ಸಮಾಜದ ಹಕ್ಕಿಗಾಗಿ ಹೋರಾಟ

Contributed byutkolekar@gmail.com|Vijaya Karnataka
intense struggle for panchamasali community rights diksha campaign
ದೀಕ್ಷಾ ಅಭಿಯಾನ ಕಾರ್ಯಕ್ರಮ

ಸಮಾಜದ ಹಕ್ಕಿಗಾಗಿ ಹೋರಾಟ
ವಿಕ ಸುದ್ದಿಲೋಕ ಇಂಡಿ

‘‘ಪಂಚಮಸಾಲಿ ಸಮಾಜದ ಹಕ್ಕಿನ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಲಾಗಿದ್ದು, ಸಮಾಜ ಬಾಂಧವರು ಜಾಗೃತರಾಗಬೇಕು’’ ಎಂದು ಪಂಚಮಸಾಲಿ ಸಮಾಜದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ತಾಲೂಕಿನ ಸಾತಲಗಾಂವ ಗ್ರಾಮದ ಶಿವಯೋಗೇಶ್ವರ ದೇವಸ್ಥಾನ ಆವರಣದಲ್ಲಿಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಂಡಿದ್ದ ಮನೆ ಮನಗಳಲ್ಲಿಕೂಡಲಸಂಗಮ, ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ದೀಕ್ಷಾ ಅಭಿಯಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

‘‘ರಾಜ್ಯದ ವಿವಿಧ ಜಿಲ್ಲೆಗಳಲ್ಲಿಇಷ್ಟಲಿಂಗ ಪೂಜೆ ಮೂಲಕ ಭಕ್ತರು ಹಾಗೂ ಸಮಾಜದ ಮುಖಂಡರು ಮೀಸಲಾತಿಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದು, ಸರಕಾರದ ಮೇಲೆ ಒತ್ತಡ ಹೆಚ್ಚಿಸುವ ಉದ್ದೇಶದಿಂದ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ’’ ಎಂದು ತಿಳಿಸಿದರು.

‘‘ಪಂಚಮಸಾಲಿ ಸಮಾಜಕ್ಕೆ ಸಂವಿಧಾನ ಬದ್ಧವಾಗಿ ದೊರೆಯಬೇಕಾದ 2ಎ ಮೀಸಲಾತಿ ನೀಡದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು. ಸಮಾಜದ ಸಹನೆ ಪರೀಕ್ಷಿಸದೆ ಸರಕಾರ ತಕ್ಷಣವೇ ಸೂಕ್ತ ನಿರ್ಧಾರ ಕೈಗೊಳ್ಳಬೇಕು’’ ಎಂದರು.

ಸಚಿನ್ ಬಿರಾದಾರ ಅನ್ನಸಂತರ್ಪಣೆ ನೆರವೇರಿಸಿದರು.

ಸಮಾಜದ ತಾಲೂಕು ಅಧ್ಯಕ್ಷ ವಿ.ಎಚ್ .ಬಿರಾದಾರ, ಉಮೇಶ ಬಳಬಟ್ಟಿ, ಶಿವಾನಂದ ಚಾಳೀಕಾರ, ಬಾಳು ಮುಳಜಿ, ಶರಣಗೌಡ ಬಂಡಿ, ಅನೀಲ ಏಳಗಿ, ಈರನಗೌಡ ಪಾಟೀಲ, ಶಂಕರಗೌಡ ಪಾಟೀಲ, ನೀಲಕಂಠ ಬಿರಾದಾರ, ರಾಜು ಕಾಮಗೊಂಡ, ರಾಜು ಬಿರಾದಾರ, ಎಸ್ .ಕೆ.ಕಾಮಗೊಂಡ, ಶ್ರೀಶೈಲ ಕೋರಳ್ಳಿ, ರಮೇಶ ಬರಡೋಲ ಮತ್ತಿತರರಿದ್ದರು.

03 ಇಂಡಿ 01

ಇಂಡಿ ತಾಲೂಕಿನ ಸಾತಲಗಾಂವ ಗ್ರಾಮದ ಶಿವಯೋಗೇಶ್ವರ ದೇವಸ್ಥಾನದ ಆವರಣದಲ್ಲಿನಡೆದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು.