ಎಚ್ ಐವಿ ಸೇರಿದಂತೆ ಇತರೆ ಸಾಂಕ್ರಾಮಿಕ ಹಾಗೂ ಜೀವನಶೈಲಿ ಸಂಬಂಧಿತ ಕಾಯಿಲೆಗಳ ಕುರಿತು ಸಾರ್ವಜನಿಕರಲ್ಲಿಜಾಗೃತಿ ಮೂಡಿಸುವ ಕಾರ ್ಯಕ್ರಮಗಳು, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿವೆ. ಎಚ್ ಐವಿ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿಪ್ರತಿಯೊಬ್ಬರೂ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ವಹಿಸುವುದು ಅತ್ಯಂತ ಮುಖ್ಯ ಎಂದು ಎಂದು ಡಾ.ಅಕ್ಷತಾ ಹೇಳಿದರು.ಪಟ್ಟಣದ ರೈಲ್ವೆ ನಿಲ್ದಾಣದಲ್ಲಿಏರ್ಪಡಿಸಿದ್ದ ಎಚ್ ಐವಿ ಕುರಿತು ಜಾಗೃತಿ ಕಾರ ್ಯಕ್ರಮದಲ್ಲಿಮಾತನಾಡಿದರು.
‘‘ಎಚ್ ಐವಿ ಸೋಂಕಿನ ಹರಡುವಿಕೆ, ತಡೆಗಟ್ಟುವ ವಿಧಾನಗಳು ಹಾಗೂ ಸೋಂಕಿನ ಬಗ್ಗೆ ಸಾರ್ವಜನಿಕರಲ್ಲಿಇರುವ ತಪ್ಪು ಕಲ್ಪನೆಗಳನ್ನು ನಿವಾರಿಸುವ ಕುರಿತು ಮಾಹಿತಿ ನೀಡಿದರು. ಇದರೊಂದಿಗೆ ರಕ್ತದೊತ್ತಡ, ಮಧುಮೇಹ, ಸಿಫಿಲಿಸ್ ಹಾಗೂ ಎಚ್ ಬಿಎಸ್ ಏಜಿ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳ ಕುರಿತು ಅರಿವು ಮೂಡಿಸಿದರು.
ಆಪ್ತ ಸಮಾಲೋಚಕಿ ಉಷಾ ಮಾತನಾಡಿ,‘‘ಸಾರ್ವಜನಿಕರು ಕ್ಯೂಆರ್ ಕೋಡ್ ಸ್ಕಾ್ಯನ್ ಮಾಡುವ ಮೂಲಕ ತಮ್ಮ ಎಚ್ ಐವಿ ಸ್ಥಿತಿಗತಿಯನ್ನು ತಿಳಿದುಕೊಳ್ಳಲು ಅವಕಾಶವಿದ್ದು, ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬಹುದು, ಈ ಸೋಂಕಿನ ಕುರಿತು ಯಾವುದೇ ಅನುಮಾನ ಅಥವಾ ಆತಂಕವಿದ್ದಲ್ಲಿಸೂಕ್ತ ತಪಾಸಣೆ ಹಾಗೂ ಆಪ್ತ ಸಮಾಲೋಚನೆ ಪಡೆಯಬೇಕು,’’ಎಂದು ಸಲಹೆ ನೀಡಿದರು.
ಎಲ್ಲರಿಗೂ ಉಚಿತ ಆರೋಗ್ಯ ತಪಾಸಣೆ ಸೌಲಭ್ಯ ಒದಗಿಸಲಾಗಿತ್ತು. ರಕ್ತದೊತ್ತಡ, ಮಧುಮೇಹ ಸೇರಿದಂತೆ ವಿವಿಧ ಆರೋಗ್ಯ ತಪಾಸಣೆಗಳನ್ನು ನಡೆಸಿ, ಅಗತ್ಯ ಆರೋಗ್ಯ ಸಲಹೆಗಳನ್ನು ನೀಡಲಾಯಿತು.
ಫೊಟೋ(ಊಓ1ಏ2)-ಸಕಲೇಶಪುರದ ರೈಲ್ವೆ ನಿಲ್ದಾಣದಲ್ಲಿನಡೆದ ಎಚ್ ಐವಿ ಹಾಗೂ ಇತರೆ ಸಾಂಕ್ರಾಮಿಕ ಸೋಂಕು ತಡೆಗಟ್ಟುವ ಬಗ್ಗೆ ಜಾಗೃತಿ ಮತ್ತು ಅರಿವು ಕಾರ ್ಯಕ್ರಮದಲ್ಲಿವೈದ್ಯರಾದ ಡಾ.ಅಕ್ಷತಾ, ಆಪ್ತ ಸಮಾಲೋಚಕಿ ಉಷಾ ಮಾಹಿತಿ ನೀಡಿದರು.