ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘವು 24ನೇ ವರ್ಷವನ್ನು ಯಶಸ್ವಿಯಾಗಿ ಪೂರೈಸಿ 25ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಹಿನ್ನೆಲೆಯಲ್ಲಿನೆಲ್ಯಾಡಿ ಶಾಖೆಯಲ್ಲಿಬುಧವಾರ ಸ್ಥಾಪನಾ ದಿನಾಚರಣೆ ನಡೆಯಿತು.ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನಿರ್ದೇಶಕ ಹಾಗೂ ಸಲಹಾ ಸಮಿತಿ ಅಧ್ಯಕ್ಷ ಪ್ರವೀಣ್ ಕುಂಟ್ಯಾಣ ಉದ್ಘಾಟಿಸಿ ಮಾತನಾಡಿ, ಸಂಘವು ಸಮಾಜ ಬಾಂಧವರು, ನಿರ್ದೇಶಕರು, ಸಲಹಾ ಸಮಿತಿ ಹಾಗೂ ಸಿಬ್ಬಂದಿಯ ಉತ್ತಮ ಸಹಕಾರದೊಂದಿಗೆ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದು, ಉತ್ತಮ ಲಾಭದೊಂದಿಗೆ ಪ್ರಗತಿಯತ್ತ ಮುನ್ನಡೆಯುತ್ತಿದೆ. ಸಂಘದ ಬೆಳವಣಿಗೆಯಲ್ಲಿಸದಸ್ಯರು ಹಾಗೂ ಗ್ರಾಹಕರ ಸಹಕಾರ ಮಹತ್ವದ್ದಾಗಿದೆ ಎಂದು ಹೇಳಿದರು.
ಸಲಹಾ ಸಮಿತಿ ಉಪಾಧ್ಯಕ್ಷೆ ಸುಪ್ರೀತಾ ರವಿಚಂದ್ರ,ಸದಸ್ಯರಾದ ನಾಗೇಶ್ ನಳಿಯಾರ್ , ಸುಂದರ ಗೌಡ ಅತ್ರಿಜಾಲು, ರಾಧಾಕೃಷ್ಣ ಕೇರ್ನಡ್ಕ, ತುಕ್ರಪ್ಪ ಗೌಡ ಗೂಳಿತೊಟ್ಟು, ನೋಣಯ್ಯ ಗೌಡ ಡೆಬ್ಬಲಿ, ಡೊಂಬಯ್ಯ ಗೌಡ ಶಿರಾಡಿ, ಸುರೇಶ್ ಪಡಿಪಂಡ, ಸುಲತಾ ಮೋಹನ್ ಚಂದ್ರ, ಕಚೇರಿ ವ್ಯವಸ್ಥಾಪಕಿ ತೇಜಸ್ವಿನಿ, ಸಿಬ್ಬಂದಿ ವಿಜಯಕುಮಾರ್ ಎಂ., ಅಜಿತ್ ಬಿ.ಕೆ., ಪಿಗ್ಮಿ ಸಂಗ್ರಾಹಕರಾದ ಶಿವಪ್ರಸಾದ್ , ತೀರ್ಥೇಶ್ವರ ಹಾಗೂ ಪವನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಫೋಟೋ :03ಕೆಎನ್ ಪ್ರವೀಣ
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನಿರ್ದೇಶಕ ಪ್ರವೀಣ್ ಕುಂಟ್ಯಾಣ ಉದ್ಘಾಟಿಸಿದರು.