‘ಹಿರಿಯರನ್ನು ಗೌರವದಿಂದ ನೋಡಿಕೊಳ್ಳಿ’

Contributed bychnvksnr@gmail.com|Vijaya Karnataka
respect the elderly continue honor at legal awareness program
‘ಹಿರಿಯರನ್ನು ಗೌರವದಿಂದ ನೋಡಿಕೊಳ್ಳಿ’

ಚನ್ನಗಿರಿ: ನಮ್ಮ ತಂದೆ ತಾಯಿಗಳು ಅಜ್ಜ, ಅಜ್ಜಿಯರು ನಮ್ಮ ಜೀವನದ ಮಾರ್ಗದರ್ಶಕರಾಗಿದ್ದು, ಅವರನ್ನು ಗೌರವದಿಂದ ನೋಡಿಕೊಳ್ಳಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಕೆ.ಪಿ. ಸಿದ್ದಪ್ಪಾಜಿ ಹೇಳಿದರು.
ಪಟ್ಟಣದ ಜೆ.ಎಚ್ . ಪಟೇಲ್ ತಾಪಂ ಸಭಾಂಗಣದಲ್ಲಿಸಾಮಾಜಿಕ ನ್ಯಾಯ ಸಬಲೀಕರಣ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ತಾಲೂಕು ಕಾನೂನು ಸೇವಾ ಸಮಿತಿಯಿಂದ ಗುರುವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈ ಹಿಂದೆ ಕೂಡು ಕುಟುಂಬಗಳು ಇದ್ದು, ಮಕ್ಕಳು ಆ ಕುಟುಂಬದಲ್ಲಿಸಾಮರಸ್ಯದಿಂದ ಬೆಳೆಯುತ್ತಿದ್ದರು. ಈಗ ಒಂದು ಕುಟುಂಬಕ್ಕೆ ಒಂದೇ ಮಗು, ಅಮೆರಿಕಾದಲ್ಲಿಇತ್ತೀಚಿನ ದಿನಗಳಲ್ಲಿಗಂಡ ಹೆಂಡತಿ ಇಬ್ಬರೇ ಇರುವುದು ಆಗಿದ್ದು, ಅವರಲ್ಲಿಯಾವುದೇ ಭಾವನಾತ್ಮಕ ಸಂಬಂಧಗಳು ಇರುವುದಿಲ್ಲಎಂದರು.

ಇತ್ತೀಚಿನ ದಿನಗಳಲ್ಲಿಹಿರಿಯರನ್ನು ನಿರ್ಲಕ್ಷತ್ರ್ಯ ಮಾಡುತ್ತಿದ್ದು, ತಂದೆ ತಾಯಿಗಳನ್ನು ಆಶ್ರಮಕ್ಕೆ ಕಳಿಸುತ್ತಿದ್ದಾರೆ. ಇದರಿಂದಾಗಿ ಕಾನೂನು ಸೇವಾ ಪ್ರಾಧಿಕಾರವು 2002ರಲ್ಲಿಹಿರಿಯ ನಾಗರೀಕರ ರಕ್ಷಣೆ ಕಾಯಿದೆ ಜಾರಿಗೆ ತಂದಿದ್ದು, ಹಿರಿಯರನ್ನು ಯಾರು ನೋಡಿಕೊಳ್ಳಬೇಕು ಎಂದರೆ ತಂದೆ ತಾಯಿಯ ಆಸ್ತಿಯಲ್ಲಿಪಾಲುದಾರರಾಗುವ ಗಂಡು ಮಕ್ಕಳು ಮತ್ತು ಹೆಣ್ಣುಮಕ್ಕಳು ಇಬ್ಬರೂ ನೋಡಿಕೊಳ್ಳಬೇಕೆಂದು ಕಾನೂನು ಹೇಳುತ್ತದೆ ಎಂದರು.

ಈ ವೇಳೆ ತಾಪಂ ಇಒ ಪ್ರಕಾಶ್ , ಜಿಲ್ಲಾವಿಕಲಚೇತನರ ಇಲಾಖೆ ಅಧಿಕಾರಿ ರಶ್ಮಿ, ತಾಲೂಕು ವೈದ್ಯಾಧಿಕಾರಿ ಡಾ.ಹನುಮೇಶ್ , ವಕೀಲ ಲೋಹಿತ್ ಕುಮಾರ್ ಹಾಜರಿದ್ದರು.

-----

3ಸಿಎಚ್ ಎನ್ ಪಿ2

ಚನ್ನಗಿರಿ ತಾಪಂ ಸಭಾಂಗಣದಲ್ಲಿಗುರುವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಕಾನೂನು ಅರಿವು ಕಾರ್ಯಕ್ರಮವನ್ನು ಪ್ರಧಾನ ಸಿವಿಲ್ ನ್ಯಾಯಾಧೀಶ ಕೆ.ಪಿ. ಸಿದ್ದಪ್ಪಾಜಿ ಉದ್ಘಾಟಿಸಿದರು.