Global Nomadic Sports Festival World Nomad Games And Tibet Mega Dam Project
ವಿಜ್ಞಾನ ಲೋಕ
Contributed by: Shrividya Rao|Vijaya Karnataka•
ವರ್ಲ್ಡ್ ನೊಮ್ಯಾಡ್ ಗೇಮ್ಸ…
ಮಧ್ಯ ಏಷ್ಯಾದ ಅಲೆಮಾರಿ ಸಂಸ್ಕೃತಿ , ಆಚಾರ-ವಿಚಾರ ಮತ್ತು ಸಾಂಪ್ರದಾಯಿಕ ಕ್ರೀಡೆಗಳನ್ನು ರಕ್ಷಿಸಲು ಹಾಗೂ ಜಗತ್ತಿಗೆ ಪರಿಚಯಿಸಲು ಆಯೋಜಿಸಲಾಗುವ ಕ್ರೀಡಾಕೂಟವೇ ವರ್ಲ್ಡ್ ನೊಮ್ಯಾಡ್ ಗೇಮ್ಸ…. ಇದನ್ನು ಅಲೆಮಾರಿ ಸಂಸ್ಕೃತಿಯ ಒಲಿಂಪಿP್ಸ… ಎಂದೂ ಕರೆಯಲಾಗುತ್ತದೆ. ಇದನ್ನು 2014ರಲ್ಲಿಕಿರ್ಗಿಸ್ತಾನದಲ್ಲಿ ಪ್ರಾರಂಭಿಸಲಾಯಿತು. ಜಾಗತೀಕರಣದ ಈ ಯುಗದಲ್ಲಿಅಲೆಮಾರಿ ಸಮುದಾಯಗಳ ಪ್ರಾಚೀನ ಕ್ರೀಡೆಗಳು, ಜಾನಪದ ಕಲೆಗಳು ಮತ್ತು ಜೀವನಶೈಲಿ ನಶಿಸಿಹೋಗದಂತೆ ಕಾಪಾಡುವುದು ಮುಖ್ಯ ಉದ್ದೇಶ. 2021ರಲ್ಲಿಯುನೆಸ್ಕೊ ಇದನ್ನು ಅಮೂರ್ತ ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ಸೇರಿಸಿದೆ. ಸಾಮಾನ್ಯ ಒಲಿಂಪಿಕ್ಸ್ ನಲ್ಲಿ ಕಾಣಸಿಗದಂತಹ ಸಾಹಸಮಯ ಮತ್ತು ವಿಶಿಷ್ಟ ಆಟಗಳು ಇಲ್ಲಿ ಪ್ರಮುಖ ಆಕರ್ಷಣೆಯಾಗಿರುತ್ತವೆ. ಕೇವಲ ಕ್ರೀಡೆ ಮಾತ್ರವಲ್ಲದೆ ಕ್ರೀಡಾಂಗಣದ ಪಕ್ಕದಲ್ಲೇ ಎಥ್ನೋ-ವಿಲೇಜ್ ಎಂಬ ಸಾಂಪ್ರದಾಯಿಕ ಗ್ರಾಮವನ್ನು ನಿರ್ಮಿಸಲಾಗುತ್ತದೆ. ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಪಂದ್ಯಾವಳಿಯನ್ನು ಕಿರ್ಗಿಸ್ತಾನ್ , ಟರ್ಕಿ, ಕಝಕಿಸ್ತಾನ್ ಮುಂತಾದ ಮಧ್ಯ ಏಷ್ಯಾದ ದೇಶಗಳು ಆಯೋಜಿಸುತ್ತವೆ. 100ಕ್ಕೂ ಹೆಚ್ಚು ದೇಶಗಳ ಸಾವಿರಾರು ಕ್ರೀಡಾಪಟುಗಳು ಮತ್ತು ಸಾಂಸ್ಕೃತಿಕ ಕಲಾವಿದರು ಭಾಗವಹಿಸುತ್ತಾರೆಫೈಲ್ ನೇಮ್ - ವರ್ಲ್ಡ್ ನೊಮ್ಯಾಡ್ ಗೈಮ್ಸ…
---
ಟಿಬೆಟ್ ಮೆಗಾ ಡ್ಯಾಮ್ ಪ್ರೊಜೆಕ್ಟ್
ಚೀನಾ ದೇಶವು ಟಿಬೆಟ್ ನಲ್ಲಿನಿರ್ಮಿಸುತ್ತಿರುವ ಬೃಹತ್ ಜಲವಿದ್ಯುತ್ ಯೋಜನೆಯು ಜಗತ್ತಿನ ಅತಿ ದೊಡ್ಡ ಅಣೆಕಟ್ಟು ಯೋಜನೆ ಟಿಬೆಟ್ ಮೆಗಾ ಡ್ಯಾಮ್ ಪ್ರಾಜೆಕ್ಟ್. ಈ ಅಣೆಕಟ್ಟನ್ನು ಟಿಬೆಟ್ ನ ಯಾರ್ಲುಂಗ್ ಟ್ಸಾಂಗ್ಪೊ ನದಿಯ ಮೇಲೆ ನಿರ್ಮಿಸಲಾಗುತ್ತಿದೆ. ಇದೇ ನದಿಯು ಭಾರತಕ್ಕೆ ಪ್ರವೇಶಿಸಿದಾಗ ಬ್ರಹ್ಮಪುತ್ರ ಎಂದು ಕರೆಯಲ್ಪಡುತ್ತದೆ. ಯೋಜನೆ ಸ್ಥಳವು ಅರುಣಾಚಲ ಪ್ರದೇಶದ ಗಡಿಗೆ ತೀರಾ ಹತ್ತಿರದಲ್ಲಿದೆ. ಈ ಯೋಜನೆಯ ಸಾಮರ್ಥ್ಯ ಸುಮಾರು 60 ಸಾವಿರ ಮೆಗಾವಾಟ್ . ಇದು ಪ್ರಸ್ತುತ ಜಗತ್ತಿನ ಅತಿ ದೊಡ್ಡ ಜಲವಿದ್ಯುತ್ ಕೇಂದ್ರವಾದ ಚೀನಾದ ತ್ರಿ ಗಾರ್ಜಸ್ (Th್ಟಛಿಛಿ ಎಟ್ಟಜಛಿs ಈaಞ)ಅಣೆಕಟ್ಟಿಗಿಂತ ಸುಮಾರು ಮೂರು ಪಟ್ಟು ದೊಡ್ಡದಾಗಿದೆ. ಚೀನಾ ತನ್ನ ಶೂನ್ಯ-ಕಾರ್ಬನ್ ಇಂಧನ ಗುರಿ ತಲುಪಲು, ತಂತ್ರಜ್ಞಾನ ಮತ್ತು ಎಐ ಡೇಟಾ ಸೆಂಟರ್ ಗಳಿಗೆ ಅಗತ್ಯವಿರುವ ಅಪಾರ ಪ್ರಮಾಣದ ವಿದ್ಯುತ್ ಒದಗಿಸಲು ಇದನ್ನು ಬಳಸಲು ಯೋಜಿಸಿದೆ. ಚೀನಾದ ಈ ಯೋಜನೆಗೆ ಎದುರಾಗಿ ಭಾರತವು ಅರುಣಾಚಲ ಪ್ರದೇಶದ ಸಿಯಾಂಗ್ ನದಿಯ ಮೇಲೆ ಸಿಯಾಂಗ್ ಅಪರ್ ಮಲ್ಟಿಪರ್ಪಸ್ ಪ್ರಾಜೆಕ್ಟ್ ಎಂಬ ಬೃಹತ್ ಜಲಾಶಯ ನಿರ್ಮಿಸಲು ಮುಂದಾಗಿದೆ. ಇದು ಚೀನಾ ನೀರು ಬಿಟ್ಟರೆ ಸಂಗ್ರಹಿಸಲು ಹಾಗೂ ನೀರು ತಡೆದರೆ ತುರ್ತು ಬಳಕೆಗೆ ಕೌಂಟರ್ ಡ್ಯಾಮ್ ಆಗಿ ಕೆಲಸ ಮಾಡಲಿದೆ.
ಫೈಲ್ ನೇಮ್ - ಟಿಬೆಟ್ ಮೆಗಾ ಡ್ಯಾಮ್ ಪ್ರೊಜೆಕ್ಟ್
---
ಪ್ರೈಮಸಿ ಮತ್ತು ರೀಸೆನ್ಸಿ ಎಫೆಕ್ಟ್
ಇವು ಮಾನವನ ನೆನಪಿನ ಶಕ್ತಿಗೆ ಸಂಬಂಧಿಸಿದ ಎರಡು ಪ್ರಮುಖ ಮಾನಸಿಕ ನಿಯಮಗಳು. ಇವೆರಡನ್ನೂ ಒಟ್ಟಾಗಿ ಸೀರಿಯಲ್ ಪೊಸಿಷನ್ ಎಫೆಕ್ಟ್ ಎಂದು ಕರೆಯಲಾಗುತ್ತದೆ. ನಾವು ಒಂದಿಷ್ಟು ಮಾಹಿತಿಗಳ ಪಟ್ಟಿಯನ್ನು ನೋಡಿದಾಗ ಅಥವಾ ಕೇಳಿದಾಗ, ಆರಂಭದಲ್ಲಿರುವ ವಿಷಯಗಳು ಮತ್ತು ಕೊನೆಯಲ್ಲಿರುವ ವಿಷಯಗಳು ನಮಗೆ ಚೆನ್ನಾಗಿ ನೆನಪಿರುತ್ತವೆ. ಆದರೆ ಮಧ್ಯದಲ್ಲಿರುವ ವಿಷಯಗಳು ಮರೆತುಹೋಗುತ್ತವೆ. ಪ್ರೈಮಸಿ ಎಫೆಕ್ಟ್(P್ಟಜಿಞa್ಚy ಉ್ಛ್ಛಛ್ಚಿಠಿ) ಎಂದರೆ ಯಾವುದೇ ಪಟ್ಟಿ ಅಥವಾ ಉಪನ್ಯಾಸದಲ್ಲಿಮೊದಲು ಬರುವ ವಿಷಯಗಳು ಮನಸ್ಸಿನಲ್ಲಿಹೆಚ್ಚು ಕಾಲ ಉಳಿಯುವುದು. ಆರಂಭದಲ್ಲಿಕೇಳುವ ವಿಷಯಗಳನ್ನು ಗ್ರಹಿಸಲು ನಮ್ಮ ಮಿದುಳಿಗೆ ಸಾಕಷ್ಟು ಸಮಯ ಸಿಗುತ್ತದೆ. ಹೀಗಾಗಿ ಅವು ನಮ್ಮ ದೀರ್ಘಕಾಲದ ನೆನಪಿಗೆ ತಲುಪುತ್ತವೆ. ಉದಾಹರಣೆಗೆ ಪರೀಕ್ಷೆಗೆ ಓದುವಾಗ ಅಧ್ಯಾಯದ ಮೊದಲ 2-3 ಪುಟಗಳು ಅತ್ಯಂತ ಸ್ಪಷ್ಟವಾಗಿ ನೆನಪಿರುವುದು. ರೀಸೆನ್ಸಿ ಎಫೆಕ್ಟ್(್ಕಛ್ಚಿಛ್ಞ್ಚಿy ಉ್ಛ್ಛಛ್ಚಿಠಿ) ಎಂದರೆ ಯಾವುದೇ ಮಾಹಿತಿಯ ಕೊನೆಯಲ್ಲಿಅಥವಾ ಇತ್ತೀಚೆಗೆ ಕೇಳಿದ ವಿಷಯಗಳು ತಕ್ಷಣಕ್ಕೆ ನೆನಪಿಗೆ ಬರುವುದು. ಇವು ಕೊನೆಯಲ್ಲಿಕೇಳಿರುವುದರಿಂದ ಇನ್ನೂ ನಮ್ಮ ಅಲ್ಪಕಾಲದ ನೆನಪಿನಲ್ಲಿತಾಜಾವಾಗಿರುತ್ತವೆ.