ಮತದಾನ ನಮ್ಮ ನೈತಿಕ ಕರ್ತವ್ಯ

Contributed bypbdkdl72@gmail.com|Vijaya Karnataka
voting is our moral duty the necessity of every citizens vote
ಚಿತ್ರ3ಕೆಡಿಎಲ್ 2: ಕೊಡೇಕಲ್ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿಗುರುವಾರ ನಡೆದ ಸಚೇತನ ಕಾರ್ಯಕ್ರಮದಲ್ಲಿಮತದಾನ ಮಹತ್ವದ ಕುರಿತು ಜಾಗೃತಿ ಮೂಡಿಸಲಾಯಿತು.

* ಶಾಲೆಯಲ್ಲಿಸಚೇತನ ಕಾರ್ಯಕ್ರಮ | ಮತದಾನದ ಮಹತ್ವ ಜಾಗೃತಿ
ಮತದಾನ ನಮ್ಮ ನೈತಿಕ ಕರ್ತವ್ಯ

ವಿಕ ಸುದ್ದಿಲೋಕ ಕೊಡೇಕಲ್

ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿಗುರುವಾರ ಶಾಲಾ ಶಿಕ್ಷಣ ಇಲಾಖೆಯ ಸಚೇತನ ಚಟುವಟಿಕೆಗಳ ಭಾಗವಾಗಿ ಬೆಳಗಿನ ಪ್ರಾರ್ಥನಾ ಅವಧಿಯಲ್ಲಿಜರುಗಿದ ಮತದಾನದ ಮಹತ್ವ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಕುರಿತು ಜಾಗೃತಿ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು.

ಪ್ರಾರ್ಥನೆ ಬಳಿಕ ಆರಂಭವಾದ ಕಾರ್ಯಕ್ರಮದಲ್ಲಿಮಾತನಾಡಿದ ಮುಖ್ಯಗುರು ರಾಚಮ್ಮ ಪೂಜಾರಿ, ಪ್ರಜಾಪ್ರಭುತ್ವದ ಯಶಸ್ಸು ಪ್ರತಿಯೊಬ್ಬ ನಾಗರಿಕನ ಮತದಾನದ ಮೇಲೆ ಆಧಾರಿತವಾಗಿದೆ, ಪ್ರತಿಯೊಬ್ಬ ಅರ್ಹ ನಾಗರಿಕನು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಕಡ್ಡಾಯವಾಗಿ ಮತದಾನ ಮಾಡುವುದು ನಮ್ಮ ನೈತಿಕ ಕರ್ತವ್ಯವಾಗಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

* ಗಮನಸೆಳೆದ ಜಾಗೃತಿ

ಸಚೇತನ ಕಾರ್ಯಕ್ರಮದ ನಿಮಿತ್ತ ವಿದ್ಯಾರ್ಥಿಗಳು ಮತದಾನ ಜಾಗೃತಿ ಮೂಡಿಸುವ ಬಿತ್ತಿಪತ್ರಗಳನ್ನು ಪ್ರದರ್ಶಿಸಿದರು ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ಭಾಷಣ, ನಾಟಕ ಮತ್ತು ರಸಪ್ರಶ್ನೆ ಸ್ಪರ್ಧೆಗಳಲ್ಲಿಸಕ್ರೀಯವಾಗಿ ಪಾಲ್ಗೊಂಡರು. ನಂತರ ತಮ್ಮ ಪಾಲಕ, ಪೋಷಕರು, ನೆರೆ ಹೊರೆಯವರಿಗೆ ಕಡ್ಡಾಯವಾಗಿ ಮತದಾನದ ಜಾಗೃತಿ ಮೂಡಿಸುವುದಾಗಿ ವಿದ್ಯಾರ್ಥಿಗಳು ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿಎಸ್ ಡಿಎಂಸಿ ಅಧ್ಯಕ್ಷ ಬಸವರಾಜ ದೊಡಮನಿ, ಸರೋಜಿನಿ ಕುಲಕರ್ಣಿ, ಯಮನೂರಪ್ಪ, ಪೂಜಾ, ಪುಷ್ಪಾವತಿ, ಸುಜಾತ, ಜೆಟ್ಟೆಪ್ಪ ಅನೇಕರಿದ್ದರು.