ವಿಕ ಸುದ್ದಿಲೋಕ ನಂದಗುಡಿನಂದಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ಡಿ.ಶೆಟ್ಟಹಳ್ಳಿ ಬಳಿ ಅರೆಬೆಂದ ಸ್ಥಿತಿಯಲ್ಲಿಪೊಲೀಸ್ ಪೇದೆಯ ಶವ ಪತ್ತೆಯಾಗಿದೆ.
ಹೊಸಕೋಟೆ- ಚಿಂತಾಮಣಿ ರಾಜ್ಯ ಹೆದ್ದಾರಿಯ ಡಿ.ಶೆಟ್ಟಹಳ್ಳಿಯ ಬಳಿ ಚಿಂತಾಮಣಿ ತಾಲೂಕಿನ ಬೈಂದೂರು ಗ್ರಾಮದ ನಿವಾಸಿ ನವೀನ್ ಕುಮಾರ್ ಶವ ಪತ್ತೆಯಾಗಿದೆ. ಮೃತರು ಪೊಲೀಸ್ ಪೇದೆಯಾಗಿರುವ ವಿಚಾರ ತಿಳಿದು ಬಂದಿದೆ. ಸುದ್ದಿ ತಿಳಿದ ನಂದಗುಡಿ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಬಂದು ಪರಿಶೀಲನೆ ನಡೆಸಿ. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಸಾವಿನ ಬಗ್ಗೆ ತನಿಖೆಯನ್ನು ಕೈಗೊಂಡಿದ್ದಾರೆ.