ಎಚ್ ಐವಿ ಬಾಧಿತ ವ್ಯಕ್ತಿ ಎಲ್ಲರಂತೆ ಜೀವಿಸಬಹುದು

Contributed bychethan.bp@timesofindia.com|Vijaya Karnataka
living beyond hiv a decision from the hospital
‘ಎಚ್ ಐವಿ ಬಾಧಿತ ವ್ಯಕ್ತಿ ಎಲ್ಲರಂತೆ ಜೀವಿಸಬಹುದು’

ವಿಕ ಸುದ್ದಿಲೋಕ ಚಿಕ್ಕಮಗಳೂರು
ಹಿಂದೆ ಎಚ್ ಐವಿ ಸೋಂಕಿತ ವ್ಯಕ್ತಿಗೆ ಸಾವು ಬಿಟ್ಟರೆ ಬೇರೆ ಮಾರ್ಗವಿರಲಿಲ್ಲ. ಆದರೆ, ಇಂದು ವೈದ್ಯಕೀಯ ಸಂಶೋಧನೆಗಳ ಫಲವಾಗಿ ಸೋಂಕಿನ ವ್ಯಕ್ತಿ ಕಾಯಿಲೆಯಿಂದ ಸಂಪೂರ್ಣ ಮುಕ್ತರಾಗದಿದ್ದರೂ ಎಲ್ಲರಂತೆ ದೀರ್ಘಕಾಲ ಜೀವಿಸಬಹುದು ಎಂದು ಎಂಇಎಸ್ ಗೌರವ ಕಾರ್ಯದರ್ಶಿ ಡಾ. ಡಿ.ಎಲ್ .ವಿಜಯ್ ಕುಮಾರ್ ಹೇಳಿದರು.

ನಗರದ ಮಲೆನಾಡು ವಿದ್ಯಾಸಂಸ್ಥೆಯಲ್ಲಿಶುಕ್ರವಾರ ಆಯೋಜಿಸಿದ್ಧ ಎಚ್ ಐವಿ, ಏಡ್ಸ್ ಕುರಿತ ಜಾಗೃತಿ ಬೀದಿ ನಾಟಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಎಚ್ ಐವಿ ಬಾಧಿತರಾದ ವ್ಯಕ್ತಿಗೆ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಒಟ್ಟಿಗೆ ಆಹಾರ ಸೇವಿಸುವುದರಿಂದ, ಓಡಾಡುವುದರಿಂದ ಕಾಯಿಲೆ ಅಂಟಿಕೊಳ್ಳುವುದಿಲ್ಲ. ಆದರೆ, ನಮ್ಮಗಳ ಎಚ್ಚರಿಕೆ ಸದಾ ಇರಬೇಕು ಎಂದರು.

ಎಂಇಎಸ್ ಸಹ ಕಾರ್ಯದರ್ಶಿ ಎಸ್ .ಶ್ರೀಧರ್ ಮಾತನಾಡಿ, ಏಡ್ಸ್ ಎಂಬ ಪಿಡುಗನ್ನು ಮೊಳಕೆಯಲ್ಲೇ ಚಿವುಟಿ ಹಾಕುವ ಹಿನ್ನೆಲೆಯಲ್ಲಿವಿದ್ಯಾರ್ಥಿಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ. ಈ ಬಗ್ಗೆ ಉಪಯುಕ್ತ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿಲಭ್ಯವಾಗಲಿದ್ದು, ಎಲ್ಲರೂ ವಿಷಯ ಅರಿತುಕೊಂಡು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಎಂ.ವಿ.ಷಡಕ್ಷರಿ, ಎಂಇಎಸ್ ಶೈಕ್ಷಣಿಕ ಸಲಹೆಗಾರ ಮಂಜುನಾಥ್ ಭಟ್ , ಕಚೇರಿ ವ್ಯವಸ್ಥಾಪಕಿ ಶ್ರೀಲಕ್ಷ್ಮಿಸೇರಿದಂತೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.

11ಚೇತನ್ ಪಿ-3

ಚಿಕ್ಕಮಗಳೂರಿನ ಮಲೆನಾಡು ವಿದ್ಯಾಸಂಸ್ಥೆಯಲ್ಲಿಆಯೋಜಿಸಿದ್ದ ಎಚ್ ಐವಿ ಜಾಗೃತಿ ಬೀದಿ ನಾಟಕ ಕಾರ್ಯಕ್ರಮವನ್ನು ಎಂಇಎಸ್ ಕಾಲೇಜು ಗೌರವ ಕಾರ್ಯದರ್ಶಿ ಡಾ.ಡಿ.ಎಲ್ .ವಿಜಯ್ ಕುಮಾರ್ ಉದ್ಘಾಟಿಸಿದರು.