ವಿಕ ಸುದ್ದಿಲೋಕ ಗದಗ ವಿಶೇಷಚೇತನ ಮಕ್ಕಳು ಜೀವನದಲ್ಲಿಉತ್ತಮ ಸಾಧನೆ ಮಾಡಬಲ್ಲರು. ಅವರಿಗೆ ಪ್ರೋತ್ಸಾಹ ಹಾಗೂ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಮುಖ್ಯವಾಹಿನಿಗೆ ತರಲು ಪಾಲಕರು ಹಾಗೂ ಸಮಾಜ ಒಟ್ಟಾಗಿ ಶ್ರಮಿಸಬೇಕು ಎಂದು ಗದಗ-ಬೆಟಗೇರಿ ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಮಂಜುಳಾ ಅಕ್ಕಿ ಹೇಳಿದರು.
ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವ್ಯಾಪ್ತಿಯ ವಿಶೇಷ ಮಕ್ಕಳ ಸರಕಾರಿ ಶಾಲೆ ನಂ.4ರಲ್ಲಿಗುರುವಾರ ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ನಡೆದ ವಿಶೇಷ ಮಕ್ಕಳ ಪಾಲಕ-ಪೋಷಕರ ಸಭೆ ಉದ್ಘಾಟಿಸಿ ಮಾತನಾಡಿದರು.
ವಿಶೇಷ ಮಕ್ಕಳ ಪಾಲಕರು ತ್ಯಾಗ ಹಾಗೂ ಸಹನೆಯಿಂದ ಮಕ್ಕಳನ್ನು ಆರೈಕೆ ಮಾಡುತ್ತಿದ್ದಾರೆ. ಮಕ್ಕಳಿಗೆ ಅಗತ್ಯ ಜೀವನ ಕೌಶಲಗಳನ್ನು ಕಲಿಸಿ ಸ್ವಾವಲಂಬಿಗಳನ್ನಾಗಿ ಮಾಡುವತ್ತ ಪಾಲಕರು ಗಮನಹರಿಸಬೇಕು ಎಂದರು.
ಕ್ಲಬ್ ಕಾರ್ಯದರ್ಶಿ ಪೂಜಾ ಭೂಮಾ ಮಾತನಾಡಿ, ಮಕ್ಕಳು ತಮ್ಮ ವೈಯಕ್ತಿಕ ಕೆಲಸಗಳನ್ನು ಸ್ವತಃ ಮಾಡಿಕೊಳ್ಳುವಂತೆ ಹಂತ ಹಂತವಾಗಿ ತರಬೇತಿ ನೀಡಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಸಿಪಿಸಿಸಿ ಜಯಶ್ರೀ ಉಗಲಾಟ, ಸಹಕಾರ್ಯದರ್ಶಿ ಪುಷ್ಪಾ ಬಂಡಾರಿ ಮಾತನಾಡಿದರು. ಕ್ಷೇತ್ರ ಸಮನ್ವಯಾಧಿಕಾರಿ ಎಸ್ .ಪಿ.ಪ್ರಭಯ್ಯನಮಠ ಅಧ್ಯಕ್ಷತೆ ವಹಿಸಿದ್ದರು.
ಕವಿತಾ ದಂಡಿನ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಇ.ಡಿ.ಹುಗ್ಗೇನವರ ನಿರೂಪಿಸಿದರು. ಪವಿತ್ರಾ ಬಿರಾದಾರ ವಂದಿಸಿದರು. ಶಶಿಧರ ಚಳಗೇರಿ, ಕಟಗಿ, ನವ್ಯಾ ಚಳಗೇರಿ, ಸುನೀತಾ ತಿಮ್ಮನಗೌಡ್ರ, ಪಾಲಕರು, ಪೋಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.
ಫೋಟೊ: 3 ಜಿಡಿಜಿ 5:
ಸಭೆಯಲ್ಲಿಗದಗ-ಬೆಟಗೇರಿ ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಮಂಜುಳಾ ಅಕ್ಕಿ ಮಾತನಾಡಿದರು.