ವಿಕ ಸುದ್ದಿಲೋಕ ಮುಗದಲ್ ‘‘ಜನರ ಜತೆಗಿನ ಆತ್ಮೀಯತೆ ಯಾವತ್ತೂ ಬದಲಾಗದು. ನಿಮ್ಮ ಸಹಕಾರದಿಂದ ಲಿಂಗಸುಗೂರು ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ,’’ ಎಂದು ಎಂಎಲ್ಸಿ ಶರಣಗೌಡ ಪಾಟೀಲ್ ಬಯ್ಯಾಪುರ ಹೇಳಿದರು.
ಪಟ್ಟಣದ ಕಿಲ್ಲಾದಲ್ಲಿರುವ ಐತಿಹಾಸಿಕ ರಾಮಲಿಂಗೇಶ್ವರ ದೇವಸ್ಥಾನದಲ್ಲಿಹಮ್ಮಿಕೊಂಡಿದ್ದ ರಾಜ್ಯ ಅಪೆಕ್ಸ್ ಬ್ಯಾಂಕ್ ನೂತನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಹಿನ್ನೆಲೆಯಲ್ಲಿಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿಮಾತನಾಡಿದರು. ‘‘ಪಟ್ಟಣ ನನ್ನ ತಾಯಿ ಇದ್ದ ಹಾಗೆ. ನಾನು ಜೀವನದಲ್ಲಿಯಾವುದೇ ಹುದ್ದೆಯಿಂದ ಬೆನ್ನತ್ತಿ ಹೋದವನಲ್ಲ. ನನಗೆ ಬಯಸದೇ ಬಂದ ಭಾಗ್ಯವಾಗಿದೆ,’’ಎಂದರು.
ತಿಮ್ಮಾಪುರ ಕಲ್ಯಾಣಾಶ್ರಮದ ಮಹಾಂತಸ್ವಾಮೀಜಿ ಆಶಿರ್ವಚನ ನೀಡಿದರು. ವೈದ್ಯ ಗುರುರಾಜ ದೇಶಪಾಂಡೆ, ಜಿಲ್ಲಾಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಪಾಮಯ್ಯ ಮುರಾರಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭೂಪನಗೌಡ ಕರಡಕಲ್ , ಪುರಸಭೆ ಮಾಜಿ ಅಧ್ಯಕ ಅಶೋಕಗೌಡ ಪಾಟೀಲ್ , ಗುರುಬಸಪ್ಪ ಸಜ್ಜನರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜಗೌಡ ಗಣೇಕಲ್ , ಸುರೇಶಗೌಡ ಪಾಟೀಲ್ , ಮೌಲಾನ ಜಮೀರ್ ಅಹ್ಮದ್ ಖಾಜಿ ಇತರರಿದ್ದರು.
---
ಆರ್ ಸಿಎಚ್ 17ಮುದಗಲ್ 01:
ಮುದಗಲ್ ಪಟ್ಟಣದ ರಾಮಲಿಂಗೇಶ್ವರ ದೇವಸ್ಥಾನದಲ್ಲಿಹಮ್ಮಿಕೊಂಡಿದ್ದ ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು ತಿಮ್ಮಾಪುರ ಕಲ್ಯಾಣಾಶ್ರಮದ ಮಹಾಂತ ಸ್ವಾಮೀಜಿ ಉದ್ಘಾಟಿಸಿದರು.