ಕಾಸರಗೋಡು: ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ 25 ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿರಾಷ್ಟ್ರೀಯ ಮಟ್ಟದಲ್ಲಿಆಯೋಜಿಸಲಾಗುತ್ತಿರುವ ‘ಸೇವಾ ಸಂಕಲ್ಪ ಅಭಿಯಾನ್ ’ದ ಅಂಗವಾಗಿ ಸೆ.17ರಿಂದ ಆರಂಭಗೊಂಡು ಅಕ್ಟೋಬರ್ 17ರವರೆಗೆ ಕಾಸರಗೋಡು ಜಿಲ್ಲೆಯಲ್ಲಿವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.ನರೇಂದ್ರ ಮೋದಿಯವರ ಜನ್ಮದಿನವಾದ ಸೆ.17ರಂದು ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿಆಯುರಾರೋಗ್ಯಕ್ಕಾಗಿ ಪೂಜೆ ಹಾಗೂ ವಿಶೇಷ ಹರಕೆಗಳನ್ನು ಸಲ್ಲಿಸಲಾಗುವುದು. ‘ಆಶೀರ್ವಾದ್ ಕಾ ದಿಯಾ’ ಅಭಿಯಾನದ ಭಾಗವಾಗಿ ಕೇಂದ್ರ ಸರಕಾರದ ಯೋಜನೆಗಳ ಫಲಾನುಭವಿಗಳು ಹಾಗೂ ಕಾರ್ಯಕರ್ತರ ಮನೆಗಳು ಮತ್ತು ಸಂಸ್ಥೆಗಳಲ್ಲಿ ದೀಪ ಬೆಳಗಿಸಲಾಗುವುದು.
ಸೆ.17ರಿಂದ ಅಕ್ಟೋಬರ್ 7ರವರೆಗೆ ಜಿಲ್ಲೆಯ ವಿವಿಧ ಶಾಲೆಗಳಲ್ಲಿಚಿತ್ರಕಲೆ ಹಾಗೂ ಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗುವುದು. ‘ಸ್ವಪ್ನ ಭಾರತ’, ‘ವಿಕಸಿತ ಭಾರತ 2047’ ಮುಂತಾದ ವಿಷಯಗಳನ್ನು ಆಧರಿಸಿ 1ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಚಿತ್ರಕಲೆ ಸ್ಪರ್ಧೆ ಹಾಗೂ 8ನೇ ತರಗತಿಯಿಂದ ಪ್ಲಸ್ ಟು ವರೆಗಿನ ವಿದ್ಯಾರ್ಥಿಗಳಿಗೆ ಚಿತ್ರಕಲೆ ಮತ್ತು ಭಾಷಣ ಸ್ಪರ್ಧೆಗಳನ್ನು ನಡೆಸಲಾಗುವುದು. ನರೇಂದ್ರ ಮೋದಿಯವರ ಸಾರ್ವಜನಿಕ ಜೀವನ ಹಾಗೂ ಕಾರ್ಯ ಚಟುವಟಿಕೆಗಳನ್ನು ಆಧರಿಸಿ ಬೀದಿ ನಾಟಕಗಳನ್ನೂ ಆಯೋಜಿಸಲಾಗುವುದು.
ಸೆ.25ರಿಂದ ಅಕ್ಟೋಬರ್ 7ರ ನಡುವೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಹಾಗೂ ಮಹಿಳಾ ಮೋರ್ಚಾ ಸಂಯುಕ್ತವಾಗಿ ‘ಅಂಗನವಾಡಿ ಉತ್ಸವ’ ಆಯೋಜಿಸಲಿದೆ. ಇದರ ಅಂಗವಾಗಿ ಅಂಗನವಾಡಿ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರನ್ನು ಸನ್ಮಾನಿಸಲಾಗುವುದು.
‘ಬದಲಾವಣೆಯ ನೇರ ನೋಟ’ ಎಂಬ ಹೆಸರಿನಲ್ಲಿ ವಿವಿಧ ಕೇಂದ್ರ ಸರಕಾರದ ಯೋಜನೆಗಳು ಹಾಗೂ ಅವು ಫಲಾನುಭವಿಗಳ ಜೀವನದಲ್ಲಿಸೃಷ್ಟಿಸಿರುವ ಬದಲಾವಣೆಗಳನ್ನು ಪರಿಚಯಿಸುವ ಸಾಮಾಜಿಕ ಮಾಧ್ಯಮ ರೀಲ್ಸ್ ಗಳನ್ನು ಸಿದ್ಧಪಡಿಸಿ ಪ್ರಚಾರ ಮಾಡಲಾಗುವುದು.
ಅ.7ರಂದು ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ 25ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರತಿಯೊಂದು ಬೂತ್ ನಿಂದ ‘ಸೇವಾ ಜ್ಯೋತಿ ಕಲಶ ಯಾತ್ರೆ’ ಆಯೋಜಿಸಲಾಗುವುದು. ಯಾತ್ರೆಗಳು ಸಂಘಟನಾ ಮಂಡಲ ಕೇಂದ್ರಗಳಲ್ಲಿಸಂಗಮಿಸಿದ ಬಳಿಕ 10 ಸಂಘಟನಾ ಮಂಡಲಗಳಿಂದ ದ್ವಿಚಕ್ರ ವಾಹನ ರಾರ ಯಲಿಗಳು ಜಿಲ್ಲಾಕೇಂದ್ರವನ್ನು ತಲುಪಲಿವೆ.
ದೇಶದ ವಿವಿಧ ಬಿಜೆಪಿ ಜನಪ್ರತಿನಿಧಿಗಳು ಭಾಗವಹಿಸುವ ‘ಸೇವಾ ಮಹಾಕುಂಭ್ ’ ಕಾರ್ಯಕ್ರಮದಲ್ಲೂಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.‘ಸೇವಾ ಸೇತು ಅಭಿಯಾನ್ - ವಿಕಸಿತ ಕೇರಳ’ ಯೋಜನೆಯ ಅಂಗವಾಗಿ ಬಿಜೆಪಿ ಕಾಸರಗೋಡು ಜಿಲ್ಲಾಸಹಾಯವಾಣಿ, ವಿವಿಧ ಸರಕಾರಿ, ಖಾಸಗಿ ಹಾಗೂ ಎನ್ ಜಿಒ ಸಂಸ್ಥೆಗಳ ಸಹಕಾರದೊಂದಿಗೆ ವಾರ್ಡ್ ಮಟ್ಟದಲ್ಲಿಕೇಂದ್ರ ಸರಕಾರದ ವಿವಿಧ ಯೋಜನೆಗಳಿಗೆ ನೋಂದಣಿ ಶಿಬಿರಗಳನ್ನು ಆಯೋಜಿಸಲಿದೆ.
ಕೇಂದ್ರ ಸರಕಾರದ ವಿವಿಧ ಯೋಜನೆಗಳು ಹಾಗೂ ಅವುಗಳ ಪ್ರಯೋಜನಗಳನ್ನು ಪರಿಚಯಿಸುವ ಚಿತ್ರ-ವಿಡಿಯೋ ಪ್ರದರ್ಶನಗಳೊಂದಿಗೆ ಎಕ್ಸಿಬಿಷನ್ ಗಳನ್ನೂ ಆಯೋಜಿಸಲಾಗುವುದು. ಯುವಜನರನ್ನು ಕೇಂದ್ರೀಕರಿಸಿ ‘ಸೇವಾ ಫಾಸ್ಟ್ ಇನ್ನೋವೇಶನ್ ’, ರಾಷ್ಟ್ರೀಯ ಸೆಮಿನಾರ್ , ರಕ್ತದಾನ ಶಿಬಿರಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಇದರ ಭಾಗವಾಗಿ ಆಯೋಜಿಸಲಾಗುವುದು ಎಂದು ಬಿಜೆಪಿ ಕಾಸರಗೋಡು ಜಿಲ್ಲಾಅಧ್ಯಕ್ಷ ಎಂ.ಎಲ್ . ಅಶ್ವಿನಿ ತಿಳಿಸಿದ್ದಾರೆ.