ವಿಕ ಸುದ್ದಿಲೋಕ ಸಿರವಾರ ಹೈದರಾಬಾದ್ ನಿಂದ ಪಟ್ಟಣಕ್ಕೆ ಗಣೇಶ ಮೂರ್ತಿ ತರುತ್ತಿದ್ದ ವೇಳೆ ತಾಲೂಕಿನ ಅತ್ತನೂರು ಗ್ರಾಮದ ಬಳಿ ವಿದ್ಯುತ್ ತಂತಿ ತಗುಲಿ ಮೂರ್ತಿ ಮೈಮೇಲೆ ಬಿದ್ದು ಮೃತಪಟ್ಟಿದ್ದ ಯುವಕ ಪ್ರೇಮ್ ಸುಂದರ್ ಅವರ ನಿವಾಸಕ್ಕೆ ಶಾಸಕರಾದ ಎನ್ .ಎಸ್ .ಬೋಸರಾಜು ಹಾಗೂ ಜಿ.ಹಂಪಯ್ಯ ನಾಯಕ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಕುಟುಂಬದವರ ನೋವು ಆಲಿಸಿ ಧೈರ್ಯ ತುಂಬಿದರು. ‘‘ಮೃತ ಪ್ರೇಮ್ ಸುಂದರ್ ಕುಟುಂಬಕ್ಕೆ ಸರಕಾರದಿಂದ ಸೂಕ್ತ ಪರಿಹಾರ ಕೊಡಿಸಲಾಗುವುದು. ಜೆಸ್ಕಾಂ ನಿರ್ಲಕ್ಷತ್ರ್ಯದ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದು, ಕ್ರಮ ಕೈಗೊಳ್ಳಲಾಗುವುದು,’’ ಎಂದು ಭರವಸೆ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚುಕ್ಕಿ ಶಿವಕುಮಾರ್ , ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಬ್ರಿಜೇಶ ಪಾಟೀಲ್ , ಪ.ಪಂ. ಅಧ್ಯಕ್ಷ ಹಾಜಿ ಚೌದ್ರಿ, ಮುಖಂಡರಾದ ವೈ.ಶರಣಪ್ಪ ನಾಯಕ ಗುಡದಿನ್ನಿ, ಎಂ.ಶ್ರೀನಿವಾಸ, ರಮೇಶ ದರ್ಶನಕರ್ , ವೈ.ಭೂಪನಗೌಡ, ಹಸೇನ್ ಅಲಿ, ಮೌಲಾಸಾಬ್ ವರ್ಚಸ್ , ಎಂ.ನಿಂಬಯ್ಯಸ್ವಾಮಿ, ರಾಜಪ್ಪ ಹೊನ್ನಟಿಗಿ, ಎಚ್ .ಕೆ.ಅಮರೇಶ, ಅಬ್ರಹಾಂ ಹೊನ್ನಟಿಗಿ, ಡಿ.ಜಯಪ್ಪ, ಮತ್ತಾಯಪ್ಪ, ಎಂ.ಪ್ರಕಾಶಪ್ಪ, ಜೆಸ್ಕಾಂ ಜೆಇ ತಿಮ್ಮಾರೆಡ್ಡಿ ಇದ್ದರು.
---
18 ಸಿರವಾರ ಫೋಟೋ 1:
ಗಣೇಶ ಮೂರ್ತಿ ಮೈಮೇಲೆ ಬಿದ್ದು ಮೃತಪಟ್ಟ ಸಿರವಾರದ ಪ್ರೇಮ್ ಸುಂದರ್ ಅವರ ನಿವಾಸಕ್ಕೆ ಭೇಟಿ ನೀಡಿದ ಶಾಸಕರಾದ ಎನ್ .ಎಸ್ .ಬೋಸರಾಜು ಹಾಗೂ ಜಿ.ಹಂಪಯ್ಯ ನಾಯಕ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.