ಇಂದು ಬಳಸಿ........

Contributed byshivusidnal@gmail.com|Vijaya Karnataka
anganwadi recruitment protest villagers demonstration
ನೇರ ನೇಮಕ ಅಲ್ಲ

ಮಹಾಲಿಂಗಪುರ: ಸಮೀಪದ ಸಂಗಾನಟ್ಟಿ ಗ್ರಾಮದ ಅಂಗನವಾಡಿಗೆ ಬೇರೆ ಊರಿನ ಕಾರ್ಯಕರ್ತೆಯನ್ನು ನೇರ ನೇಮಕ ಮಾಡಿಲ್ಲ. ಬದಲಾಗಿ ಕಾನೂನು ಪ್ರಕಾರ ಮುಂಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದೆ ಎಂದು ಎಂದು ಸಿಡಿಪಿಒ ಶಂಕರಮೂರ್ತಿ ತಿಳಿಸಿದ್ದಾರೆ.
ಸಮೀಪದ ಸಂಗಾನಟ್ಟಿ ಗ್ರಾಮದ ಅಂಗನವಾಡಿಗೆ ಬೇರೆ ಊರಿನ ಕಾರ್ಯಕರ್ತೆಯ ನೇಮಕ ವಿರೋಧಿಸಿ ಗ್ರಾಮಸ್ಥರು ಕೇಂದ್ರಕ್ಕೆ ಬೀಗ ಹಾಕಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ನೇರ ನೇಮಕಾತಿಗೆ ಮಾತ್ರ ಸ್ಥಳೀಯ ಅಭ್ಯರ್ಥಿಯೇ ಇರಬೇಕು ಎಂಬ ನಿಯಮವಿದೆ. ಆದರೆ 3 ಕಿಮೀ ವ್ಯಾಪ್ತಿಯ ಯಾವುದೇ ಊರಿಗೆ ಮುಂಬಡ್ತಿ ನೀಡಿ ವರ್ಗಾವಣೆಗೊಳಿಸಲು ಅವಕಾಶವಿದೆ. ಹೀಗಾಗಿ ಮದಭಾವಿ ಗ್ರಾಮದ ಸಹಾಯಕಿಗೆ ಮುಂಬಡ್ತಿ ನೀಡಿ ಸಂಗಾನಟ್ಟಿ ಅಂಗನವಾಡಿ ಕೇಂದ್ರಕ್ಕೆ ವರ್ಗಾಯಿಸಲಾಗಿದೆ. ಈ ಬಗ್ಗೆ ಗ್ರಾಮಸ್ಥರಿಗೂ ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.