ವಿಮೋಚನೆಗೆ ದೊಡ್ಡಪ್ಪ ಅಪ್ಪ ಕೊಡುಗೆ ಅಪಾರ

Contributed bybhrahmanand.arali@timesgroup.com|Vijaya Karnataka
kalyana karnataka liberation huge contribution of dodappa appa
ಚಿತ್ರ: ಎಸ್ ಬಿ ಟೆಂಪಲ್

ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯ ಪ್ರಯುಕ್ತ ಕಾರ್ಯದರ್ಶಿ ಬಸವರಾಜ ದೇಶಮುಖ ಧ್ವಜಾರೋಹಣಗೈದರು, ನಿರ್ದೇಶಕರು, ಪ್ರಾಚಾರ್ಯರು, ಶಿಕ್ಷಕ, ಶಿಕ್ಷಕೇತರರು ಇದ್ದರು.
**

ವಿಮೋಚನೆಗೆ ದೊಡ್ಡಪ್ಪ ಅಪ್ಪ ಕೊಡುಗೆ ಅಪಾರ

ವಿಕ ಸುದ್ದಿಲೋಕ ಕಲಬುರಗಿ

ಕಲ್ಯಾಣ ಕರ್ನಾಟಕ ವಿಮೋಚನೆ ಪಡೆಯಲು ಶರಣಬಸವೇಶ್ವರ ಸಂಸ್ಥಾನದ ಏಳನೇ ಪೀಠಾಧಿಪತಿ ಪೂಜ್ಯ ಲಿಂ.ದೊಡ್ಡಪ್ಪ ಅಪ್ಪ ಅವರ ಕೊಡುಗೆ ಅಪಾರವಿದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಹೇಳಿದರು.

ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿಗುರುವಾರ ಹೈದರಾಬಾದ್ ವಿಮೋಚನಾ ದಿನಾಚರಣೆ ಪ್ರಯುಕ್ತ ರಾಷ್ಟ್ರ ಧ್ವಜಾರೋಹಣಗೈದು ಮಾತನಾಡಿ, ದೇಶ ಸ್ವಾತಂತ್ರ್ಯ ಕಂಡರೂ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಸ್ವಾತಂತ್ರ್ಯ ದೊರಕಿರಲಿಲ್ಲ, ಸರ್ದಾರ್ ವಲ್ಲಭಭಾಯಿ ಪಟೇಲ ಅವರ ನೇತೃತ್ವದಲ್ಲಿಹೈದರಾಬಾದ್ ನಿಜಾಮನಿಂದ ಈ ಭಾಗಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟರು ಎಂದು ಹೇಳಿದರು.

ಶರಣಬಸವೇಶ್ವರ ದೇವಸ್ಥಾನ ಆವರಣದ ಶಾಲಾ ಕಾಲೇಜುಗಳ ನಿರ್ದೇಶಕ ಡಾ.ನೀಲಾಂಬಿಕಾ ಶೇರಿಕಾರ, ಪ್ರಾಚಾರ್ಯ ಡಾ.ಎಂ.ಆರ್ .ಹುಗ್ಗಿ, ಬಾಬುರಾವ ಚವ್ಹಾಣ, ಡಾ.ಸೀಮಾ ಪಾಟೀಲ, ಡಾ.ಕಲ್ಪನಾ ಭೀಮಳ್ಳಿ, ಜ್ಯೋತಿ ಮಲ್ಲಾಪುರೆ, ಶಿವಕುಮಾರ ಸಜ್ಜನ್ , ಖಂಡೇರಾವ್ ಸಾತಖೇಡ, ವಿನೋದ ಪತಂಗೆ, ಶರಣಬಸಪ್ಪ ಪಾಟೀಲ, ದೈಹಿಕ ಶಿಕ್ಷಣ ನಿರ್ದೇಶಕರು ಮತ್ತು ಎಲ್ಲಶಿಕ್ಷಕ, ಶಿಕ್ಷಕೇತರರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.