ವಿಕೆಟ್ ಪತನ ಜಟಾಪಟಿ

Contributed byganesh.hegde@timesgroup.com|Vijaya Karnataka
wicket falls amidst events bjp congress verbal spat
ವಿಕ ಸುದ್ದಿಲೋಕ ಹೊಸಪೇಟೆ (ವಿಜಯನಗರ)/ಕಲಬುರಗಿ

ಭ್ರಷ್ಟಾಚಾರ ಹಗರಣದಲ್ಲಿ ಇನ್ನೊಂದೆರಡು ವಿಕೆಟ್ ಪತನ ಹೇಳಿಕೆ ವಿಚಾರ ಬಿಜೆಪಿ-ಕಾಂಗ್ರೆಸ್ ಮಧ್ಯೆ ಮಾತಿನ ಜಟಾಪಟಿಗೆ ಕಾರಣವಾಗಿದೆ.
‘‘ವಾಲ್ಮೀಕಿ ನಿಗಮದ ಹಗರಣದಲ್ಲಿಈಗಾಗಲೇ ಒಂದು ವಿಕೆಟ್ ಪತನವಾಗಿದೆ. ಕೆಪಿಎಸ್ ಸಿ ಹಗರಣವನ್ನು ನಾವೇ ಮೊದಲು ಬಹಿರಂಗಪಡಿಸಿದ್ದೇವೆ. ಮುಂಬರುವ ದಿನಗಳಲ್ಲಿಕೆಪಿಎಸ್ ಸಿ ಹಗರಣದಲ್ಲಿಸಚಿವ ಪ್ರಿಯಾಂಕ್ ಖರ್ಗೆ ಅವರ ವಿಕೆಟ್ ಪತನಗೊಳ್ಳಲಿದೆ,’’ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ .ಅಶೋಕ್ ಹೊಸಪೇಟೆಯಲ್ಲಿಭವಿಷ್ಯ ನುಡಿದರು.

ಇದಕ್ಕೆ ಕಲಬುರಗಿಯಲ್ಲಿಸಚಿವ ಪ್ರಿಯಾಂಕ್ ಖರ್ಗೆ,‘‘ಕೆಪಿಎಸ್ ಸಿ ಹಗರಣದಲ್ಲಿಬಿಜೆಪಿ ಬೌಲರ್ ಗಳು ಹೇಗಿದ್ದಾರೆ ಎಂದರೆ ನಮಗೆ ಫುಲ್ ಟಾಸ್ ಹಾಕಿ ನೋಬಾಲ್ ಮಾಡುತ್ತಿದ್ದಾರೆ. ಆದ್ದ ರಿಂದ ಅಂಪೈರ್ ಯಾರೇ ಇದ್ದರೂ ವಿಕೆಟ್ ಮಾತ್ರ ಬೀಳೋದು ಬಿಜೆಪಿಗರದ್ದು,’’ ಎಂದು ತಿರುಗೇಟು ನೀಡಿದ್ದಾರೆ.