ಕೇರಳದ ಆಸ್ಪತ್ರೆ ತ್ಯಾಜ್ಯ ಕರ್ನಾಟದಲ್ಲಿವಿಲೇವಾರಿ ತಾಲೂಕು ಕಚೇರಿ ಎದುರು ಪ್ರತಿಭಟನೆ

Contributed bymaheshmadahalli.vk@gmail.com|Vijaya Karnataka
protest against kerala hospital waste gundlupete struggle
ವಿಕ ಸುದ್ದಿಲೋಕ ಗುಂಡ್ಲುಪೇಟೆ

ಕೇರಳ ಆಸ್ಪತ್ರೆಗಳ ತ್ಯಾಜ್ಯವನ್ನು ಕರ್ನಾಟಕಕ್ಕೆ ಅಕ್ರಮವಾಗಿ ತಂದು ವಿಲೇವಾರಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಜಾರಕಿಹೊಳಿ ಬ್ರಿಗೇಡ್ ಪದಾಧಿಕಾರಿಗಳು ಪಟ್ಟಣದ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಪಟ್ಟಣದ ತಾಲೂಕು ಕಚೇರಿ ಮುಂದೆ ಸಮಾವೇಶಗೊಂಡು ತಾಲೂಕು ಆಡಳಿತ, ಪೊಲೀಸರು ಹಾಗೂ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರ ಹಾಕಿದರು.

ಜಾರಕಿಹೊಳಿ ಬ್ರಿಗೇಡ್ ಸಂಸ್ಥಾಪಕ ಗೋವಿನಾಯಕ ಮಾತನಾಡಿ,‘‘ಕೇರಳದಿಂದ ಗುಂಡ್ಲುಪೇಟೆ ತಾಲೂಕಿಗೆ ನಿತ್ಯ ಹತ್ತಾರು ವಾಹನಗಳಲ್ಲಿಆಸ್ಪತ್ರೆ ಹಾಗೂ ನಿರುಪಯುಕ್ತ ತ್ಯಾಜ್ಯವನ್ನು ತಂದು ಸುರಿಯಲಾಗುತ್ತಿದೆ. ಹೀಗಿದ್ದರೂ ಚೆಕ್ ಪೋಸ್ಟ್ ಗಳಲ್ಲಿಯಾವುದೇ ವಾಹನಗಳನ್ನು ತಪಾಸಣೆ ನಡೆಸುತ್ತಿಲ್ಲ,’’ಎಂದು ಆರೋಪಿಸಿದರು.

‘‘ತ್ಯಾಜ್ಯ ವಸ್ತುಗಳು ಕೇರಳದಿಂದ ಗುಂಡ್ಲುಪೇಟೆಗೆ ಬರುತ್ತಿರುವ ವಿಚಾರವಾಗಿ ಜಾರಕಿಹೊಳಿ ಬ್ರಿಗೇಡ್ ವತಿಯಿಂದ ಈ ಮೊದಲೇ ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದರೂ ಕ್ರಮವಹಿಸಿಲ್ಲ. ಆದ್ದರಿಂದ ಈ ಸಂಬಂಧ ತಕ್ಷಣ ಚೆಕ್ ಪೋಸ್ಟ್ ಗಳಲ್ಲಿತನಿಖೆ ಚುರುಕುಗೊಳಿಸಿ ಇಂತಹ ಮಾರಕ ತ್ಯಾಜ್ಯಗಳು ಗುಂಡ್ಲುಪೇಟೆಗೆ ಬರದಂತೆ ತಡೆಬೇಕು. ಇಲ್ಲದಿದ್ದರೆ ಮುಂದಿನ ದಿಗಳಲ್ಲಿಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು,’’ಎಂದು ಎಚ್ಚರಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ತನ್ಮಯ್ , ‘‘ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಕಡಿವಾಣ ಹಾಕಲು ಕ್ರಮ ವಹಿಸುವುದಾಗಿ,’’ ಭರವಸೆ ನೀಡಿದರು.

ಜಾರಕಿಹೊಳಿ ಬ್ರಿಗೇಡ್ ತಾಲೂಕು ಅಧ್ಯಕ್ಷ ರಮೇಶ್ ಮದಕರಿ, ರವಿ, ಧನುಷ್ ಗೌಡ, ಶೀನ, ಚೇತನ್ , ಮುನ್ನ, ಮೂರ್ತಿ, ಆಕಾಶ್ , ರಾಕಿ, ವಿಕ್ಕಿ ಹಾಜರಿದ್ದರು.

ಸಿಎಚ್ ಎನ್ 15ಜಿಪಿಟಿ8

ಗುಂಡ್ಲುಪೇಟೆ ಪಟ್ಟಣದ ತಾಲೂಕು ಕಚೇರಿ ಮುಂದೆ ಜಾರಕಿಹೊಳಿ ಬ್ರಿಗೇಡ್ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.