ಲಿಂಗಸುಗೂರು- ‘ಗುಣಮಟ್ಟದ ರೇಷನ್ ಪೂರೈಸಿ’

Contributed bymkhussain.lgs@gmail.com|Vijaya Karnataka
government school workers demanding quality ration services
‘ ಗುಣಮಟ್ಟದ ರೇಷನ್ ಪೂರೈಸಿ’

ವಿಕ ಸುದ್ದಿಲೋಕ ಲಿಂಗಸುಗೂರು
‘‘ತಾಲೂಕಿನ ಸರಕಾರಿ ಶಾಲೆಗಳಲ್ಲಿಮಧ್ಯಾಹ್ನದ ಬಿಸಿಯೂಟಕ್ಕೆ ಗುಣಮಟ್ಟದ ರೇಷನ್ ಪದಾರ್ಥಗಳನ್ನು ಸರಬರಾಜು ಮಾಡಬೇಕು,’’ ಎಂದು ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು)ದ ಪದಾಧಿಕಾರಿಗಳು ಒತ್ತಾಯಿಸಿದರು.

ತಾ.ಪಂ. ಎಡಿ ಪಂಪನಗೌಡ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದ ಅವರು, ‘‘ಮಸ್ಕಿ ತಾಲೂಕಿನ ಸಂತೆಕೆಲ್ಲೂರು ಪ್ರೌಢ ಶಾಲೆಯ ಮುಖ್ಯ ಅಡುಗೆದಾರರಾದ ರೇಣುಕಾ ಅವರನ್ನು ಏಕಾಏಕಿ ಕೆಲಸದಿಂದ ವಜಾ ಮಾಡಿರುವುದನ್ನು ರದ್ದುಗೊಳಿಸಿ, ಪುನಃ ನೇಮಕ ಮಾಡಿಕೊಳ್ಳಬೇಕು. ತಾಲೂಕಿನ ಶಾಲೆಗಳಿಗೆ ಸ್ತ್ರೀ ಶಕ್ತಿ ಸ್ವಸಹಾಯ ಗುಂಪಿನವರು ಸಕಾಲಕ್ಕೆ ಮೊಟ್ಟೆ, ತರಕಾರಿ ಸರಬರಾಜು ಮಾಡುತ್ತಿಲ್ಲ. ಅವರಿಗೆ ನೀಡಿದ ಆದೇಶವನ್ನು ರದ್ದು ಮಾಡಿ, ಹಳೆಯ ಪದ್ಧತಿಯಂತೆ ಮುಂದುವರಿಸಬೇಕು. ರೋಡಲಬಂಡ ಕ್ಯಾಂಪ್ , ಜಂಗೀರಾಂಪುರ ತಾಂಡಾ, ಸುಣಕಲ್ , ಚಿಕ್ಕುಪ್ಪೇರಿ, ತೊರಲಬೆಂಚಿ, ಚಿಕ್ಕುಪ್ಪೇರಿ ತಾಂಡಾ ಶಾಲೆಗಳಿಗೆ ಕೊಳೆತ ತರಕಾರಿ, ಕೆಟ್ಟ ಮೊಟ್ಟೆ ಸರಬರಾಜು ಮಾಡಲಾಗುತ್ತಿದ್ದು, ಕೂಡಲೇ ಇದನ್ನು ತಡೆಹಿಡಿದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಬಾಕಿ ಎರಡು ತಿಂಗಳ ಗೌರವಧನ ಕೂಡಲೇ ಬಿಡುಗಡೆ ಮಾಡಬೇಕು. ಎಸ್ಡಿಎಂಸಿ ಹಾಗೂ ಮುಖ್ಯ ಗುರುಗಳ ಜಂಟಿ ಖಾತೆ ರದ್ದು ಮಾಡಿ, ಹಳೆಯ ಪದ್ಧತಿಯಂತೆ ಮುಖ್ಯ ಅಡುಗೆಯವರು ಮತ್ತು ಮುಖ್ಯ ಗುರುಗಳ ಜಂಟಿ ಖಾತೆ ಮುಂದುವರಿಸಬೇಕು. ಕೆಲ ಶಾಲೆಗಳಲ್ಲಿಅಡುಗೆ ಕೋಣೆ ಮತ್ತು ರೇಷನ್ ಕೋಣೆಗಳಲ್ಲಿಸಿಸಿ ಟಿವಿ ಕ್ಯಾಮೆರಾ ಅಳವಡಿಸಿದ್ದು, ತೆರವುಗೊಳಿಸಬೇಕು. ಕೆಲ ಶಾಲೆಗಳಲ್ಲಿಎಸ್ಡಿಎಂಸಿ ಹಾಗೂ ಮುಖ್ಯಶಿಕ್ಷಕರು ಬಿಸಿಯೂಟ ನೌಕರರಿಗೆ ಕಿರುಕುಳ ನೀಡುತ್ತಿದ್ದು, ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು,’’ ಎಂದು ಒತ್ತಾಯಿಸಿದರು.

ಸಂಘಟನೆ ರಾಜ್ಯ ಸಹಕಾರ್ಯದರ್ಶಿ ಮಹ್ಮದ್ ಹನೀಫ್ , ತಾಲೂಕು ಅಧ್ಯಕ್ಷೆ ಸಿದ್ದಮ್ಮ, ಪ್ರಧಾನ ಕಾರ್ಯದರ್ಶಿ ಝರೀನಾ ಬೇಗಂ, ಶೈನಾಜ್ ಬೇಗಂ, ಕಮಲಮ್ಮ, ನೀಲಮ್ಮ, ಪೂಜಾ, ಲಕ್ಷ್ಮಿ, ಹನುಮಂತಿ, ಮಹೆಬೂಬಿ, ಸರಸ್ವತಿ, ಅಮರಮ್ಮ, ಶೈಲಜಾ ಇದ್ದರು.

---

17ಆರ್ ಸಿಎಚ್ ಎಲ್ ಎನ್ ಜಿ5:

ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ಕಾರ್ಯಕರ್ತರು ಲಿಂಗಸುಗೂರು ತಾ.ಪಂ. ಅಧಿಕಾರಿಗೆ ಮನವಿ ಸಲ್ಲಿಸಿದರು.