ಇಂದು ತರಬೇತಿ

Contributed bymandalamari84@gmail.com|Vijaya Karnataka
training program organized by state cooperative apex bank
ಇಂದು ತರಬೇತಿ

ಕುಷ್ಟಗಿ: ಪಟ್ಟಣದ ಎಸ್ ಎಂ ಸಭಾ ಭವನದಲ್ಲಿಸೆ.3 ರಂದು ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾಸಹಕಾರ ಯೂನಿಯನ್ , ಆರ್ ಕೆಡಿಸಿಸಿ ಬ್ಯಾಂಕ್ ರಾಯಚೂರು ಹಾಗೂ ಸಹಕಾರ ಇಲಾಖೆ ಸಂಯುಕ್ತಾಶ್ರಯದಲ್ಲಿ
ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಾಹಕರಿಗೆ ತರಬೇತಿ ನಡೆಯಲಿದೆ.

ಆರ್ ಕೆಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಶಿವಶಂಕರಗೌಡ ಪಾಟೀಲ್ ಕಡೂರು ಉದ್ಘಾಟನೆ, ಜಿಲ್ಲಾಸಹಕಾರ ಯೂನಿಯನ್ ನ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಉಪಾಧ್ಯಕ್ಷ ಹಾಲಯ್ಯ ವಿ.ಹುಡೇಜಾಲಿ, ಜಿಲ್ಲಾಸಹಕಾರ ಯೂನಿಯನ್ ನಿರ್ದೇಶಕ ಮಹಾಂತೇಶ ಎಸ್ . ಸಜ್ಜನ್ , ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ.ಬದ್ರಿ ಪ್ರಸಾದ್ ಪಾಲ್ಗೊಳ್ಳಲಿದ್ದಾರೆ.