ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತರಿಗೆ ಹೆಚ್ಚಿನ ಮಟ್ಟದಲ್ಲಿಸಾಲ ಸೌಲಭ್ಯಗಳನ್ನು ನೀಡುವ ಬಗ್ಗೆ ಸಂಘದ ಆಡಳಿತ ಮಂಡಳಿ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಸಿ.ಎಸ್ .ಪುಟ್ಟರಾಜು ಹೇಳಿದರು.ತಾಲೂಕಿನ ಚಿನಕುರಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.
‘‘ರೈತರ ಬೆನ್ನೆಲುಬಾಗಿ ಕೆಲಸ ಮಾಡುತ್ತಿರುವ ಕೃಷಿ ಪತ್ತಿನ ಸಹಕಾರ ಸಂಘಗಳು ಡಿಸಿಸಿ ಬ್ಯಾಂಕ್ ಸೇರಿದಂತೆ ಇತರೆ ಸಂಘಗಳ ಮೂಲಕ ಆರ್ಥಿಕ ನೆರವು ಪಡೆದು ರೈತರಿಗೆ ಹೆಚ್ಚಿನ ಮಟ್ಟದಲ್ಲಿಸಾಲ ಸೌಲಭ್ಯಗಳನ್ನು ನೀಡಬೇಕು. ಹೆಚ್ಚಿನ ಮಟ್ಟದಲ್ಲಿಸಾಲ ಸೌಲಭ್ಯಗಳನ್ನು ನೀಡಿದರೆ ಸರಕಾರಗಳು ಸಾಲಮನ್ನಾ ಮಾಡಿದ ಸಂದರ್ಭದಲ್ಲಿರೈತರಿಗೆ ಅನುಕೂಲವಾಗಲಿದೆ,’’ಎಂದು ತಿಳಿಸಿದರು.
‘‘ಚಿನಕುರಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಲಾಭದಾಯಕವಾಗಿ ನಡೆಯುತ್ತಿದೆ. ಒಂದು ಕಾಲದಲ್ಲಿಚಿನಕುರಳಿ ಸೊಸೈಟಿ ಮುಚ್ಚಿ ಹೋಗುತ್ತದೆ ಎಂಬುದಾಗಿ ಬೊಬ್ಬೆ ಹೊಡೆಯುತ್ತಿದ್ದರು. ನಾವು ಸರಕಾರಗಳು, ದಾನಿಗಳ ಬಳಿ ಆರ್ಥಿಕ ಸಹಕಾರ ಪಡೆದು ಬಿಕ್ಷೆ ಬೇಡಿ ಸಂಘವನ್ನು ಉಳಿಸಿ ಪ್ರಸ್ತುತ ಲಾಭದಾಯಕವಾಗಿ ನಡೆಯುವಂತೆ ಮಾಡಿದ್ದೇವೆ, ಕಟ್ಟಡ ನಿರ್ಮಾಣ ಮಾಡಿ ಸಂಘದ ವತಿಯಿಂದಲೇ ಸೂಪರ್ ಮಾಕೇರ್ಟ್ ಆರಂಭಿಸಿದ್ದೇವೆ. ಪ್ರಸ್ತುತ ಸಂಘದ ಆಸ್ತಿ 4 ಕೋಟಿ ರೂ.ಗೂ ಅಧಿಕ ಮಾಡಿದ್ದೇವೆ, ಎಲ್ಲರು ಸಂಘದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಿ, ಸಂಘದ ವತಿಯಿಂದ ಖರೀದಿಸಿರುವ ಅಂತಿಮಯಾತ್ರಿ ವಾಹನಕ್ಕೆ 2000 ನಿಗದಿಪಡಿಸಿರುವುದನ್ನು ಸಡಿಲಗೊಳಿಸಿ 1500ಕ್ಕೆ ಇಳಿಕೆ ಮಾಡಿ ಜನರಿಗೆ ಅನುಕೂಲಮಾಡಿಕೊಡಬೇಕು,’’ ಎಂದು ಸಂಘದ ಆಡಳಿತ ಮಂಡಳಿಗೆ ಸೂಚಿಸಿದರು.
ಸಂಘದ ಅಧ್ಯಕ್ಷ ಸಿ.ಎಸ್ .ಗೋಪಾಲಗೌಡ ಮಾತನಾಡಿ, ‘‘ಚಿನಕುರಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸ್ತುತ ವರ್ಷ 35 ಲಕ್ಷ ರೂ. ಲಾಭದಾಯಕವಾಗಿದೆ. ಸಂಘವದ ವತಿಯಿಂದಲೇ ಅಂತಿಮಯಾತ್ರಿ ವಾಹನ ಖರೀದಿಸಿದ್ದೇವೆ. ಗೊಬ್ಬರ, ಆಹಾರ ಶಾಖೆ ಇದೆ. ರೈತರು, ಸಾರ್ವಜನಿಕರು ಸಂಘದ ವತಿಯಿಂದ ಆರಂಭಿಸಿರುವ ಸೂಪರ್ ಮಾರ್ಕೇಟ್ ನಲ್ಲಿವಸ್ತುಗಳನ್ನು ಖರೀದಿಸಿದರೆ ಸಂಘಕ್ಕೆ ಅನುಕೂಲವಾಗಲಿದೆ, ಸಂಘವು ಸಹ ಮತ್ತಷ್ಟು ಅಭಿವೃದ್ದಿ ಹೊಂದಲು ಸಾಧ್ಯವಾಗುತ್ತದೆ, ಹಾಗಾಗಿ ಎಲ್ಲರು ಸಂಘದ ವತಿಯಿಂದ ಆರಂಭಿಸಿರುವ ಸೂಪರ್ ಮಾರ್ಕೇಟ್ ನಲ್ಲಿಯೇ ವ್ಯವಹಾರ ನಡೆಸಬೇಕು,’’ ಎಂದು ಮನವಿ ಮಾಡಿದರು.
ಮನ್ ಮುಲ್ ನಿರ್ದೇಶಕ ಸಿ.ಶಿವಕುಮಾರ್ , ಜಿಪಂ ಮಾಜಿ ಸದಸ್ಯ ಸಿ.ಅಶೋಕ್ , ಸಂಘದ ಉಪಾಧ್ಯಕ್ಷ ಸುರೇಂದ್ರ, ನಿರ್ದೇಶಕರಾದ ರಾಮಕೃಷ್ಣೇಗೌಡ, ಸ್ವಾಮೀಗೌಡ, ಸಿ.ಎಂ.ಕಾಳೇಗೌಡ, ಕೆ.ಎ.ಸ್ವಾಮೀಗೌಡ, ಜಿ.ಕೆ.ಕುಮಾರ್ , ಕೆ.ಎಸ್ .ಚಂದ್ರು, ಸಿಂಗ್ರಯ್ಯ, ಕೆ.ವೈ.ಭವ್ಯ, ತಾಯಮ್ಮ, ಪ್ರತಾಪ್ , ಮಾಜಿ ಅಧ್ಯಕ್ಷರಾದ ಮಂಜುನಾಥ್ , ಮೊಗ್ಗಣ್ಣೇಗೌಡ, ಶ್ರೀನಿವಾಸ್ , ಪಿಎಲ್ ಡಿ ಬ್ಯಾಂಕ್ ಮಾಜಿ ನಿರ್ದೇಶಕ ಸಿ.ಪ್ರಕಾಶ್ , ಕಾರ ್ಯದರ್ಶಿ ಸಿ.ಎಂ.ಕಾಂತರಾಜು ಸೇರಿದಂತೆ ನೌಕರರು, ಸಿಬ್ಬಂದಿಗಳು ಇದ್ದರು.
==================
ಎಂಡಿವೈ17ಪಿಎನ್ ಡಿ3ಸಿ
ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಮಾಜಿ ಸಚಿವ ಸಿ.ಎಸ್ .ಪುಟ್ಟರಾಜು ಅವರು ಉದ್ಘಾಟಿಸಿದರು.
ಎಂಡಿವೈ17ಪಿಎನ್ ಡಿ4ಸಿ
ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿಮಾಜಿ ಸಚಿವ ಸಿ.ಎಸ್ .ಪುಟ್ಟರಾಜು ಮಾತನಾಡಿದರು.