ಶ್ರೀಕೃಷ್ಣ ಜಯಂತಿ ಉತ್ಸವ ಇಂದಿನಿಂದ

Contributed bykotekarp@gmail.com|Vijaya Karnataka
local sri krishna janmashtami festival from 4th to 6th days celebration
ಯಮಕನಮರಡಿ: ಸ್ಥಳೀಯ ಸುಕ್ಷೇತ್ರ ಹತ್ತರಗಿಯ ಶ್ರೀ ಹರಿಮಂದಿರದಲ್ಲಿಸೆ. 4ರಿಂದ 6ರವರೆಗೆ ಮೂರು ದಿನಗಳ ಕಾಲ ಶ್ರೀಕೃಷ್ಣ ಜನ್ಮಾಷ್ಟಮಿ ಜಯಂತಿ ಉತ್ಸವ ಆಯೋಜಿಸಲಾಗಿದೆ ಎಂದು ಶ್ರೀ ಆನಂದ ಏಕನಾಥ ಗೋಸಾವಿ ಮಹಾರಾಜರು ತಿಳಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿಈ ಕುರಿತು ಮಾಹಿತಿ ನೀಡಿದ ಶ್ರೀಗಳು, ‘‘ಭಾರತೀಯ ಸಂಸ್ಕೃತಿಯಲ್ಲಿಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವಕ್ಕೆ ಅತ್ಯಂತ ವಿಶೇಷ ಸ್ಥಾನವಿದೆ. ಆಗಸ್ಟ್ 29ರಿಂದಲೇ ಕೃಷ್ಣನ ನವರಾತ್ರಿ ಆರಂಭಗೊಂಡಿದ್ದು, ಸೆ. 6ರವರೆಗೆ ಒಟ್ಟು ಹತ್ತು ದಿನಗಳ ಕಾಲ ನವರಾತ್ರಿ ಆಚರಣೆ ಜರುಗಲಿದೆ. ಈ ಅವಧಿಯಲ್ಲಿಪ್ರತಿದಿನ ಬೆಳಗ್ಗೆ ಹಾಗೂ ಸಾಯಂಕಾಲ ಶ್ರೀಹರಿಗೆ ವಿಶೇಷ ಆರತಿ ಮತ್ತು ಮಹಾಪ್ರಸಾದ ವಿತರಣೆ ನೆರವೇರುತ್ತಿದೆ,’’ ಎಂದು ಹೇಳಿದರು.
‘‘ಸೆ. 4ರಂದು ಶ್ರೀಕೃಷ್ಣ ಜನ್ಮಕಾಲ ಹಾಗೂ ರಾತ್ರಿ ಶ್ರೀಕೃಷ್ಣ ಜನ್ಮ ಕೀರ್ತನೆ ಜರುಗಲಿದೆ. 5ರಂದು ಪಾರಣಿ, ಪ್ರವಚನ ಹಾಗೂ ಭಜನಾ ಕಾರ್ಯಕ್ರಮಗಳು ಮತ್ತು 6ರಂದು ಕೃಷ್ಣನ ಭವ್ಯ ಪಲ್ಲಕ್ಕಿ ಸೇವೆ, ರಥೋತ್ಸವ, ಗೋಪಾಲ ಕಲಾ ಹಾಗೂ ಮಹಾಪ್ರಸಾದ ವಿತರಣೆ ನಡೆಯಲಿದೆ. ಈ ಪವಿತ್ರ ಧಾರ್ಮಿಕ ಮಹೋತ್ಸವದಲ್ಲಿದಾದಬಾನಹಟ್ಟಿ, ಹತ್ತರಗಿ, ಯಮಕನಮರಡಿ ಹಾಗೂ ಸುತ್ತಮುತ್ತಲಿನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿಆಗಮಿಸಿ ಶ್ರೀಕೃಷ್ಣನ ಕೃಪೆಗೆ ಪಾತ್ರರಾಗಬೇಕು,’’ ಎಂದು ಶ್ರೀಗಳು ಕೋರಿದರು.

-31ವಾಯ್ ಎಂಡಿ3

ಶ್ರೀಹರಿ ಮಂದಿರ.