ಸಿಜೆಪಿ ಹೋರಾಟಕ್ಕೆ ಜಯ : ಶಿಥಿಲಾವಸ್ಥೆಯಲ್ಲಿದ್ದ ಶಾಲಾ ಕಟ್ಟಡ ನೆಲಸಮ

Contributed byshree vijendra|Vijaya Karnataka
school building demolished victory for cjpi struggle
- 18 ಲಕ್ಷ ರೂ. ವೆಚ್ಚದಲ್ಲಿತಲೆಯತ್ತಲಿದೆ ಹೊಸ ಶಾಲೆ

ಜೈಪುರ: ಕಾಕ್ರೋಚ್ ಜನತಾ ಪಕ್ಷ ‘ಶಾಲೆಗಳನ್ನು ಸರಿಪಡಿಸಿ’ ಅಭಿಯಾನದಡಿ ಶಿಥಿಲಾವಸ್ಥೆಯಲ್ಲಿರುವ ಸರಕಾರಿ ಶಾಲಾ ಕಟ್ಟಡದ ಕುರಿತು ಬೆಳಕು ಚೆಲ್ಲಿದ ಬೆನ್ನಲ್ಲೇ ರಾಜಸ್ಥಾನ ಸರಕಾರ ಆ ಶಾಲೆಯನ್ನು ಬುಧವಾರ ನೆಲಸಮಗೊಳಿಸಿದೆ.
ಜೈಪುರ ಜಿಲ್ಲೆಯ ರಾಮಪುರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಹಳೆಯ ಕಟ್ಟಡವನ್ನು ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ಉನ್ನತಾಧಿಕಾರಿಗಳ ಸಮ್ಮುಖದಲ್ಲಿಬುಲ್ಡೋಜರ್ ಬಳಸಿ ಕೆಡವಲಾಗಿದೆ.

2025ರ ಸೆಪ್ಟೆಂಬರ್ ನಲ್ಲಿನಡೆಸಲಾದ ತಾಂತ್ರಿಕ ಸಮೀಕ್ಷೆಯಲ್ಲೂಈ ಶಾಲಾ ಕಟ್ಟಡ ಶಿಥಿಲಗೊಂಡಿದ್ದು, ಬಳಕೆಗೆ ಅಸುರಕ್ಷಿತವಾಗಿದೆ ಎಂದು ಘೋಷಿಸಲಾಗಿತ್ತು. ತದನಂತರ ಕಟ್ಟಡದ ಬಳಕೆ ನಿಲ್ಲಿಸಲಾಗಿತ್ತು. ಇದರ ತೆರವಿಗೆ ಒತ್ತಾಯ ಕೇಳಿಬಂದಿತ್ತು. ಸಿಜೆಪಿ ಕಾರ್ಯಕರ್ತರು ‘ಶಾಲೆಗಳನ್ನು ಸರಿಪಡಿಸಿ’ ಅಭಿಯಾನದ ಭಾಗವಾಗಿ ಇತ್ತೀಚೆಗೆ ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿಸ್ಥಳೀಯರು ಹಾಗೂ ಸಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದು, ಎಫ್ ಐಆರ್ ಕೂಡ ದಾಖಲಾಗಿತ್ತು. ಕಳೆದ ತಿಂಗಳಷ್ಟೇ ರಾಜಸ್ಥಾನ ಸರಕಾರ 18 ಲಕ್ಷ ರೂ. ವೆಚ್ಚದಲ್ಲಿಹೊಸ ಶಾಲಾ ಕಟ್ಟಡ ನಿರ್ಮಿಸುವುದಾಗಿ ಘೋಷಿಸಿತ್ತು.