ಪ್ರಾದೇಶಿಕವಾರು ಕನಿಷ್ಠ ವೇತನ ನಿಗದಿಪಡಿಸಿ

Contributed byKashappa.Karadin@timesgroup.com|Vijaya Karnataka
regional minimum wage entrepreneurs urge
ಟೆಕ್ಸೆಲರೇಷನ್ -2026 ರ ಸಂವಾದದಲ್ಲಿಉದ್ಯಮಿ ಅರವಿಂದ ಮೆಳ್ಳಿಗೇರಿ ಒತ್ತಾಯ

ಪ್ರಾದೇಶಿಕವಾರು ಕನಿಷ್ಠ ವೇತನ ನಿಗದಿಪಡಿಸಿ
ವಿಕ ಸುದ್ದಿಲೋಕ ಹುಬ್ಬಳ್ಳಿ

ರಾಜ್ಯ ಸರಕಾರ ಜಾರಿಗೊಳಿಸಲು ಉದ್ದೇಶಿಸಿರುವ ಕಾರ್ಮಿಕರ ಕನಿಷ್ಠ ವೇತನ ಪಾವತಿ ವ್ಯವಸ್ಥೆ ಸರಿಯಲ್ಲ. ಎಲ್ಲಕಡೆಗೂ ಒಂದೇ ರೀತಿಯ ಜೀವನ ವೆಚ್ಚ ಇರುವುದಿಲ್ಲ. ಹಾಗಾಗಿ ಪ್ರಾದೇಶಿಕವಾರು ಕನಿಷ್ಠ ವೇತನ ನಿಗದಿಪಡಿಸುವುದು ಒಳ್ಳೆಯದು ಎಂದು ಉದ್ಯಮಿ ಅರವಿಂದ ಮೆಳ್ಳಿಗೇರಿ ಸಲಹೆ ಮಾಡಿದ್ದಾರೆ.

ನಗರದಲ್ಲಿಬಿಯಾಂಡ್ ಬೆಂಗಳೂರು ಯೋಜನೆಯಡಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಗುರುವಾರ ಆಯೋಜಿಸಿದ್ದ ಟೆಕ್ಸೆಲರೇಷನ್ 2026 ರಲ್ಲಿಕಾರ್ಯಕ್ರಮದ ಸಂವಾದದಲ್ಲಿಅವರು ಮಾತನಾಡಿದರು.

ಬೆಂಗಳೂರು ಜೀವನಮಟ್ಟ ವೆಚ್ಚಕ್ಕೂ ಕೊಪ್ಪಳ್ಳ, ಹುಬ್ಬಳ್ಳಿ, ಧಾರವಾಡ, ಬೆಳಗಾವಿಯಂತ ನಗರಗಳ ಜೀವನಕ್ಕೂ ಬಹಳಷ್ಟು ವ್ಯತ್ಯಾಸ ಇದೆ. ಬೆಂಗಳೂರು, ಹುಬ್ಬಳ್ಳಿ, ಕೊಪ್ಪಳ ಕಾರ್ಮಿಕನಿಗೂ ಏಕರೂಪ ಕನಿಷ್ಠ ವೇತನ ಮಾಡುವುದು ಸರಿಯಲ್ಲ. ಜೀವನ ವೆಚ್ಚದ ಆಧರಿಸಿ ಪ್ರಾದೇಶಿಕವಾರು ಕನಿಷ್ಠ ವೇತನ ನಿಗದಿ ಮಾಡುವುದರಿಂದ ಬೆಂಗಳೂರಿನಲ್ಲಿರುವ ಉದ್ಯಮಿಗಳ ಇತರ ನಗರಗಳಿಗೆ ಶಿಫ್ಟ್ ಆಗುವ ಸಾಧ್ಯತೆಗಳಿವೆ. ಈ ಬಗ್ಗೆ ಪರಿಶೀಲನೆ ಮಾಡಬಹುದು ಎಂದು ಅಭಿಪ್ರಾಯಪಟ್ಟರು.

ಹುಬ್ಬಳ್ಳಿ ಬೆಳಗಾವಿ, ಧಾರವಾಡ ನಗರದಲ್ಲಿಪ್ರತಿಭೆಗಳಿಗೆ ಕೊರತೆ ಇಲ್ಲ. ದ್ವಿತೀಯ ದರ್ಜೆ ನಗರಗಳಲ್ಲಿಯುವ ಪ್ರತಿಭಾನ್ವಿತರ ಕೊಡುಗೆ ಬೇಕಿದೆ. ನವೋದ್ಯಮಿಗಳು ಗುಣಮಟ್ಟದ ವಸ್ತುಗಳ ಉತ್ಪಾದನೆ ಮತ್ತು ಗ್ರಾಹಕರ ಬೇಡಿಕೆಗಳಿಗೆ ತ್ವರಿತವಾಗಿ ಸ್ಪಂದಿಸುವುದು ಮುಖ್ಯವಾಗುತ್ತದೆ ಎಂದರು.

ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಅಧ್ಯಕ್ಷ ಬಿ.ವಿ.ನಾಯ್ಡು ಮಾತನಾಡಿ, ಕೆಡಿಇಎಂ ಸ್ಥಾಪನೆ ಬಳಿಕ ಬಿಯಾಂಡ್ ಬೆಂಗಳೂರು ಕಲ್ಪನೆಗೆ ಸಾಕಷ್ಟು ಪ್ರೋತ್ಸಾಹ ನೀಡಲಾಗಿದೆ. ಇಲ್ಲಿಯವರೆಗೆ ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ10 ದೊಡ್ಡ ಕಂಪನಿಗಳು ರೂಪುಗೊಂಡಿವೆ. ಸದ್ಯ 100 ನವೋದ್ಯಮಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.

ಕೆಡಿಇಎಂ ಸಿಇಒ ಸಂಜೀವ್ ಕುಮಾರ್ ಗುಪ್ತಾ ಮಾತನಾಡಿ, ಹುಬ್ಬಳ್ಳಿ-ಧಾರವಾಡ- ಬೆಳಗಾವಿ ಟೆಕ್ ಕ್ಲಸ್ಟರ್ ಕರ್ನಾಟಕದ ಮುಂದಿನ ಪ್ರಮುಖ ನಾವೀನ್ಯತೆ ಕೇಂದ್ರ ವೇಗವಾಗಿ ಹೊರಹೊಮ್ಮುತ್ತಿದ್ದು, ಸ್ಥಳೀಯ ಪ್ರತಿಭೆಗಳನ್ನು ಜಾಗತಿಕ ಮಾರುಕಟ್ಟೆಗಳೊಂದಿಗೆ ಸಂಪರ್ಕಿಸುತ್ತಿದೆ. ಕೆಡಿಇಎಂ ಯೋಜನೆಯಡಿ ಕ್ಲಸ್ಟರ್ ಗಳಲ್ಲಿ128 ಐಟಿ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ಜಪಾನಿನ ನಿಡೆಕ್ ಕಂಪನಿ 600 ಕೋಟಿ ರೂ. ಹೂಡಿಕೆ ಘೋಷಿಸಿದೆ. ಇದರಿಂದ 1,800 ನೇರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ. ಇದೇ ರೀತಿ ಅಂದಾಜು 2 ಸಾವಿರ ಕೋಟಿ ರೂ.ವೆಚ್ಚದಲ್ಲಿಏಕಸ್ , ಏರ್ ಬಸ್ ಮತ್ತು ಬೋಯಿಂಗ್ ಕಂಪನಿಗಳು ಹೂಡಿಕೆಗೆ ಮಾತುಕತೆ ನಡೆದಿದೆ. ಪ್ರತಿಭೆ, ಕೌಶಲ ಹಾಗೂ ನವೋದ್ಯಮಕ್ರೆ ಪ್ರೇರೇಪಿಸಲು ಎರಡು ಅತ್ಯುತ್ತಮ ಕೇಂದ್ರ ಸ್ಥಾಪನೆಗೆ 56 ಕೋಟಿ ರೂ. ನೀಡಿದೆ. 2031ರ ವೇಳೆಗೆ ಕೆಡಿಇಎಂ 7,500 ಕೋಟಿ ರೂ. ಡಿಜಿಟಲ್ ಆರ್ಥಿಕತೆ ಮತ್ತು ಈ ಪ್ರದೇಶದಲ್ಲಿಕನಿಷ್ಠ 1,000 ಉದ್ಯೋಗಗಳನ್ನು ಕಲ್ಪಿಸಿಕೊಡುವ ಉದ್ದೇಶ ಹೊಂದಿದೆ ಎಂದು ವಿವರಿಸಿದರು.

ಕೆಐಟಿಎಸ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಎಲೆಕ್ಟ್ರಾನಿಕ್ಸ್ , ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ನಿರ್ದೇಶಕ ಅವಿನಾಶ್ ಮೆನನ್ , ಸಂತೋಷ ಹುರಳಿಕುಪ್ಪಿ, ಚೈತನ್ಯ ಕುಲಕರ್ಣಿ ಇತರರಿದ್ದರು.

ಫೊಟೊ : ಸಂತೋಷ ಕೆಡಿಇಎಂ

ಹುಬ್ಬಳ್ಳಿಯಲ್ಲಿಗುರುವಾರ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಆಯೋಜಿಸಿದ್ದ ಟೆಕ್ಸೆಲರೇಷನ್ 2026ರ ಸಂವಾದವನ್ನು ಗಣ್ಯರು ಉದ್ಘಾಟಿಸಿದರು.

ಫೊಟೊ : ಸಂತೋಷ ಕೆಡಿಇಎಂ

ಸಂವಾದದಲ್ಲಿಉದ್ಯಮಿ ಅರವಿಂದ ಮೆಳ್ಳಿಗೇರಿ ಮಾತನಾಡಿದರು. ಕೆಡಿಇಎಂ ಸಿಇಒ ಸಂಜೀವ ಗುಪ್ತಾ ಇದ್ದರು.