ಬೆಳ್ತಂಗಡಿ: ಮುಂಡಾಜೆ ಗ್ರಾಮದ ದಿಡುಪೆ ರಸ್ತೆಯ ನಿವಾಸಿ ಜಿ.ಮಹಮ್ಮದ್ ಅವರ ಮನೆ ಅಂಗಳದಲ್ಲಿನಿಲ್ಲಿಸಿದ್ದ ಟಿಪ್ಪರ್ ವಾಹನದೊಳಗೆ ನಾಗರಹಾವೊಂದು ನುಗ್ಗಿ ಆತಂಕ ಮೂಡಿಸಿತು.
ಟಿಪ್ಪರ್ ನೊಳಗೆ ಹಾವು ಸೇರಿರುವುದು ಗಮನಕ್ಕೆ ಬರುತ್ತಿದ್ದಂತೆ ಮನೆಯವರು ಆತಂಕಗೊಂಡು ಉರಗ ತಜ್ಞ ಸ್ನೇಕ್ ಅನಿಲ್ ಕಕ್ಕಿಂಜೆ ಅವರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಅವರು ವಾಹನವನ್ನು ಪರಿಶೀಲಿಸಿ, ಒಂದು ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ಒಳಗೆ ಅಡಗಿದ್ದ ನಾಗರಹಾವನ್ನು ಸುರಕ್ಷಿತವಾಗಿ ಹೊರತೆಗೆದರು.ಹಾವು ಸುಮಾರು 5 ಅಡಿ ಉದ್ದವಿದ್ದು, ಟಿಪ್ಪರ್ ನ ನಾನಾ ಭಾಗಗಳಲ್ಲಿಸಂಚರಿಸುತ್ತಿದ್ದ ಕಾರಣ ಅದನ್ನು ಹೊರತೆಗೆಯಲು ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಬೇಕಾಯಿತು. ಯಾವುದೇ ಅಪಾಯವಾಗದಂತೆ ಹಾವನ್ನು ಹಿಡಿದು, ಬಳಿಕ ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಬಿಡಲಾಯಿತು.