ಸಿಂಧ್ಯಾ

Contributed bysuresha.yg@timesgroup.com|Vijaya Karnataka
20th september
ಸಿಎಂ ಸ್ಥಾನದ ಅವಕಾಶ ಯಾರೂ

ನೀಡೋಲ್ಲ, ನಾವೇ ಪಡೆದುಕೊಳ್ಳಬೇಕು
* ಮಾಜಿ ಸಿಎಂ ಸಿದ್ದರಾಮಯ್ಯ ಶ್ಲಾಘನೆ

ವಿಕ ಸುದ್ದಿಲೋಕ ಬೆಂಗಳೂರು

ಮುಖ್ಯಮಂತ್ರಿ ಸ್ಥಾನದ ಅವಕಾಶವನ್ನು ಯಾರೂ ನೀಡುವುದಿಲ್ಲ. ಅದನ್ನು ನಾವೇ ಪಡೆದುಕೊಳ್ಳಬೇಕು. ಅಧಿಕಾರ ಸಿಕ್ಕರೆ ಬೇಡ ಎನ್ನುವವರು ಯಾರಿದ್ದಾರೆ? ನಾನೂ ಪ್ರಯತ್ನಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿಶನಿವಾರ ನಡೆದ ಕಾರ್ಯಕ್ರಮದಲ್ಲಿ‘ಪಿ.ಜಿ.ಆರ್ .ಸಿಂಧ್ಯಾ-ಎ ಲೈಫ್ ಆಫ್ ಸರ್ವಿಸ್ ’ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ‘‘ಸಿಂಧ್ಯಾ ಅವರು ರಾಮಕೃಷ್ಣ ಹೆಗಡೆ ಅವರ ಸಚಿವ ಸಂಪುಟದಲ್ಲಿಆರೋಗ್ಯ, ಗೃಹ, ಸಾರಿಗೆ, ಸಮಾಜ ಕಲ್ಯಾಣ ಹಾಗೂ ಹಣಕಾಸು ಸಚಿವರಾಗಿ ವಿವಿಧ ಇಲಾಖೆಗಳ ಜವಾಬ್ದಾರಿ ನಿರ್ವಹಿಸಿದ್ದರು. ಯಾವುದೇ ಇಲಾಖೆ ವಹಿಸಿಕೊಂಡರೂ ಅದನ್ನು ಅಚ್ಚುಕಟ್ಟಾಗಿ ನಡೆಸುತ್ತಿದ್ದರು. ಸಿಂಧ್ಯಾ ಅವರು ಮುಖ್ಯಮಂತ್ರಿಯಾಗುವ ಎಲ್ಲಅರ್ಹತೆ ಹೊಂದಿದ್ದರು,’’ ಎಂದು ಹೇಳಿದರು.

‘‘ನಮ್ಮ ನಡುವೆ ಕೆಲವೊಮ್ಮೆ ಜಗಳವಾಗುತ್ತಿತ್ತು. ಆದರೆ, ಮರುದಿನವೇ ಮತ್ತೆ ಮಾತನಾಡುತ್ತಿದ್ದೆವು. ಅವರು ನನ್ನ ಆತ್ಮೀಯ ಸ್ನೇಹಿತ. ಚುನಾವಣೆಗಳ ಸಂದರ್ಭದಲ್ಲಿಪಕ್ಷದ ಸಂಘಟನೆಗಾಗಿ ಸಿಂಧ್ಯಾ ಶ್ರಮಿಸುತ್ತಿದ್ದರು. ಕೌನ್ಸಿಲ್ , ರಾಜ್ಯಸಭೆ, ಸಾರ್ವತ್ರಿಕ ಚುನಾವಣೆ ಅಥವಾ ಉಪಚುನಾವಣೆಯ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದರು. ಯಾವುದೇ ಇಲಾಖೆಯ ಖಾತೆ ನೀಡಿದರೂ ಅದನ್ನು ಅಚ್ಚುಕಟ್ಟಾಗಿ, ಶಿಸ್ತಿನಿಂದ ಹಾಗೂ ಸಮರ್ಥವಾಗಿ ನಿರ್ವಹಿಸುತ್ತಿದ್ದ ಹಾರ್ಡ್ ವರ್ಕರ್ ,’’ ಎಂದು ಶ್ಲಾಘಿಘಿಸಿದರು.

***

ಫೊಟೊ :

ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿಪಿ.ಜಿ.ಆರ್ .ಸಿಂಧ್ಯಾ ಅವರ ಜೀವನಚರಿತ್ರೆ ಬಿಡುಗಡೆಗೊಂಡಿತು.