ಎಟಿಎಂ ಒಡೆದು 14 ಲಕ್ಷ ರೂ.ಕಳ್ಳತನ

Contributed byKalmesh Pattandavar|Vijaya Karnataka
atm theft of 14 lakhs in byahatti sull
ಸುಳ್ಳ , ಬ್ಯಾಹಟ್ಟಿ ಗ್ರಾಮದಲ್ಲಿನಡೆದ ಘಟನೆ

ಎಟಿಎಂ ಒಡೆದು 14 ಲಕ್ಷ ರೂ. ಕಳ್ಳತನ
ವಿಕ ಸುದ್ದಿಲೋಕ ಹುಬ್ಬಳ್ಳಿ

ತಾಲೂಕಿನ ಬ್ಯಾಹಟ್ಟಿ ಮತ್ತು ಸುಳ್ಳ ಗ್ರಾಮದ ಕೆನರಾ ಬ್ಯಾಂಕ್ ನ ಎಟಿಎಂಗಳ ಶೆಟರ್ ಲಾಕ್ ಮುರಿದು ಕನ್ನ ಹಾಕಿರುವ ಕಳ್ಳರು, ಎಟಿಎಂನಲ್ಲಿದ್ದ 14 ಲಕ್ಷ ರೂ. ಕಳ್ಳತನ ಮಾಡಿ ಪರಾರಿ ಆಗಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.

ಬ್ಯಾಹಟ್ಟಿ ಗ್ರಾಮದ ಎಟಿಎಂನಲ್ಲಿದ್ದ 3 ಲಕ್ಷ ರೂ. ಹಾಗೂ ಸುಳ್ಳ ಗ್ರಾಮದ ಎಟಿಎಂನಲ್ಲಿದ್ದ 11 ಲಕ್ಷ ರೂ. ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಎಟಿಎಂ ಕಳ್ಳತನಕ್ಕೆ ಬಂದಿದ್ದ ಕಳ್ಳರು, ಮುಂಭಾಗ ಮತ್ತು ಒಳಭಾಗದಲ್ಲಿದ್ದ ಕ್ಯಾಮೆರಾಗಳನ್ನು ಒಡೆದು ಹಾಕಿದ್ದಾರೆ.

ಘಟನಾ ಸ್ಥಳಕ್ಕೆ ಎಸ್ಪಿ ಗುಂಜನ್ ಆರ್ಯ, ಡಿಎಸ್ಪಿ ಶಿವಾನಂದ ಕಟಗಿ, ಸಿಪಿಐ ಮುರಗೇಶ ಚನ್ನಣ್ಣನವರ, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಶೋಧ ಕಾರ್ಯ ಮುಂದುವರಿದಿದೆ.

ಕೋಟ್ ;

ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಹಾಗೂ ಸುಳ್ಳ ಗ್ರಾಮದ ಕೆನರಾ ಬ್ಯಾಂಕ್ ನ ಎಟಿಎಂನಲ್ಲಿಕಳುವು ಆಗಿದ್ದು, ಒಟ್ಟು 14 ಲಕ್ಷ ರೂ. ಕಳ್ಳತನವಾಗಿದೆ. ಸ್ಥಳ ಪರಿಶೀಲನೆ ವೇಳೆ ಕೆಲವೊಂದಿಷ್ಟು ಸುಳಿವು ದೊರೆತಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು.

- ಗುಂಜನ್ ಆರ್ಯ, ಎಸ್ಪಿ, ಧಾರವಾಡ