ಹಾನಗಲ್ಲ : ಇಲ್ಲಿನ ಕಾಶ್ಮೀರಿ ದರ್ಗಾ ಹಿಂಭಾಗದ ಕೊಟ್ಟಿಗೇರಿ ಓಣಿಯಲ್ಲಿಅಕ್ಕಪಕ್ಕದ ಮೂರು ಮನೆಗಳಲ್ಲಿಕಳ್ಳತನವಾಗಿದೆ.
ಸಂಬಂಧಿಕರಾದ ಪ್ರೇಮಾನಂದ ವೆಂಕಟೇಶ ಶೇಟ್ , ಆನಂದ ನಾಗರಾಜ ಶೇಟ್ ಮತ್ತು ಮಂಜುನಾಥ ಶೇಟ್ ಅವರ ಮನೆ ಕಳ್ಳತನ ಕ್ಕೆ ಗುರಿಯಾಗಿವೆ. ಲಕ್ಷಾಂತರ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳು ಕಳವು ಮಾಡಲಾಗಿದೆ. ಗಣೇಶ ಚತುರ್ಥಿ ಆಚರಣೆಗಾಗಿ ಕುಮಟಾ ತಾಲೂಕು ಕೆಕ್ಕಾರ ಗ್ರಾಮಕ್ಕೆ ಮೂರು ಮನೆಯ ಜನರು ಹೋಗಿದ್ದ ಸಮಯ ಗಮನಿಸಿ ಕಳ್ಳರು ಕೃತ್ಯ ಎಸಗಿದ್ದಾರೆ. ಒಟ್ಟು 9 ಲಕ್ಷಕ್ಕೂ ಅಧಿಕ ಮೌಲ್ಯದ ನಗದು ಮತ್ತು ಚಿನ್ನಾಭರಣ ಕಳ್ಳತನವಾಗಿದೆ ಎಂದು ಹಾನಗಲ್ಲಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಮತ್ತು ಬೆರಳಚ್ಚು, ಶ್ವಾನ ದಳ ಆಗಮಿಸಿ ತನಿಖೆ ನಡೆಸಿದ್ದಾರೆ. ಒಂದು ವಾರದ ಹಿಂದೆ ಈಶ್ವರ ನಗರದಲ್ಲಿಬೀಗ ಹಾಕಿದ್ದ ಅಕ್ಕಪಕ್ಕದ ಎರಡು ಮನೆಗಳ ಕಳ್ಳತನ ಘಟನೆ ಮಾಸುವ ಮುನ್ನವೇ ಮತ್ತೆ ಮೂರು ಮನೆಗಳು ಕಳ್ಳತನಕ್ಕೆ ಒಳಗಾಗಿವೆ.