ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿಪ್ರಯಾಣಿಕರ ಅನುಭವವನ್ನು ಇನ್ನಷ್ಟು ಸುಗಮ, ಅನುಕೂಲಕರ ಮತ್ತು ವೈಯಕ್ತಿಕ ಅಗತ್ಯಗಳಿಗೆ ಹೊಂದುವಂತೆ ರೂಪಿಸಲು ಕೇರ್ ಬೈ ಬಿಎಲ್ ಆರ್ ಎಂಬ ವೈಯಕ್ತಿಕ ಪ್ರಯಾಣಿಕ ಸೇವೆಯನ್ನು ಪರಿಚಸಿದೆ ಎಂದು ವಿಮಾನ ನಿಲ್ದಾನದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಟರ್ಮಿನಲ್ 1 ಮತ್ತು ಟರ್ಮಿನಲ್ 2 ಎರಡರಲ್ಲಿಯೂ ಲಭ್ಯವಿರುವ ಈ ಸೇವೆಗಳು, ಪ್ರಯಾಣಿಕರ ಆಗಮನ, ನಿರ್ಗಮನ, ಟ್ರಾನ್ಸ್ ಫರ್ , ಬ್ಯಾಗೇಜ್ ನಿರ್ವಹಣೆ ಮತ್ತು ಇತರೆ ವೈಯಕ್ತಿಕ ಸೇವೆಗಳಂತಹ ಪ್ರಮುಖ ಹಂತಗಳನ್ನು ಒಳಗೊಂಡಿವೆ. ವಿಮಾನ ವೇಳಾಪಟ್ಟಿಗೆ ಅನುಗುಣವಾಗಿ ಈ ಸೇವೆಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತವೆ. ತರಬೇತಿ ಪಡೆದ ಗ್ರಾಹಕ ಸೇವಾ ಸಹಾಯಕರು ವಿಮಾನ ನಿಲ್ದಾಣದ ಪ್ರಮುಖ ಸಂಪರ್ಕ ಕೇಂದ್ರದ ಮೂಲಕ ಸಹಾಯವನ್ನು ಒದಗಿಸಲಿದ್ದಾರೆ.
ಕೇರ್ ಬೈ ಬಿಎಲ್ ಆರ್ ನೀಡುವ ಮೌಲ್ಯ: ವಿಮಾನ ನಿಲ್ದಾಣದ ಪ್ರಯಾಣವನ್ನು ಸರಳಗೊಳಿಸುವ ಮೂಲಕ ಪ್ರಯಾಣಿಕರಿಗೆ ಅಗತ್ಯ ಸೇವೆಗಳನ್ನು ಸುಲಭವಾಗಿ ಒದಗಿಸಲಾಗುತ್ತಿದೆ. ವೈಯಕ್ತಿಕ ಅನುಭವ ಪ್ರತಿಯೊಬ್ಬ ಪ್ರಯಾಣಿಕರ ಅಗತ್ಯ, ಆದ್ಯತೆ ಮತ್ತು ಪ್ರಯಾಣದ ಸಂದರ್ಭ ವಿಭಿನ್ನವಾಗಿರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು, ಅವರ ವಿಮಾನ ನಿಲ್ದಾಣದ ಅನುಭವವನ್ನು ತಮಗೆ ತಕ್ಕಂತೆ ರೂಪಿಸಿಕೊಳ್ಳಲು ಹೆಚ್ಚಿನ ಆಯ್ಕೆ ನೀಡುತ್ತದೆ.
ಕೇರ್ ಬೈಬಿಎಲ್ ಆರ್ ಲಾಂಜ್ ಟರ್ಮಿನಲ್ -1: ಪ್ರಯಾಣಿಕರು ಮತ್ತು ಪ್ರಯಾಣಿಸದ ಅತಿಥಿಗಳಿಗಾಗಿ ಆರಾಮದಾಯಕ ಸ್ಥಳವನ್ನು ಒದಗಿಸುವ ಈ ಲಾಂಚ್ ನಲ್ಲಿರಿಫ್ರೆಶ್ ಮೆಂಟ್ ಮತ್ತು ವ್ಯವಹಾರ ಚರ್ಚೆಗಳಿಗಾಗಿ ಮೀಸಲಾದ ಸಭಾ ಕೊಠಡಿ ಲಭ್ಯವಿರುತ್ತದೆ. ವ್ಯಾಲೆಟ್ ಪಾಕಿಂರ್ ಗ್ ತಂತ್ರಜ್ಞಾನ ಆಧಾರಿತ ಕರ್ಬ್ ಸೈಡ್ ಸೇವೆಯಾದ ವ್ಯಾಲೆಟ್ ಪಾಕಿಂರ್ ಗ್ ಮೂಲಕ, ಪ್ರಯಾಣಿಕರು ತಮ್ಮ ವಾಹನವನ್ನು ಹಸ್ತಾಂತರಿಸಿ ನೇರವಾಗಿ ಟರ್ಮಿನಲ್ ಗೆ ತೆರಳಬಹುದು.
ವೃತ್ತಿಪರವಾಗಿ ತರಬೇತಿ ಪಡೆದ ಮತ್ತು ಸಮವಸ್ತ್ರಧಾರಿ ಕೇರ್ ಬೈ ಬಿಎಲ್ ಆರ್ ಪೋರ್ಟರ್ ಗಳು, ಆಗಮನ ಮತ್ತು ನಿರ್ಗಮನದ ಪ್ರಮುಖ ಹಂತಗಳಲ್ಲಿಬ್ಯಾಗೇಜ್ ನಿರ್ವಹಣೆಗೆ ಸಹಾಯ ಒದಗಿಸುತ್ತಾರೆ. ಹಾಗೂ ಪ್ರಮುಖ ಪ್ರಯಾಣಿಕರಿಗಾಗಿ ವಿಮಾನ ಮತ್ತು ಟರ್ಮಿನಲ್ ಪ್ರದೇಶಗಳ ನಡುವೆ ಪ್ರೀಮಿಯಂ ಹಾಗೂ ಸಂಯೋಜಿತ ಚಲನವಲನವನ್ನು ಒದಗಿಸುವ ಸೇವೆಯಾಗಿದೆ. ಇದು ವಿಐಪಿ, ವಿವಿಐಪಿ, ವ್ಯವಹಾರ, ಸೆಲೆಬ್ರಿಟಿ ಮತ್ತು ವಿಶೇಷ ಸಹಾಯ ಅಗತ್ಯವಿರುವ ಪ್ರಯಾಣಗಳಿಗೆ ವಿನ್ಯಾಸಗೊಳಿಸಲ್ಪಟ್ಟಿದ್ದು, ಕಾರ್ಯಾಚರಣಾ ಮತ್ತು ಸುರಕ್ಷತಾ ಅಗತ್ಯಗಳ ಆಧಾರದ ಮೇಲೆ ಲಭ್ಯವಿರುತ್ತದೆ. ಕೇರ್ ಬೈ ಬಿಎಲ್ ಆರ್ ಅಡಿಯಲ್ಲಿಪ್ರಸ್ತುತ 10 ಸೇವೆಗಳು ಕಾರ್ಯಾಚರಣೆಯಲ್ಲಿವೆ. ಪ್ರಯಾಣಿಕರ ಬದಲಾಗುತ್ತಿರುವ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಸೇವೆ ವಿಸ್ತರಣೆ ಹೊಂದಲಿದೆ ವಿಮಾನ ನಿಲ್ದಾಣದ ತಿಳಿಸಿದ್ದಾರೆ.
ಚಿತ್ರಸುದ್ದಿ: 3 ದೇವನಹಳ್ಳಿ ಪೊ-4: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಕೇರ್ ಬೈ ಸೇವೆಗೆ ಚಾಲನೆ.