ವಿಕ ಸುದ್ದಿಲೋಕ ಹುನಗುಂದ‘‘ವಿಳಂಬ ಮಾಡದೆ ಹುನಗುಂದ ತಾಲೂಕನ್ನು ಬರಪೀಡಿತ ಎಂದು ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು,’’ ಎಂದು ಗಚ್ಚಿನಮಠದ ಅಮರೇಶ್ವರ ದೇವರು ಆಗ್ರಹಿಸಿದರು.
ಪಟ್ಟಣದ ಸಂಗಮೇಶ್ವರ ಮಂಗಲಭವನದಲ್ಲಿಹುನಗುಂದ ತಾಲೂಕು ಬರ ಪಟ್ಟಿಯಲ್ಲಿಸೇರಿಸುವಂತೆ ಮತ್ತು ಬೆಳೆ ನಷ್ಟ ಪರಿಹಾರ ನೀಡಲು ಆಗ್ರಹಿಸಿ ಕೈಗೊಳ್ಳಲಿರುವ ಹೋರಾಟದ ಪೂರ್ವ ಸಿದ್ಧತೆ ಸಭೆಯಲ್ಲಿಅವರು ಮಾತನಾಡಿದರು.
ಮಳೆ ಕೊರತೆಯಿಂದ ಬೆಳೆಗಳು ಒಣಗುತ್ತಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹುನಗುಂದ ತಾಲೂಕನ್ನು ಬರಪೀಡಿತ ಎಂದು ಘೋಷಿಸುವಂತೆ ಸರಕಾರವನ್ನು ಒತ್ತಾಯಿಸಲು ರೈತರು ಒಗ್ಗೂಡಬೇಕು. ನಿಗದಿಪಡಿಸುವ ದಿನಾಂಕದಂದು ತಾಲೂಕಿನ ಗ್ರಾಮಗಳ ರೈತರು ಹೋರಾಟದಲ್ಲಿಭಾಗವಹಿಸಬೇಕು. ಬಿತ್ತನೆ ಮಾಡಿದ ತೊಗರಿ, ಮೆಕ್ಕೆಜೋಳ ಸೇರಿದಂತೆ ನಾನಾ ಬೆಳೆಗಳು ನೀರಿನ ಕೊರತೆಯಿಂದ ಒಣಗುತ್ತಿದ್ದು, ಜಾನುವಾರುಗಳಿಗೆ ಮೇವಿನ ಸಮಸ್ಯೆಯೂ ಎದುರಾಗಿದೆ,’’ ಎಂದರು.
ಸರಕಾರ ರೈತರ ಸಂಕಷ್ಟವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಹುನಗುಂದ ತಾಲೂಕನ್ನು ಬರ ಘೋಷಣೆ ಮಾಡದಿದ್ದರೆ ತಾಲೂಕು ಮಟ್ಟದಲ್ಲಿಹೋರಾಟ ಕೈಗೊಳ್ಳುವುದರ ಜತೆಗೆ ಕೂಡಲಸಂಗಮಕ್ಕೆ ಬರುವ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ಸಭೆಯಲ್ಲಿಚರ್ಚಿಸಲಾಯಿತು.