ಅಜ್ಜಂಪುರ ತಾಲೂಕು ಮಟ್ಟದ ಭಜನಾ ಪರಿಷತ್ ರಚನೆ

Contributed byvenkatesh.pavitra@gmail.com|Vijaya Karnataka
formation of ajjampur taluk level bhajana parishat new appointments and initiatives
ಅಜ್ಜಂಪುರ ತಾಲೂಕು ಮಟ್ಟದ ಭಜನಾ ಪರಿಷತ್ ರಚನೆ

ವಿಕ ಸುದ್ದಿಲೋಕ ಅಜ್ಜಂಪುರ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಜಿಲ್ಲಾಜನಜಾಗೃತಿ ವೇದಿಕೆ ಅಧ್ಯಕ್ಷ ಎ.ಸಿ.ಚಂದ್ರಪ್ಪ ಅಧ್ಯಕ್ಷತೆಯಲ್ಲಿತಾಲೂಕಿನ ಭಜನಾ ಮಂಡಳಿಗಳ ಸಭೆ ನಡೆಸಿ ತಾಲೂಕು ಮಟ್ಟದ ಭಜನಾ ಪರಿಷತ್ ರಚನೆ ಮಾಡಲಾಯಿತು.

ಅಧ್ಯಕ್ಷರಾಗಿ ಚಿಕ್ಕಾನವಂಗಲದ ಆಕಾಶವಾಣಿ ಕಲಾವಿದ ಸಿ.ಎಂ.ಶಂಕರಪ್ಪ, ಉಪಾಧ್ಯಕ್ಷ ನಾರಣಾಪುರ ಪ್ರಸನ್ನ, ಕಾರ್ಯದರ್ಶಿ ಶಿವನಿ ಪುಷ್ಪವತಿ, ಸಹ ಕಾರ್ಯದರ್ಶಿ ನಾರಣಾಪುರದ ಅಭಿಲಾಷ್ , ರೂಪಾ, ಕೋಶಾಧಿಕಾರಿ ಅಂತರಘಟ್ಟೆ ಸುನೀತಾ ಅವರು ಆಯ್ಕೆಯಾದರು.

ಮಂಜುನಾಥೇಶ್ವರ ಭಜನಾ ಪರಿಷತ್ ರಾಜ್ಯಾಧ್ಯಕ್ಷ ಚಂದ್ರಶೇಖರ ಸಾಲಿಯಾನ್ , ದಕ್ಷಿಣ ಕನ್ನಡ ಜಿಲ್ಲಾಸಮನ್ವಯಾಧಿಕಾರಿ ಸಂತೋಷ್ , ಕಡೂರು ತಾಲೂಕಿನ ಭಜನಾ ಪರಿಷತ್ ಅಧ್ಯಕ್ಷ ಗಂಗಾಧರ, ಕಾರ್ಯದರ್ಶಿ ರಾಜಪ್ಪ, ಕ್ಷೇತ್ರ ಯೋಜನಾಧಿಕಾರಿ ಕೊರಗಪ್ಪ ಪೂಜಾರಿ ಹಾಗೂ ತಾಲೂಕಿನ ಎಲ್ಲಭಜನಾ ಮಂಡಳಿಗಳ ಸದಸ್ಯರು ಇದ್ದರು.

11ಅಜ್ಜಂಪುರ03

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಅಜ್ಜಂಪುರ ತಾಲೂಕಿನ ಭಜನಾ ಮಂಡಳಿಗಳ ಸಭೆ ನಡೆಸಿ ತಾಲೂಕು ಮಟ್ಟದ ಭಜನಾ ಪರಿಷತ್ ರಚನೆ ಮಾಡಲಾಯಿತು.