ಎಲ್ಲಾಸಮುದಾಯ ಪರ ಕೆಲಸ ಮಾಡುವೆ

Contributed byadarshkodi15@gmail.com|Vijaya Karnataka
dheeraj muniraju happy for the development of the vishwakarma community
ಎಲ್ಲಾಸಮುದಾಯ ಪರ ಕೆಲಸ ಮಾಡುವೆ

((ವಿಶ್ವಕರ್ಮ ಜಯಂತ್ಯುತ್ಸವದಲ್ಲಿಶಾಸಕ ಧೀರಜ್ ಮುನಿರಾಜು ಹೇಳಿಕೆ))
ವಿಕ ಸುದ್ದಿಲೋಕ ದೊಡ್ಡಬಳ್ಳಾಪುರ

ತಾಲೂಕಿನಲ್ಲಿ50 ರಿಂದ 55 ಸಮುದಾಯಗಳ ಜನರಿದ್ದಾರೆ. ಈ ಎಲ್ಲಾಸಮುದಾಯಗಳ ಪರವಾಗಿ ಕೆಲಸ ಮಾಡುತ್ತೇನೆ ಎಂದು ಶಾಸಕ ಧೀರಜ್ ಮುನಿರಾಜು ತಿಳಿಸಿದರು.

ತಾಲೂಕಿನ ಕನಸವಾಡಿ ಕಾಲೊನಿಯಲ್ಲಿಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಮಧುರೆ ಹೋಬಳಿ ಘಟಕದಿಂದ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತ್ಯುತ್ಸವದಲ್ಲಿಅವರು ಮಾತನಾಡಿದರು.

ವಿಶ್ವಕರ್ಮ ಸಮುದಾಯ 5 ನಾನಾ ಕುಲಕಸುಬು ಮಾಡಲಿದೆ. ವಿಶೇಷವಾಗಿ ರೈತರಿಗೆ ಸಹಕಾರ ನೀಡುತ್ತಾ ಗ್ರಾಮೀಣ ಬದುಕಿನೊಂದಿಗೆ ಬೆರೆತುಕೊಂಡು ಬಂದಿದೆ. ದೇಶದಲ್ಲಿಪಿಎಂ ವಿಶ್ವಕರ್ಮ ಯೋಜನೆಯಡಿ ವಿಶೇಷ ಕೌಶಲಾಧರಿತ ಕಸುಬು ನೆಚ್ಚಿಕೊಂಡಿರುವವರಿಗೆ ಸಾಲಸೌಲಭ್ಯ, ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಈ ಸಮುದಾಯದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.

ಕೌಶಲಗಳ ಕಲಿಸಲು ತರಬೇತಿ ಕೇಂದ್ರಕ್ಕಾಗಿ ನಿವೇಶನ ಒದಗಿಸಬೇಕೆಂಬ ವಿಶ್ವಕರ್ಮ ಸಮುದಾಯದವ ಮನವಿಗೆ ಸ್ಪಂದಿಸಿದ ಶಾಸಕರು, ವಿಶ್ವಕರ್ಮ ನಿಗಮದಡಿ ಹೆಚ್ಚಿನ ಸೌಲಭ್ಯವನ್ನು ತಾಲೂಕಿನ ಜನತೆಗೆ ತಂದುಕೊಡುವ ಕೆಲಸ ಮಾಡುತ್ತೇನೆ. ವೃತ್ತಿ ಕೌಶಲಗಳನ್ನು ಕಲಿಸಲು ನಿಗಮದಡಿ ತರಬೇತಿ ಕೇಂದ್ರ ಆರಂಭಕ್ಕೆ ಪ್ರಯತ್ನಿಸಲಾಗುತ್ತದೆ. 10 ಗುಂಟೆ ಜಾಗವನ್ನು ಇದಕ್ಕಾಗಿ ನೀಡಲು ಪ್ರಯತ್ನಿಸಲಾಗುವುದು ಎಂದರು.

ಈ ವೇಳೆ ಮುಖಂಡರಾದ ಕೆ.ವಿ. ಪ್ರಕಾಶ್ , ಟಿ. ವಿಜಯ್ ಕುಮಾರ್ , ರಮೇಶ್ , ಬಾಬಣ್ಣ, ಮಂಜುನಾಥಚಾರ್ , ಪುಟ್ಟ ಹೊನ್ನಾಚಾರ್ , ಶಿವರಾಜಚಾರ್ , ವೆಂಕಟೇಶಚಾರ್ , ಗೋಪಾಲಚಾರ್ , ಆನಂದ್ ಮೂರ್ತಿ, ರೂಪ, ನೇತ್ರಾವತಿ, ಮುರುಳಿ, ಘಾಟಿ ಸುಬ್ರಮಣ್ಯ, ಗಂಗಣ್ಣ, ಮನು ಹಾಜರಿದ್ದರು.

ಫೋಟೋ:1709ವಿಕೆ4: ದೊಡ್ಡಬಳ್ಳಾಪುರದ ಕನಸವಾಡಿ ಕಾಲೊನಿಯಲ್ಲಿಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತ್ಯುತ್ಸವದಲ್ಲಿಶಾಸಕ ಧೀರಜ್ ಮುನಿರಾಜು ಭಾಗವಹಿಸಿದ್ದರು.