(( ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ವಿ. ಸತೀಶ್ ಗೌಡ ಹೇಳಿಕೆ))ಸೂಲಿಬೆಲೆ: ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘವು ರೈತರು, ಗ್ರಾಹಕರ ಹಿತಕ್ಕಾಗಿ ಯೋಜನೆಗಳನ್ನು ರೂಪಿಸುತ್ತಿದೆ. ಜನಪರ ಯೋಜನೆಗಳೇ ನಮ್ಮ ಮುಖ್ಯ ಗುರಿಯಾಗಿದೆ ಎಂದು ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ವಿ. ಸತೀಶ್ ಗೌಡ ತಿಳಿಸಿದರು.
ಸೂಲಿಬೆಲೆ ಹೋಬಳಿ ಬೆಂಡಿಗಾನಹಳ್ಳಿಯಲ್ಲಿಸಹಕಾರ ಬ್ಯಾಂಕ್ ಸಿಬ್ಬಂದಿ ಹಮ್ಮಿಕೊಂಡಿದ್ದ ಅಭಿನಂದನ ಕಾರ ್ಯಕ್ರಮದಲ್ಲಿಅವರು ಮಾತನಾಡಿದರು.
ಸಹಕಾರ ಸಂಘದ ಮೇಲೆ ಗ್ರಾಹಕರು, ರೈತರು, ಸಾಮಾನ್ಯ ಜನರು ವಿಶ್ವಾಸವಿಟ್ಟು ಅಭಿವೃದ್ಧಿಗೆ ಕೈಜೋಡಿಸಿದ್ದಾರೆ. ಜಿಲ್ಲೆಯಲ್ಲಿಅತ್ಯುತ್ತಮ ಸಹಕಾರ ಬ್ಯಾಂಕ್ ಎಂಬ ಹೆಸರು ಪಡೆದುಕೊಂಡಿದೆ. ಇದಕ್ಕೆ ಗ್ರಾಹಕರು ವಿಶ್ವಾಸ, ನಂಬಿಕೆ ಕಾರಣ. ಅವರ ವಿಶ್ವಾಸಕ್ಕೆ ಅನುಗುಣವಾಗಿ ಆಡಳಿತ ಮಂಡಳಿ ಕೆಲಸ ಮಾಡಲಿದೆ. ಷೇರುದಾರರ ಸಹಕಾರ ಪ್ರೋತ್ಸಾಹದಿಂದ ಮತ್ತಷ್ಟು ಪ್ರಗತಿಯನ್ನು ಸಾಧಿಸಲು ಶಕ್ತಿ ಮೀರಿ ದುಡಿಯುತ್ತೇವೆ. ಸಿಬ್ಬಂದಿಯ ಜವಾಬ್ದಾರಿಯುತ ಕೆಲಸದಿಂದ ಬ್ಯಾಂಕ್ ಲಾಭಾಂಶದಲ್ಲಿನಡೆಯಲು ಸಾಧ್ಯವಾಗಲಿದೆ ಎಂದರು.
ಬ್ಯಾಂಕ್ ಸಿಇಒ ಎಸ್ .ಕೆ.ವಸಂತ್ ಕುಮಾರ್ , ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಿನ್ಸಿಪಾಲ್ ವೆಂಕಟೇಶ್ , ಬ್ಯಾಂಕ್ ಸಿಬ್ಬಂದಿ, ಆಡಳಿತ ಮಂಡಳಿ ನಿರ್ದೇಶಕರು ಹಾಜರಿದ್ದರು.
ಚಿತ್ರ-3 ಸೂಲಿಬೆಲೆ 2
ಸೂಲಿಬೆಲೆ ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ವಿ. ಸತೀಶ್ ಗೌಡ ಅವರನ್ನು ಬ್ಯಾಂಕ್ ಸಿಬ್ಬಂದಿ ಸನ್ಮಾನಿಸಿದರು.