ಸಂಘಕ್ಕೆ 61.46 ಲಕ್ಷ ರೂ. ನಿವ್ವಳ ಲಾಭ

Contributed byasmysvkr@gmail.com|Vijaya Karnataka
piryapattana taluk agricultural produce marketing cooperative society earns 6146 lakhs profit
ಸಂಘಕ್ಕೆ 61.46 ಲಕ್ಷ ರೂ. ನಿವ್ವಳ ಲಾಭ

* ಪಿರಿಯಾಪಟ್ಟಣ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ
ವಿಕ ಸುದ್ದಿಲೋಕ ಪಿರಿಯಾಪಟ್ಟಣ

ಪಿರಿಯಾಪಟ್ಟಣ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ನಡೆಯಿತು.

ಸಂಘದ ಕಾರ್ಯದರ್ಶಿ ಕಲಾವತಿ ಮಾತನಾಡಿ, ‘‘2025-26ನೇ ಸಾಲಿನಲ್ಲಿ ಸಂಘದಲ್ಲಿ55.23 ಲಕ್ಷ ರೂ. ಷೇರು ಬಂಡವಾಳವಿದ್ದು, ವ್ಯಾಪಾರ ಖರ್ಚು 5.59 ಲಕ್ಷ ರೂ. ಇದರಲ್ಲಿವ್ಯಾಪಾರ ಲಾಭ 1,20,76,000 ಆಗಿದ್ದು, 61.46 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ,’’ ಎಂದು ಸಭೆಗೆ ತಿಳಿಸಿದರು.

ಐಲಾಪುರ ರಾಮು ಮಾತನಾಡಿ, ‘‘ಪಿರಿಯಾಪಟ್ಟಣ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆ ನಡೆಸಬೇಕು. ಸಂಘಕ್ಕೆ ಹಲವು ವರ್ಷಗಳ ಇತಿಹಾಸವಿದೆ. ಸಂಘದ ಆಡಳಿತ ಮಂಡಳಿಯ ಅಧಿಕಾರಾವಧಿ ಮುಗಿದು ವರ್ಷವಾಗುತ್ತಿದೆ. ಆಡಳಿತ ಮಂಡಳಿ ಇಲ್ಲದೆ ಸಂಘದಲ್ಲಿರೈತರಿಗೆ ಯಾವುದೇ ಕೆಲಸವಾಗುತ್ತಿಲ್ಲ. ಆದ್ದರಿಂದ ಅತೀ ಶೀಘ್ರದಲ್ಲಿಸಂಘದ ಆಡಳಿತ ಮಂಡಳಿಯ ಚುನಾವಣೆ ನಡೆಸಬೇಕು ಹಾಗೂ ಸಂಘದ ಸದಸ್ಯರಲ್ಲಿಸರಕಾರಿ ಶಾಲೆಯಲ್ಲಿವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು,’’ ಎಂದು ನಿರ್ಣಯ ಮಾಡಲಾಯಿತು.

ಹೆಚ್ಚು ಅಂಕಗಳಿಸಿದ ಸದಸ್ಯರ ಮಕ್ಕಳನ್ನು ಅಭಿನಂಧಿಸಲಾಯಿತು. ಆಡಳಿತಾಧಿಕಾರಿ ಅನುಸೂಯ, ಸಹಕಾರ ಇಲಾಖೆ ತಾಲೂಕು ಅಧಿಕಾರಿ ಹಿತೇಂದ್ರ, ಸಂಘದ ಮುಖಂಡರಾದ ದೊರೆಕೆರೆ ನಾಗೇಂದ್ರ, ತಿಮ್ಮ ನಾಯಕ, ಕುಮಾರ, ಸುವರ್ಣ, ರಾಜೇಶ್ , ಸುನೀತಾ ಮಂಜುನಾಥ್ , ಮಹೇಶ್ವರಿ ಪುಟ್ಟಣಯ್ಯ, ಧನರಾಜ್ , ಮುಖೇಶ್ , ಮಹದೇವ್ , ತಿಮ್ಮೆಗೌಡ, ಪರಮೇಶ್ ಹಿಟ್ಟಗಳ್ಳಿ, ತಮ್ಮಣ್ಣಯ್ಯ, ಪುಟ್ಟರಾಜು, ಮಣಿಯಯ್ಯ, ಶುಂಠಿ ಸುರೇಶ್ , ಸಿಬ್ಬಂದಿ ಪ್ರತಾಪ್ , ವೆಂಕಟೇಶ್ , ಬಸವಣ್ಣ ಇತರರಿದ್ದರು.

///ಪೋಟೋ///

ಪಿರಿಯಾಪಟ್ಟಣ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಗಣ್ಯರು ಉದ್ಘಾಟಿಸಿದರು.