ಎಲ್ಲರಿಗೂ ನೇತ್ರದಾನದ ಅರಿವು ಅಗತ್ಯ

Contributed byvkkonanur@gmail.com|Vijaya Karnataka
donate eyes now why bringing light is important
ಕೊಣನೂರು ಪಟ್ಟಣದಲ್ಲಿಜಾಗೃತಿ ಜಾಥಾ

ವಿಕ ಸುದ್ದಿಲೋಕ ಕೊಣನೂರು
ನೇತ್ರದಾನ ನೀವು ಮಾಡಬಹುದಾದ ಅತ್ಯಂತ ಶ್ರೇಷ್ಠದಾನ ಹಾಗೂ ಮಾನವೀಯ ಸೇವೆ. ಒಬ್ಬರ ನೇತ್ರದಾನದಿಂದ ಇಬ್ಬರು ಅಂಧರಿಗೆ ಬೆಳಕು ನೀಡಿದಂತಾಗುತ್ತದೆ. ನೇತ್ರದಾನದಿಂದ ದೃಷ್ಟಿ ಹೀನರಿಗೆ ದೃಷ್ಟಿ ದೊರೆಯುವ ಸಾಧ್ಯತೆ ಇರುವುದರಿಂದ ಪ್ರತಿಯೊಬ್ಬರೂ ನೇತ್ರದಾನದ ಕುರಿತು ಅರಿವು ಹೊಂದಬೇಕು ಎಂದು ಕೊಣನೂರು ಸಮುದಾಯ ಆರೋಗ್ಯ ಕೇಂದ್ರದ ನೇತ್ರಾಧಿಕಾರಿ ಶಶಿಕುಮಾರ್ ತಿಳಿಸಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಅಂಧತ್ವ ನಿಯಂತ್ರಣ ವಿಭಾಗದ ವತಿಯಿಂದ 41ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಅಂಗವಾಗಿ ನೇತ್ರದಾನ ಕುರಿತು ಹಮ್ಮಿಕೊಂಡಿದ್ದ ಜಾಗೃತಿ ಜಾಥಾದಲ್ಲಿಮಾತನಾಡಿದರು.

‘‘ನೇತ್ರದಾನಕ್ಕೆ ಸಂಬಂಧಿಸಿದಂತೆ ಸಮಾಜದಲ್ಲಿಇರುವ ತಪ್ಪು ಕಲ್ಪನೆಗಳನ್ನು ದೂರ ಮಾಡಿ, ಹೆಚ್ಚಿನ ಸಂಖ್ಯೆಯಲ್ಲಿಜನರು ನೇತ್ರದಾನಕ್ಕೆ ಮುಂದೆ ಬರಬೇಕು. ನೇತ್ರದಾನವು ಕೇವಲ ದಾನವಲ್ಲ, ದೃಷ್ಟಿ ಹೀನರ ಬದುಕಿಗೆ ಬೆಳಕು ನೀಡುವ ಮಹಾದಾನವಾಗಿದ್ದು, ಈ ಕುರಿತು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತಮ್ಮ ಕುಟುಂಬ ಮತ್ತು ಸುತ್ತಮುತ್ತಲಿನ ಜನರಲ್ಲಿಜಾಗೃತಿ ಮೂಡಿಸಬೇಕು,’’ಎಂದು ಹೇಳಿದರು.

‘‘ನೇತ್ರ ಸಂಗ್ರಹಣೆಗೆ ಕೇವಲ 20 ನಿಮಿಷ. ನೇತ್ರ ಸಂಗ್ರಹಿಸುವುದು ತ್ವರಿತ ಮತ್ತು ಸುಲಭ. ಸಂಗ್ರಹಿಸಿದ ನಂತರ ಮೃತರ ಮುಖದಲ್ಲಿಯಾವುದೇ ಬದಲಾವಣೆ ಆಗುವುದಿಲ್ಲ. ಮರಣದ ನಂತರ ನೇತ್ರಗಳನ್ನು ಕೇವಲ 6 ಗಂಟೆಯೊಳಗೆ ಮಾತ್ರ ಸಂಗ್ರಹಿಸಬಹುದು. ಸೇವೆ ಸಂಪೂರ್ಣ ಉಚಿತ. ಮರಣಾನಂತರ ನೇತ್ರದಾನ ಮಾಡಲು ಮೃತರ ಸಂಬಂಧಿಕರು ತಕ್ಷಣವೇ ಹತ್ತಿರದ ಸರಕಾರಿ ಜಿಲ್ಲಾಆಸ್ಪತ್ರೆ ಅಥವಾ ನೇತ್ರ ಬ್ಯಾಂಕ್ , ಸಂಗ್ರಹಣಾ ಕೇಂದ್ರದ ದೂರವಾಣಿ 99008 60044ಕ್ಕೆ ಕರೆ ಮಾಡಿ. ನಿಮ್ಮ ಕಣ್ಣು ಅತಿ ಶ್ರೇಷ್ಟ. ನಿಮ್ಮ ಆರೋಗ್ಯ, ನಮ್ಮ ಆದ್ಯತೆ,’’ಎಂದರು.

ಬಿಎಸ್ ಎಸ್ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿಸಂಚರಿಸಿ, ನೇತ್ರದಾನ ಮಹಾದಾನ, ನೇತ್ರದಾನ ಮಾಡಿ, ಮತ್ತೊಬ್ಬರ ಬದುಕಿಗೆ ಬೆಳಕಾಗಿ ಸೇರಿದಂತೆ ವಿವಿಧ ಘೋಷಣೆ ಕೂಗುವ ಮೂಲಕ ಸಾರ್ವಜನಿಕರಲ್ಲಿನೇತ್ರದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಿದರು.

ಕಾರ ್ಯಕ್ರಮದಲ್ಲಿಶಾಲೆಯ ಮುಖ್ಯ ಶಿಕ್ಷಕರು, ಹಿರಿಯ ಆರೋಗ್ಯ ಸಹಾಯಕ ಮಹೇಶ್ , ಆರೋಗ್ಯ ಇಲಾಖೆ ಸಿಬ್ಬಂದಿ, ಬಿಎಸ್ ಎಸ್ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಏಖN1ಓN್ಕ1-2 ಧಿ ಕೊಣನೂರಿನ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ 41ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಅಂಗವಾಗಿ ನೇತ್ರದಾನ ಕುರಿತು ಜಾಗೃತಿ ಜಾಥಾ ನಡೆಯಿತು.