇರುವುದರಿಂದ, ಇಎಸ್ ಎ ವ್ಯಾಪ್ತಿಯ ರೈತರು ಮತ್ತು ಅರಣ್ಯ ತಪ್ಪಲು ನಿವಾಸಿಗಳಲ್ಲಿಆತಂಕ ಹೆಚ್ಚಿದೆ.
ಕೇಂದ್ರದ ವಾದವೇನು ?: ಪಶ್ಚಿಮಘಟ್ಟದ ಸೂಕ್ಷ್ಮ ಜೀವವೈವಿಧ್ಯವನ್ನು ರಕ್ಷಿಸುವುದು ಹಾಗೂ ಪರಿಸರ ಹಾನಿಯನ್ನು ತಡೆಯುವುದು ಇಎಸ್ ಎ ಘೋಷಣೆಯ ಪ್ರಮುಖ ಉದ್ದೇಶ ಎಂಬುದು ಕೇಂದ್ರ ಸರಕಾರದ ನಿಲುವು. ಪಶ್ಚಿಮಘಟ್ಟದಲ್ಲಿಭೂಕುಸಿತ, ಪ್ರವಾಹ ಸೇರಿದಂತೆ ಪರಿಸರ ವಿಪತ್ತುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿಸಂರಕ್ಷಣಾ ಕ್ರಮ ಅನಿವಾರ್ಯ ಎಂದು ಕೇಂದ್ರ ಪ್ರತಿಪಾದಿಸುತ್ತಿದೆ.
ಈ ಕುರಿತು ಹಲವು ವರ್ಷಗಳಿಂದ ಕರಡು ಅಸೂಚನೆಗಳನ್ನು ಹೊರಡಿಸಲಾಗುತ್ತಿದ್ದು, ಇದೀಗ 7ನೇ ಕರಡು ಅಧಿಸೂಚನೆ ಪ್ರಕಟಿಸಿ ಸಾರ್ವಜನಿಕರಿಂದ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ರಾಜ್ಯಗಳ ಒಪ್ಪಿಗೆ ಪಡೆಯುವ ಪ್ರಕ್ರಿಯೆಯಲ್ಲಿಯೇ ಅಂತಿಮ ಅಧಿಸೂಚನೆ ಹೊರಡಿಸುವ ಪ್ರಯತ್ನ ಮುಂದುವರಿದಿದೆ.
ಕರ್ನಾಟಕದಿಂದ ಪೂರ್ಣ ವಿರೋಧ: ಕಸ್ತೂರಿರಂಗನ್ ವರದಿಯನ್ನು ಕರ್ನಾಟಕ ಸರಕಾರ ಸಂಪೂರ್ಣವಾಗಿ ತಿರಸ್ಕರಿಸಿದೆ. ಇಎಸ್ ಎ ವ್ಯಾಪ್ತಿಯಲ್ಲಿರುವ ಪ್ರದೇಶಗಳಲ್ಲಿನ ಜನಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬುದು ರಾಜ್ಯದ ವಾದ.
ಅಧಿಸೂಚನೆ ಜಾರಿಯಾದರೆ ರೈತರ ಕೃಷಿ ಚಟುವಟಿಕೆಗಳಿಗೆ ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿರಸ್ತೆ, ವಸತಿ, ವಿದ್ಯುತ್ ಹಾಗೂ ಇತರ ಮೂಲಸೌಕರ್ಯ ಅಭಿವೃದ್ಧಿಗೂ ತೊಂದರೆಯಾಗಬಹುದು ಎಂದು ಸರಕಾರ ಹೇಳಿದೆ. ಈ ಹಿನ್ನೆಲೆಯಲ್ಲಿತನ್ನ ವಿರೋಧವನ್ನು ಅಧಿಕೃತವಾಗಿ ದಾಖಲಿಸಲು ವಿಶೇಷ ವಿಧಾನಮಂಡಲ ಅಧಿವೇಶನ ಕರೆಯುವ ನಿರ್ಧಾರ ಕೈಗೊಂಡಿದೆ.
ಕೇರಳದಲ್ಲೂಅಸಮಾಧಾನ: ಕೇರಳ ಸರಕಾರವೂ ಕರಡು ಅಸೂಚನೆಗೆ ವಿರೋಧ ವ್ಯಕ್ತಪಡಿಸಿದೆ. ಗುರುತಿಸಲಾದ ಸೂಕ್ಷ್ಮ ಪ್ರದೇಶಗಳ ಒಳಗೆ ಮತ್ತು ಸುತ್ತಮುತ್ತ ಹೆಚ್ಚಿನ ಸಂಖ್ಯೆಯಲ್ಲಿಜನರು ವಾಸಿಸುತ್ತಿರುವುದರಿಂದ, ಪ್ರಸ್ತಾವಿತ ಇಎಸ್ ಎ ವ್ಯಾಪ್ತಿಯನ್ನು ಗಣನೀಯವಾಗಿ ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದೆ. ಮಹಾರಾಷ್ಟ್ರ, ಗೋವಾ ಮತ್ತು ಗುಜರಾತ್ ರಾಜ್ಯಗಳು ಪರಿಷ್ಕೃತ ಮಾನದಂಡಗಳಿಗೆ ಬಹುತೇಕ ಸಮ್ಮತಿ ಸೂಚಿಸಿವೆ. ತಮಿಳುನಾಡಿನಲ್ಲೂವಿರೋಧ ವ್ಯಕ್ತವಾಗಿದ್ದು, ಗ್ರಾಮ ಮಟ್ಟದ ನಕ್ಷೆ ಸಿದ್ಧಪಡಿಸುವ ಕುರಿತು ಸಮಾಲೋಚನೆ ನಡೆಸಲಾಗುತ್ತಿದೆ.
ಕೋಟ್
ಕಸ್ತೂರಿರಂಗನ್ ವರದಿ ಆಧರಿಸಿ ಕೇಂದ್ರ ಸರಕಾರ ಹೊರಡಿಸಿರುವ 7ನೇ ಕರಡು ಅಧಿಸೂಚನೆ ಉಪಗ್ರಹ ಆಧಾರಿತ ಭೂನಕ್ಷೆಯನ್ನು ಅವಲಂಬಿಸಿದೆ. ತಳಮಟ್ಟದಲ್ಲಿಅಧ್ಯಯನ ನಡೆಸಿ ಅಧಿಸೂಚನೆ ಜಾರಿಗೊಳಿಸಬೇಕಾಗಿರುವುದು ಕರ್ತವ್ಯ. ಅಧಿಸೂಚನೆಯ ನಿಯಮಗಳು ಪಟ್ಟಣ ಅಭಿವೃದ್ಧಿ ಮತ್ತು ಕೃಷಿ ಸ್ವಾತಂತ್ರ್ಯಕ್ಕೆ ತಡೆಗೋಡೆಯಾಗಿದೆ. ಎಎಸ್ ಎ ಮತ್ತು ಇಎಸ್ ಝಡ್ ನ ಗೊಂದಲ ಬಗೆಹರಿಸುವ ಕೆಲಸ ಕೂಡ ನಡೆದಿಲ್ಲ. ವರದಿ ವಿರೋಧಿಸಿ ಜಿಲ್ಲೆಯಾದ್ಯಂತ ಸಂಬಂಧಿತ ಪ್ರದೇಶಗಳಲ್ಲಿಜನಜಾಗೃತಿ ನಡೆಸುತ್ತಿದ್ದೇವೆ.
-ಅಡಕೆಕೊಡ್ಲುಉದಯ ಕುಮಾರ ಶೆಟ್ಟಿ, ಹೋರಾಟಗಾರ.
ಕೋಟ್
ಸರಕಾರ ವರದಿಯ ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಿರುವ ಬಗೆಗಿನ ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ಹಿಂದೆ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿಪ್ರತಿ ಗ್ರಾಮ ಮಟ್ಟದಲ್ಲಿಸಭೆ ನಡೆಸಿ ಆಕ್ಷೇಪಣೆ ಸಲ್ಲಿಸಲಾಗಿತ್ತು. ಅದರ ಸ್ಥಿತಿ ಏನಾಗಿದೆ ಎಂಬುವುದನ್ನು ತಿಳಿಸಬೇಕು. ಕಸ್ತೂರಿರಂಗನ್ ವರದಿಯ 7ನೇ ಕರಡು ಅಧಿಸೂಚನೆಯ ನಿಯಮಗಳು ರೈತರಿಗೆ, ಅರಣ್ಯ ತಪ್ಪಲು ನಿವಾಸಿಗಳಿಗೆ ಅನುಕೂಲಕರವಾಗಿಲ್ಲ.
-ಸತ್ಯನಾರಾಯಣ ಉಡುಪ, ಭಾರತೀಯ ಕಿಸಾನ್ ಸಂಘದ ಮುಖಂಡ.
ಫೋಟೊ//2ಕೆ-ಕೆಎಸ್ ಟಿ//. ಸಾಂದರ್ಭಿಕ ಚಿತ್ರ.
ಬಾಕ್ಸ್
ಕಸ್ತೂರಿರಂಗನ್ 7ನೇ ಕರಡು
ಕರ್ನಾಟಕದ 10 ಜಿಲ್ಲೆಗಳು
1,449 ಗ್ರಾಮಗಳು
20,668 ಚದರ ಕಿ.ಮೀ.ಗೂ ಅಧಿಕ ಪ್ರದೇಶ
ಉಡುಪಿ ಜಿಲ್ಲೆಯ 35 ಗ್ರಾಮ ಪಂಚಾಯಿತಿಗಳಲ್ಲಿವಿರೋಧ
ಇಎಸ್ ಎ ವ್ಯಾಪ್ತಿಯಲ್ಲಿಗಣಿಗಾರಿಕೆ ಸೇರಿದಂತೆ ಹಲವು ಚಟುವಟಿಕೆಗಳಿಗೆ ನಿಬಂರ್ ಧದ ಸಾಧ್ಯತೆ.