ಸಂಪುಟ)) ‘ಹಲವು ಯೋಜನೆಗೆ ಅನುಮೋದನೆ ಕೋರಿಕೆ’

Contributed bymahammed.arif@timesgroup.com|Vijaya Karnataka
mangalore cabinet meeting approval sought for several important projects
ವಿಕ ಸುದ್ದಿಲೋಕ ಮಂಗಳೂರು

ತಲಪಾಡಿಯಿಂದ ಬೈಂದೂರು ತನಕ ಕೋಸ್ಟಲ್ ಕಾರಿಡಾರ್ ರಸ್ತೆ , ಕೊಣಾಜೆ- ಮಣಿಪಾಲ ಮೆಟ್ರೋ ರೈಲು, ಮೀನುಗಾರಿಕಾ ಕಾಲೇಜಿಗೆ ವಿವಿ ಸ್ಥಾನಮಾನ, ಬೆಳಪುವಿನಲ್ಲಿಕ್ರೀಡಾ ವಿಶ್ವವಿದ್ಯಾಲಯ ಮತ್ತಿತರ ಮಹತ್ವದ ಯೋಜನೆಗಳಿಗೆ ಮಂಗಳೂರು ಸಚಿವ ಸಂಪುಟದ ಸಭೆಯಲ್ಲಿಅನುಮೋದನೆಗೆ ಕೋರಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ್ ಭಂಡಾರಿ ಗುರುವಾರ ಸುದ್ದಿಗೋಷ್ಠಿಯಲ್ಲಿಹೇಳಿದರು.
ಡಿಸಿಎಂ ಡಾ.ಜಿ.ಪರಮೇಶ್ವರ್ ಶುಕ್ರವಾರ ಬೆಳಗ್ಗೆ 7.30ಕ್ಕೆ ಬೆಳಪು ಕ್ರೀಡಾ ವಿವಿ ಸ್ಥಾಪನೆಗೆ ಜಾಗ ಪರಿಶೀಲನೆ ನಡೆಸಲಿದ್ದಾರೆ. ಬ್ರಹ್ಮಾವರ ಕೃಷಿ ಡಿಪ್ಲೊಮಾ ಕಾಲೇಜು ಮೇಲ್ದರ್ಜೆಗೆ, 100-150 ಎಕರೆಯಲ್ಲಿಸ್ಟಾರ್ ಹೋಟೆಲ್ ಮತ್ತು ಕನ್ವೆನ್ಷನ್ ಸೆಂಟರ್ ಸ್ಥಾಪನೆ, ಮಂಗಳಾ ಕ್ರೀಡಾಂಗಣ ಮೇಲ್ದರ್ಜೆ ಕೋರಲಾಗಿದೆ ಎಂದು ತಿಳಿಸಿದರು.

ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ , ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪದ್ಮರಾಜ್ ಆರ್ . ಪೂಜಾರಿ, ಗೇರು ನಿಗಮ ಅಧ್ಯಕ್ಷೆ ಮಮತಾ ಡಿ.ಎಸ್ .ಗಟ್ಟಿ, ಚಿತ್ತರಂಜನ್ ಶೆಟ್ಟಿ, ಶುಭೋದಯ ಆಳ್ವ, ಎಂ.ಎಸ್ . ಮಹಮ್ಮದ್ ಸುದ್ದಿಗೋಷ್ಠಿಯಲ್ಲಿಉಪಸ್ಥಿತರಿದ್ದರು