ಸತೀಶ್ ಕುಮಾರ್ ಪುಂಡಿಕಾಯಿ, ಕೊಣಾಜೆ್ಛಛಿಛಿdಚಿa್ಚkvkಞ್ಞಜಃಜಞaಜ್ಝಿ.್ಚಟಞ
ಒಂದು ಕಾಲದಲ್ಲಿಸ್ವಚ್ಛತೆ ಹಾಗೂ ತ್ಯಾಜ್ಯಮುಕ್ತ ಗ್ರಾಮಕ್ಕೆ ಮಾದರಿಯಾಗಿದ್ದ ಇರಾ, ಮೂರು ರಾಷ್ಟ್ರೀಯ ಪ್ರಶಸ್ತಿ, ರಾಜ್ಯದ ನೈರ್ಮಲ್ಯರತ್ನ ಸೇರಿದಂತೆ ಹಲವು ಪುರಸ್ಕಾರಗಳನ್ನು ಮುಡಿಗೇರಿಸಿಕೊಂಡಿತ್ತು. ಗ್ರಾಮದ ಸಾಧನೆ ಅಧ್ಯಯನಕ್ಕೆ ದೇಶದ ವಿವಿಧ ರಾಜ್ಯಗಳ ಪ್ರತಿನಿಧಿಗಳಷ್ಟೇ ಅಲ್ಲದೆ ಕೀನ್ಯ, ಜಾಂಬಿಯಾ, ಜಿಂಬಾಬ್ವೆ, ಮೊಝಾಂಬಿಕ್ , ಸುಡಾನ್ , ನೈಜೀರಿಯಾ, ಇಂಡೋನೇಷ್ಯಾ ಹಾಗೂ ಅಫ್ಘಾನಿಸ್ತಾನದ ಪ್ರತಿನಿಧಿಗಳೂ ಭೇಟಿ ನೀಡಿದ್ದರು. ಆದರೆ ಇಂದು ಗ್ರಾಮದ ಜಂಕ್ಷನ್ ಗಳತ್ತ ಕಣ್ಣಾಡಿಸಿದರೆ ಆ ಗತವೈಭವ ಮಸುಕಾಗುತ್ತಿರುವುದು ಗೋಚರಿಸುತ್ತದೆ.
ಎರಡು ದಶಕಗಳ ಹಿಂದೆ ತ್ಯಾಜ್ಯ ಸಂಗ್ರಹಕ್ಕೆ ನಿರ್ಮಿಸಿದ್ದ ಬೃಹತ್ ವೃತ್ತಾಕಾರದ ತೊಟ್ಟಿ ಮಾಯವಾಗಿದ್ದು, ಅದರ ಜಾಗದಲ್ಲಿಪ್ರಯಾಣಿಕರ ತಂಗುದಾಣ ನಿರ್ಮಾಣವಾಗಿದೆ. ಆಚೆಬೈಲಿನಲ್ಲಿತ್ಯಾಜ್ಯ ಘಟಕಕ್ಕೆ ಅನುದಾನ ಮಂಜೂರಾಗಿದ್ದರೂ ಸ್ಥಳದ ವಿವಾದ ಕೋರ್ಟ್ ಮೆಟ್ಟಿಲೇರಿರುವುದರಿಂದ ಕಾಮಗಾರಿ ಆರಂಭವಾಗಿಲ್ಲ. ಪಂಚಾಯಿತಿಯ ವಾರ್ಷಿಕ ಕಂದಾಯ ಆದಾಯ ಸುಮಾರು 20 ಲಕ್ಷವಾದರೆ, ಮೆಸ್ಕಾಂಗೆ 1 ಕೋಟಿ ರೂ. ಬಾಕಿಯಿದೆ.
ಇರಾ ಸ್ವಚ್ಛತೆಯ ಹಿಂದಿನ ಪ್ರಮುಖ ರೂವಾರಿ, ಅಂದಿನ ಕಾರ್ಯದರ್ಶಿ ಚಂದ್ರಶೇಖರ್ ಪಾತೂರು ಅವರ ಸೇವೆಯನ್ನು ಗ್ರಾಮಸ್ಥರು ಇಂದಿಗೂ ಸ್ಮರಿಸುತ್ತಾರೆ. ಇದೀಗ ಆ ಪರಂಪರೆ ಉಳಿಸುವ ಹೊಣೆ ಗ್ರಾಮಸ್ಥರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮೇಲಿದೆ.
ಶೈಕ್ಷಣಿಕವಾಗಿ ಪಂಚಾಯಿತಿಗೆ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಶಾಲೆ ಮಂಜೂರಾಗಿದ್ದು, 7 ಕೋಟಿ ವೆಚ್ಚದಲ್ಲಿ1.5 ಎಕರೆ ಪ್ರದೇಶದಲ್ಲಿನಿರ್ಮಾಣವಾಗಲಿದೆ. ಇರಾ ಪ್ರಾಥಮಿಕ ಶಾಲೆ ಕೆಪಿಎಸ್ ಆಗಿ ಮೇಲ್ದರ್ಜೆಗೇರಿದೆ.
**
ಬೇಡಿಕೆಗಳು:
*14 ಖಾಸಗಿ ಬಸ್ ಗಳ ನಡುವೆ ಕೇವಲ ಒಂದು ಸರಕಾರಿ ಬಸ್ ಇದ್ದು, ಹೆಚ್ಚಿನ ಸರಕಾರಿ ಬಸ್ ಸಂಪರ್ಕ ಅಗತ್ಯ.
* ಪರ್ಲತಡ್ಕ, ಮುಂಡಾಡಿ ಹಾಗೂ ಕಂಚಿನಡ್ಕದ ಕಾಲೊನಿಗಳ ಅಭಿವೃದ್ಧಿಗೆ ಅನುದಾನ ಬೇಕಿದೆ.
*ಕಂಡತಟ್ಟುವಿನಲ್ಲಿಗುರುತಿಸಿರುವ 12 ಎಕರೆ ಜಾಗದಲ್ಲಿನಿವೇಶನರಹಿತರಿಗೆ ಮನೆ ನಿರ್ಮಿಸುವ ಬೇಡಿಕೆಯೂ ಇದೆ.
**
ಅಂಕಿ-ಅಂಶ: 6 ವಾರ್ಡ್ | 19 ಸದಸ್ಯರು | 11,052 ಜನಸಂಖ್ಯೆ | 2,098 ಮನೆಗಳು | 12 ಅಂಗನವಾಡಿ | 4 ಪ್ರಾಥಮಿಕ ಶಾಲೆ | 1 ಆರೋಗ್ಯ ಕೇಂದ್ರ | 1 ರಾಷ್ಟ್ರೀಕೃತ ಬ್ಯಾಂಕ್ | 1 ಗ್ರಂಥಾಲಯ.
ಕೋಟ್ ..
ಬಿ. ಸಿ. ರೋಡ್ -ಇರಾ ಮೂಲೆ -ಬಾಳೆಪುಣಿ ಕೂಡುರಸ್ತೆ- ಸಾಲೆತ್ತೂರು-ವಿಟ್ಲ- ಮಂಗಳೂರು ಹಾಗೂ ಬಿ. ಸಿ. ರೋಡ್ - ಕಂಚಿನಡ್ಕ -ಇರಾ- ಮುಳೂರು-ಮುಡಿಪು- ಮಂಗಳೂರು ಮಾರ್ಗದಲ್ಲಿಕನಿಷ್ಠ ಎರಡು ಸರಕಾರಿ ಬಸ್ ಸಂಪರ್ಕ ಆದರೆ ಬಹಳಷ್ಟು ಪ್ರಯೋಜನ ಆಗುತ್ತಿತ್ತು.
-ಮೊಯಿದ್ದೀನ್ ಕುಂಞಿ, ಮಾಜಿ ಉಪಾಧ್ಯಕ್ಷರು
ಕೋಟ್
ಆಡಳಿತದಲ್ಲಿರಾಜಕೀಯವಾಗಿ ಮೇಲುಗೈ ಸಾಧಿಸುವ ಭರದಲ್ಲಿಗ್ರಾಮವನ್ನು ಅಭಿವೃದ್ಧಿ ಗೊಳಿಸುವುದಾಗಲೀ ಹೆಸರು ತಂದು ಕೊಟ್ಟ ಸ್ವಚ್ಛತೆ ಕಾಪಾಡುವಲ್ಲಿವಿಫಲರಾಗಿದ್ದಾರೆ. ಆಡಳಿತ ಹಾಗೂ ಅಧಿಕಾರಿಗಳು ಸಮರ್ಥವಾಗಿದ್ದರೆ ಜತೆಯಾಗಿ ನಡೆದರೆ ಇರಾ ಗತವೈಭವ ಸಾರಲು ಸಾಧ್ಯ.
-ರಾಮ್ ಇರಾ ಫೋಟೋ ಸೆಂಟರ್ ಇರಾ
ಕೋಟ್
ಘಟಕ ನಿರ್ವಹಣೆಗೆ ಸ್ಥಳ ಮಂಜೂರಾಗಿದೆ. ಅಲ್ಲಿಅನುದಾನ ಮಂಜೂರು ಆಗಿ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಕಾಮಗಾರಿ ಆರಂಭಿಸಲು ಹೋದಾಗ ಖಾಸಗಿ ವ್ಯಕ್ತಿ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಪೊಲೀಸ್ ಠಾಣೆಯಲ್ಲಿಸರಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ದೂರು ದಾಖಲಾಗಿದೆ. ಖಾಸಗಿ ವ್ಯಕ್ತಿ ವ್ಯಾಜ್ಯ ಸಲ್ಲಿಸಿದ್ದು ಪ್ರಕರಣ ಕೋರ್ಟಿನಲ್ಲಿದೆ.
-ಮಹಮ್ಮದ್ ರಿಯಾಜ್ , ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಪೊಟೊ 20ಉಳ್ಳಾಲ್ ಇರಾ( ಗ್ರಾಮ ಪಂಚಾಯಿತಿ ಕಚೇರಿ), ಮೊಯ್ದಿನ್ , ರಾಮ…, ರಿಯಾಝ…, ಬಸ್ ಸ್ಟಾಂಡ್ (ಸರ್ಕಲ್ ರೂಪದ ಬೃಹತ್ ತೊಟ್ಟಿ ಮಾಯವಾಗಿ ಇಂದು ಅಲ್ಲಿಪ್ರಯಾಣಿಕರ ತಂಗುದಾಣ) ನಿರ್ಮಾಣವಾಗಿದೆ.