ವಿಕ ಸುದ್ದಿಲೋಕ ಕಂಪ್ಲಿ‘‘ಬೇಸಾಯಕ್ಕೆ ಅನುಕೂಲವಾಗಲು ರೈತರ ಪಂಪ್ ಸೆಟ್ ಗೆ ನಿರಂತರ 7 ತಾಸು ಬದಲು 11ಗಂಟೆ ವಿದ್ಯುತ್ ಪೂರೈಸಬೇಕು,’’ ಎಂದು ದೇವಸಮುದ್ರ ಭಾಗದ ರೈತರು ಒತ್ತಾಯಿಸಿದ್ದಾರೆ.
‘‘ಸದ್ಯ 7 ತಾಸು ವಿದ್ಯುತ್ ಪೂರೈಕೆಯಿಂದ ಪಂಪ್ ಸೆಟ್ ಗಳಿಂದ ಗದ್ದೆಗಳಿಗೆ ನೀರು ಸಮರ್ಪಕವಾಗಿ ಹಾಯಿಸಲು ಸಾಧ್ಯವಾಗುತ್ತಿಲ್ಲ. ಭತ್ತದ ಗದ್ದೆಗಳು ಒಣಗಿವೆ. ನೆಲ ಹಸಿಯಾಗಿಡಲು ಸಾಧ್ಯವಾಗುತ್ತಿಲ್ಲ. ಕಾಲುವೆ ನೀರನ್ನು ಪಂಪ್ ಸೆಟ್ ಮೂಲಕ ಒದಗಿಸಲು ಎಕರೆಗೆ 4 ತಾಸು ವಿದ್ಯುತ್ ಬೇಕು. ಬೋರ್ ವೆಲ್ ಗಳಲ್ಲಿಅಂತರ್ಜಲ ಮಟ್ಟ ಕುಸಿತವಾಗಿದ್ದು, ವಿದ್ಯುತ್ ಪಂಪ್ ಸೆಟ್ ಮೂಲಕ ನೀರು ಹಾಯಿಸಲು ಹೆಚ್ಚು ಸಮಯ ಬೇಕು. ಸದ್ಯ 7 ತಾಸು ಒದಗಿಸುತ್ತಿರುವ ವಿದ್ಯುತ್ ನಿಂದ ಭತ್ತದ ಗದ್ದೆಗೆ ನೀರು ಹಾಯಿಸಲು ಅಡಚಣೆಯಾಗಿದ್ದು, ಸಸಿಗಳ ಬೆಳವಣಿಗೆ ಕುಂಠಿತವಾಗಿದೆ. ರೈತರಿಗೆ ಕನಿಷ್ಠ 2 ತಿಂಗಳು ನಿತ್ಯ ನಿರಂತರ 11 ತಾಸು ವಿದ್ಯುತ್ ಪೂರೈಸಬೇಕು,’’ ಎಂದು ರೈತರಾದ ನಗರದ ಮಲ್ಲೆಪ್ಪ, ಕಡೆಮನೆ ಮಂಜುನಾಥ, ಕರೇಗೌಡ್ರು ಮಾಕಪ್ಪ, ಕೆರೆಕೆರೆ ಪಂಪಾಪತಿ, ಕರೆಗೌಡ್ರು ರಾಮನಗೌಡ, ಸಿ.ತಿಮ್ಮಯ್ಯ ಸೇರಿ ಇತರರು ಆಗ್ರಹಿಸಿದ್ದಾರೆ.
ಪೊ.ಶೀ.17ಕೆಎಂಪಿ1;-
ಕಂಪ್ಲಿತಾಲೂಕಿನ ದೇವಸಮುದ್ರ ಭಾಗದ ಪಂಪ್ ಸೆಟ್ ಆಧಾರಿತ ಕೃಷಿ ಭೂಮಿಗೆ ಸಮರ್ಪಕ ನೀರು ಹರಿಯದೆ ಭತ್ತದ ಗದ್ದೆ ಒಣಗಿದೆ.