ಸೋಲು,ಗೆಲುವನ್ನು ಸಮಾನವಾಗಿ ಸ್ವೀಕರಿಸಿ

Contributed byarksubbarao@gmail.com|Vijaya Karnataka
sports meet in arakalagudu a reminder by the education officer on the balance of victory and defeat
ಕ್ರೀಡಾಕೂಟದಲ್ಲಿಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್ ಹೇಳಿಕೆ

ವಿಕ ಸುದ್ದಿಲೋಕ ಅರಕಲಗೂಡು
ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾ ಮನೋಭಾವದಿಂದ ಸ್ಪರ್ಧಿಸಿ, ಶಿಸ್ತು ಮತ್ತು ಆತ್ಮವಿಶ್ವಾಸದಿಂದ ಮುನ್ನಡೆಯುವಂತೆ ವಿದ್ಯಾರ್ಥಿಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್ ತಿಳಿಸಿದರು.

ಪಟ್ಟಣದ ಬಾಲಕರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿನಿವೇದಿತಾ ವಿದ್ಯಾಶಾಲೆ ಮತ್ತು ರಚನಾ ವಿದ್ಯಾ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಿದ್ದ ಅರಕಲಗೂಡು ಕಸಬಾ ಹೋಬಳಿ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

‘‘ಕ್ರೀಡೆ ಮಕ್ಕಳಲ್ಲಿಹೊಸ ಚೈತನ್ಯವನ್ನು ತಂದುಕೊಡುವಲ್ಲಿಸಹಕಾರಿಯಾಗಿದೆ. ಪಠ್ಯದ ಜತೆಗೆ ಕ್ರೀಡೆಯನ್ನು ತೆಗೆದುಕೊಂಡು ಹೋಗುವಂತಾಗಬೇಕು. ಮಕ್ಕಳ ಮಾನಸಿಕ ಮತ್ತು ದೈಹಿಕ ದೃಢತೆಗೆ ಸಹಕಾರಿಯಾಗಿದೆ. ಕ್ರೀಡೆಯ ಮೂಲಕ ಅರಕಲಗೂಡು ತಾಲೂಕಿನ ಹೆಸರನ್ನು ವಿಶ್ವ ವ್ಯಾಪಿಸಿದವರು ಬಹಳಷ್ಟು ಮಂದಿ ಇದ್ದಾರೆ.ಮುಂದೆಯೂ ನೀವು ತಾಲೂಕಿನ, ನಾಡಿನ ಕೀರ್ತಿಯನ್ನು ಹೆಚ್ಚಿಸುವಂತಾಗಲಿ,’’ಎಂದು ಶುಭ ಹಾರೈಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನ್ಯಾಳು ಕುಮಾರ್ ಮಾತನಾಡಿ,‘‘ಮಕ್ಕಳಲ್ಲಿಕ್ರೀಡೆ ಅತ್ಯವಶ್ಯಕವಾಗಿದ್ದು, ಬದುಕನ್ನು ಸ್ಪರ್ಧಾತ್ಮಕವಾಗಿ ಕರೆದೊಯ್ಯಲು ಸಹಕಾರಿಯಾಗುತ್ತದೆ. ಕ್ರೀಡಾ ಶಿಕ್ಷಕರು ಎಲ್ಲಾ ಮಕ್ಕಳನ್ನೂ ಸಮಾನವಾಗಿ ಪರಿಗಣಿಸಿ ತೀರ್ಪು ನೀಡಬೇಕು,’’ಎಂದರು.

ವೇದಿಕೆಯಲ್ಲಿನಿವೇದಿತಾ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎ.ಆರ್ .ಸುಬ್ಬರಾವ್ , ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸಂಜೀವ್ ಕುಮಾರ್ , ಇಸಿಒ ಕಾಂತರಾಜು. ಬಿಆರ್ ಪಿ ಮೌನ, ರಚನಾ, ವಿದ್ಯಾಸಂಸ್ಥೆಯ ಸಂತೋಷ್ , ನಿವೇದಿತಾ ವಿದ್ಯಾಸಂಸ್ಥೆ ಯ ಮುಖ್ಯಶಿಕ್ಷಕಿ ಬಿ.ಎಂ.ರಾಗಿಣಿ,ಕ್ರೀಡಾ ಶಿಕ್ಷಣ ಶಿಕ್ಷಣಾಧಿ ಕಾರಿ ಬಸವರಾಜು ಇತರರು ಉಪಸ್ಥಿತರಿದ್ದರು.

ಫೋಟೊ ಸುದ್ದಿ

ಅರಕಲಗೂಡು ತಾಲೂಕಿನ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿನಡೆದ ಕಸಬ ಹೋಬಳಿ ಮಟ್ಟದ ಕ್ರೀಡಾಕೂಟವನ್ನು ಅರಕಲಗೂಡು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್ ಚಾಲನೆ ನೀಡಿದರು.