* ಸೂಕ್ತ ಕ್ರಮಕ್ಕೆ ತಹಸೀಲ್ದಾರ್ ಗೆ ಮನವಿವಿಕ ಸುದ್ದಿಲೋಕ ಕೊಪ್ಪಳ
ಜಿಲ್ಲೆಯ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿಬಿಸಿಯೂಟ ಯೋಜನೆಯಡಿ ಮಕ್ಕಳಿಗೆ ನೀಡಲಾಗುತ್ತಿರುವ ನಿಷೇಧಿತ ಹಾಗೂ ರಾಸಾಯನಿಕ ಮಿಶ್ರಿತ ಬಾಳೆಹಣ್ಣು ವಿತರಣೆಗೆ ಕಡಿವಾಣ ಹಾಕುವಂತೆ
ಆಗ್ರಹಿಸಿ ಶಾಲಾ-ಕಾಲೇಜುಗಳ ಹಿತರಕ್ಷಣಾ ಹೋರಾಟ ಸಮಿತಿಯಿಂದ ತಹಸೀಲ್ದಾರ್ ರವಿಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
‘‘ವಿಷ ಪೂರಿತ ಹಣ್ಣು ಪೂರೈಕೆ ಮಾಡುವ ವ್ಯಾಪಾರಿಗಳ ಪರವಾನಗಿ ರದ್ದುಗೊಳಿಸಿ, ಕ್ರಿಮಿನಲ್ ಕೇಸ್ ದಾಖಲಿಸಬೇಕು. ನೈಸರ್ಗಿಕವಾಗಿ ಮಾಗಿದ ಹಣ್ಣು ವಿತರಿಸಬೇಕು,’’ ಎಂದು ಆಗ್ರಹಿಸಿದರು.
ಶಾಲಾ-ಕಾಲೇಜುಗಳ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಎಸ್ .ಎ.ಗಫಾರ್ , ಪ್ರಗತಿಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಮುಖ್ಯ ಸಂಚಾಲಕ ಬಸವರಾಜ್ ಶೀಲವಂತರ್ , ಪಾಸ್ಟರ್ಸ್ ಅಸೋಸಿಯೇಶನ್ ಜಿಲ್ಲಾಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ್ , ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾಸಂಚಾಲಕ ತುಕಾರಾಮ್ ಪಾತ್ರೋಟಿ, ಕೊಳಚೆ ನಿರ್ಮೂಲನಾ ವೇದಿಕೆ ಸಂಚಾಲಕ ಮಖಬೂಲ್ ರಾಯಚೂರು, ವಿದ್ಯಾರ್ಥಿ ಸಂಘಟನೆ ಸಂಘರ್ಷ ಬಿ.ಶೀಲವಂತರ್ , ಆದಿತ್ಯಾ ಟಿ.ಪಾತ್ರೋಟಿ ಇದ್ದರು.
* 1-ವಿಠ್ಠಲ-25
ಶಾಲಾ- ಕಾಲೇಜುಗಳ ಹಿತರಕ್ಷಣಾ ಹೋರಾಟ ಸಮಿತಿಯಿಂದ ಕೊಪ್ಪಳದಲ್ಲಿತಹಸೀಲ್ದಾರ್ ರವಿ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.