ಪರಿಸರ ಸ್ನೇಹಿ ಗಣೇಶ ಸ್ಪರ್ಧೆ

Contributed byphalalochanaradhya.ks@timesofindia.com|Vijaya Karnataka
eco friendly ganesh competition a festival of environmental awareness for children
ವಿದ್ಯಾರ್ಥಿಗಳಿಗೆ ಪರಿಸರ ಸ್ನೇಹಿ ಗಣೇಶ ಸ್ಪರ್ಧೆ

ಹ್ಯಾಬಿಟ್ ಫೌಂಡೇಶನ್ ನಿಂದ ಆಯೋಜನೆ
ವಿಕ ಸುದ್ದಿಲೋಕ ಚಾಮರಾಜನಗರ

ನಗರದ ಕೊಳದ ಬೀದಿ ಗಣಪತಿ ದೇವಸ್ಥಾನದ ಬಳಿ ಭಾನುವಾರ ಹ್ಯಾಬಿಟ್ ಫೌಂಡೇಶನ್ ವತಿಯಿಂದ ಗೌರಿ-ಗಣೇಶ ಹಬ್ಬದ ಅಂಗವಾಗಿ ಎರಡನೆ ವರ್ಷದ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಕಾ ಸ್ಪರ್ಧೆಯನ್ನು ನಡೆಸಲಾಯಿತು.

ಸ್ಪರ್ಧೆಯಲ್ಲಿ101 ಮಕ್ಕಳು ಭಾಗವಹಿಸಿ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸಿದರು. ಮಕ್ಕಳಲ್ಲಿಪರಿಸರ ಜಾಗೃತಿ ಮೂಡಿಸುವುದು ಹಾಗೂ ಮಣ್ಣಿನ ಗಣೇಶನ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಆಯೋಜಕರು ತಿಳಿಸಿದರು.

ಇದೇ ವೇಳೆ ಮಕ್ಕಳು ತಯಾರಿಸಿದ ಮೂರ್ತಿಗಳನ್ನೇ ತಮ್ಮ ಮನೆಗಳಿಗೆ ತೆಗೆದುಕೊಂಡು ಹೋಗಿ ಪೂಜಿಸಲು ಅವಕಾಶ ಕಲ್ಪಿಸಲಾಯಿತು. ಭಾಗವಹಿಸಿದ್ದ ಎಲ್ಲಾಮಕ್ಕಳಿಗೂ ಪ್ರಮಾಣ ಪತ್ರ ಹಾಗೂ ವಿಜೇತ ಮಕ್ಕಳಿಗೆ ಪದಕ ಮತ್ತು ಪ್ರಶಂಸಾ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು.

ಮುಖ್ಯ ಅತಿಥಿಗಳಾಗಿ ಗುಡ್ ಹ್ಯಾಬಿಟ್ ಫೌಂಡೇಶನ್ ಸಲಹಾ ಸಮಿತಿ ಸದಸ್ಯ ಡಾ. ಜಗದೀಶ್ , ಅಧ್ಯಕ್ಷ ಮನೋಜ್ , ಕಾರ್ಯಕ್ರಮ ನಿರ್ವಾಹಕ ವಿಜಯ್ ಪ್ರಸಾದ್ , ಸ್ವಯಂ ಸೇವಕ ಸಂಯೋಜಕಿ ಕೃತಿಕಾ ಹಾಗೂ ಸ್ವಯಂ ಸೇವಕರಾದ ವಿಕಾಸ್ , ವೀರೇಶ್ , ರೀತಿಕಾ, ಸುನಿಲ್ ಹಾಜರಿದ್ದರು.

====

ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮಾಡುತ್ತಿರುವ ಮಕ್ಕಳು