ನಿತ್ಯಾ ಮೆನನ್ ಹತ್ತು ವರ್ಷಗಳ ಬಳಿಕ ಕನ್ನಡ ಸಿನಿಮಾದಲ್ಲಿನಟಿಸುತ್ತಿದ್ದಾರೆ. ಈ ಡಾರ್ಕ್ ಕಾಮಿಡಿ ಚಿತ್ರವನ್ನು ತಮಿಳು ನಿರ್ದೇಶಕ ಡೀಕೆ ಡೈರೆಕ್ಟ್ ಮಾಡುತ್ತಿದ್ದಾರೆ.
ಕಿರಣ್ ಚಂದ್ರ
ಬಾಲ ಕಲಾವಿದೆಯಾಗಿ ಚಿತ್ರೋದ್ಯಮಕ್ಕೆ ಬಂದಿರುವ ನಟಿ ನಿತ್ಯಾ ಮೆನನ್ ಕಳೆದ ಮೂರು ದಶಕಗಳಿಂದ ತೆರೆಯ ಮೇಲೆ ಮಿಂಚುತ್ತಿದ್ದಾರೆ. ಆದರೆ 2025ರ ನಂತರ ಅವರ ನಟನೆಯ ಯಾವುದೇ ಸಿನಿಮಾ ತೆರೆಕಂಡಿಲ್ಲಹಾಗೂ ಅನೌನ್ಸ್ ಕೂಡ ಆಗಿರಲಿಲ್ಲ. ಪಾತ್ರಗಳ ಆಯ್ಕೆ ವಿಷಯದಲ್ಲಿಚೂಸಿಯಾಗಿರುವ ಅವರೀಗ ಹಾರರ್ ಕಾಮಿಡಿ ಚಿತ್ರಗಳ ನಿರ್ದೇಶಕ ಡೀಕೆ ಅವರ ಡಾರ್ಕ್ ಕಾಮಿಡಿ ಸಿನಿಮಾಗೆ ಓಕೆ ಎಂದಿದ್ದಾರೆ.
ತಮಿಳಿನ ಸೂಪರ್ ಹಿಟ್ ‘ಯಾಮಿರುಕ್ಕ ಬಯಮೇ’, ‘ಕವಲೈ ವೇಂದಮ್ ’, ‘ಕರುಂಗಾಪಿಯಂ’ ಚಿತ್ರಗಳ ನಿರ್ದೇಶಕ ಡೀಕೆ ಅವರು ನಿತ್ಯಾ ಮೆನನ್ ರಿಗೆ ಈ ಕಥೆ ಒಪ್ಪಿಸಿದ ಬಗ್ಗೆ ವಿವರಿಸಿದ್ದು, ‘ತೆಲುಗಿನ ಬ್ಲಾಕ್ ಬಸ್ಟರ್ ‘ಮನಂ’, ‘ಇಷ್ ್ಕ’, ‘ಇಷ್ಟಂ’ ಚಿತ್ರಗಳ ನಿರ್ದೇಶಕ ವಿಕ್ರಮ್ ಕುಮಾರ್ ಮೂಲಕ ನಿತ್ಯಾರನ್ನು ಸಂಪರ್ಕಿಸಿದೆವು. ಎರಡು ಗಂಟೆಗಳ ಕಾಲ ಕಥೆ ಕೇಳಿದ ಮೇಲೆ ಅವರು ಈ ಸಿನಿಮಾದಲ್ಲಿನಟಿಸುವ ಜತೆಗೆ ನಿರ್ಮಾಣದಲ್ಲೂಸಾಥ್ ನೀಡುವ ನಿರ್ಧಾರಕ್ಕೆ ಬಂದರು. ಇದು ಫ್ಯಾಂಟಸಿ ಅಂಶಗಳಿರುವ ಪಕ್ಕಾ ಕಾಮಿಡಿ ಚಿತ್ರವಾಗಿದ್ದು, ನಿತ್ಯಾ ಅವರೇ ಲೀಡ್ ಪಾತ್ರದಲ್ಲಿದ್ದಾರೆ’ ಎಂದು ಹೇಳಿದ್ದಾರೆ.
‘ನಿತ್ಯಾ ಮೆನನ್ ನಿರ್ವಹಿಸುತ್ತಿರುವ ಪಾತ್ರಕ್ಕೆ ಹಲವು ಶೇಡ್ ಗಳಿದ್ದು, ಇದರಲ್ಲಿಅವರು ಒಂದು ಕ್ಷಣ ಪಕ್ಕದ್ಮನೆ ಹುಡುಗಿಯಂತೆ ಕಂಡರೆ, ಮರುಕ್ಷಣ ಅತ್ಯಂತ ಕೋಪಗೊಳ್ಳುವ ಹುಡುಗಿಯಾಗುತ್ತಾರೆ. ಈ ನಡವಳಿಕೆಗೆ ಒಂದು ಮುಖ್ಯ ಕಾರಣವೂ ಇರುತ್ತದೆ. ಕ್ಷಣ ಕ್ಷಣಕ್ಕೂ ಬದಲಾಗುವ ಈ ಭಾವನೆಗಳನ್ನು ಅವರು ತುಂಬಾ ಚೆನ್ನಾಗಿ ತೆರೆಗೆ ಇಡಬಲ್ಲರು ಎಂದೇ ಅವರಿಗೆ ಈ ಕಥೆ ನಿರೂಪಿಸಿದೆ. ಇದು ಕಾಮಿಡಿ ಸಿನಿಮಾವಾಗಿರುವುದರಿಂದ ಅವರ ಪರ್ಫಾರ್ಮೆನ್ಸ್ ತುಂಬಾ ಮುಖ್ಯವಾಗುತ್ತದೆ. ನನಗೂ ಈ ಕಥೆ ಮಾಡಲು ಸುಮಾರು ಒಂದೂವರೆ ವರ್ಷ ಬೇಕಾಯಿತು’ ಎಂದು ವಿವರಿಸಿದ್ದಾರೆ ನಿರ್ದೇಶಕ ಡೀಕೆ.
ಈ ಸಿನಿಮಾ ಪ್ರಿ ಪ್ರೊಡಕ್ಷನ್ ಹಂತದಲ್ಲಿದ್ದು, ಈ ತಿಂಗಳಾಂತ್ಯಕ್ಕೆ ಇದರ ಟೈಟಲ್ , ಲುಕ್ ರಿವೀಲ್ ಆಗಿ ಅಕ್ಟೋಬರ್ ಮಧ್ಯದಲ್ಲಿ ಶೂಟಿಂಗ್ ಆರಂಭವಾಗಲಿದೆ. ಯಾವುದೇ ನಾನ್ ಲೀನಿಯರ್ ಶೈಲಿಯ ಚಿತ್ರಕಥೆ ಇಲ್ಲದೆ ನೇರವಾಗಿ ಸಾಗುವ ಈ ಚಿತ್ರದಲ್ಲಿದೊಡ್ಡ ತಾರಾಬಳಗವಿದೆ. ಈ ಪಾತ್ರಗಳಿಂದಲೇ ನಿತ್ಯಾ ಮೆನನ್ ಪಾತ್ರ ಜನರ ಮನದಲ್ಲುಳಿಯುತ್ತದೆ. ಸಣ್ಣ ಸಣ್ಣ ವಿಷಯಗಳು ಹೇಗೆ ಪ್ರಳಯಾಂತಕ ಆಗಬಲ್ಲದು ಎನ್ನುವುದು ಈ ಸಿನಿಮಾದ ಒನ್ ಲೈನ್ . ಇದಕ್ಕೆ ಶಕ್ತಿವೇಲ್ ಕ್ಯಾಮೆರಾವರ್ಕ್ ಮಾಡುತ್ತಿದ್ದು, ಕೆವಿನ್ ಸಂಕಲನ ಮಾಡುತ್ತಿದ್ದಾರೆ. ಇದರಲ್ಲಿಸಂಗೀತ ನಿರ್ದೇಶಕ ಒಂದು ದೊಡ್ಡ ಸರ್ ಪ್ರೈಸ್ ಆಗಿರಲಿದ್ದು, ಈ ಸಿನಿಮಾ ಐದು ಭಾಷೆಗಳಲ್ಲೂಪ್ರತ್ಯೇಕವಾಗಿ ಶೂಟಿಂಗ್ ಆಗಲಿದೆ.
ಕೋಟ್
ಈ ಸಿನಿಮಾ ನಿರ್ಮಿಸುತ್ತಿರುವ ವಿ.ಎಸ್ . ರಾಜ್ ಕುಮಾರ್ ತಂದೆ ವಿಕ್ರಮ್ ಶ್ರೀನಿವಾಸ್ ಕನ್ನಡದಲ್ಲಿ‘ಕವಿರತ್ನ ಕಾಳಿದಾಸ’, ‘ಸನಾದಿ ಅಪ್ಪಣ್ಣ’ ಸೇರಿದಂತೆ ಅನೇಕ ಸಿನಿಮಾಗಳನ್ನು ಮಾಡಿದ್ದಾರೆ. ಅವರ ಜತೆಯಲ್ಲಿಈಗ ನಟಿ ನಿತ್ಯಾ ಮೆನನ್ ಈ ಬಿಗ್ ಬಜೆಟ್ ಸಿನಿಮಾ ನಿರ್ಮಾಣಕ್ಕೆ ಸಾಥ್ ನೀಡುತ್ತಿದ್ದಾರೆ.