ಜಪಾನಿ ಸಂಸ್ಕೃತಿ ಸಾರುವ ಪದಕಗಳು

Contributed byHarsha Vardhana|Vijaya Karnataka
special japanese medals of the 2026 asian games design and cultural significance
ಐಚಿ- ನಗೋಯಾ 2026 ಏಷ್ಯನ್ ಕ್ರೀಡಾಕೂಟದ ಪದಕಗಳು ವಿಶೇಷ ವಿನ್ಯಾಸ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿವೆ. ‘ಇಮ್ಯಾಜಿನ್ ಒನ್ ಏಷ್ಯಾ’ ಎಂಬ ಘೋಷವಾಕ್ಯದ ಅಡಿ ವಿನ್ಯಾಸಗೊಳಿಸಲಾದ ಈ ಪದಕಗಳು, ಕ್ರೀಡೆಯ ಮೂಲಕ ಏಷ್ಯಾದ ವೈವಿಧ್ಯತೆ ಮತ್ತು ಏಕತೆಯನ್ನು ಬಿಂಬಿಸುತ್ತವೆ. ಚಿನ್ನದ ಪದಕ 265 ಗ್ರಾಂ ತೂಕವಿದ್ದು ಶುದ್ಧ ಬೆಳ್ಳಿ ಮತ್ತು ಕನಿಷ್ಠ 1 ಗ್ರಾಂ. ಚಿನ್ನದ ಲೇಪನವನ್ನು ಹೊಂದಿದೆ. ಬೆಳ್ಳಿಯ ಪದಕ 264 ಗ್ರಾಂ ತೂಕವಿದ್ದು ಸಂಪೂರ್ಣ ಬೆಳ್ಳಿಯಿಂದ ತಯಾರಾಗಿದೆ. ಕಂಚಿನ ಪದಕ 222 ಗ್ರಾಂ ತೂಕವಿದ್ದು ಶೇ.95ರಷ್ಟು ತಾಮ್ರ, ಶೇ.5ರಷ್ಟು ಜಿಂಕ್ ನಿಂದ ರೂಪಿತವಾಗಿದೆ.

ಈ ಪದಕಗಳು 80 ಮಿ.ಮೀ ವ್ಯಾಸ ಮತ್ತು 5 ಮಿ.ಮೀ ದಪ್ಪವನ್ನು ಹೊಂದಿದ್ದು, ಅದರ ವಿನ್ಯಾಸವು ಕ್ರೀಡಾಪಟುಗಳು ಯಶಸ್ಸಿನ ಹಾದಿಯಲ್ಲಿಎದುರಿಸುವ ಸವಾಲುಗಳು ಮತ್ತು ಪರಿಶ್ರಮವನ್ನು ಪ್ರತಿನಿಧಿಸುತ್ತದೆ. ಪದಕದ ಪೆಟ್ಟಿಗೆಯು ಅಷ್ಟಭುಜಾಕೃತಿಯಲ್ಲಿದ್ದು, ಜಪಾನಿ ಸಂಸ್ಕೃತಿಯಲ್ಲಿಪವಿತ್ರ ಸ್ಥಾನ ಪಡೆದ ಹಿನೋಕಿ ಮರದಿಂದ ತಯಾರಿಸಲಾಗಿದೆ.