ವಿಕ ಸುದ್ದಿಲೋಕ ಶಿವಮೊಗ್ಗಜಿಲ್ಲಾವುಶು ಸಂಸ್ಥೆ ಹಾಗೂ ಕರ್ನಾಟಕ ವುಶು ಸಂಸ್ಥೆಯ ಸಹಯೋಗದಲ್ಲಿಖೇಲೋ ಇಂಡಿಯಾ ಅಸ್ಮಿತಾ ಮಹಿಳಾ ವುಶು ಲೀಗ್ ಹಾಗೂ 25ನೇ ಕರ್ನಾಟಕ ರಾಜ್ಯ ಜೂನಿಯರ್ ವುಶು ಚಾಂಪಿಯನ್ ಶಿಪ್ ಅನ್ನು ಸೆ.19 ಮತ್ತು 20ರಂದು ನಗರದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿಆಯೋಜಿಸಲಾಗಿದೆ ಎಂದು ಜಿಲ್ಲಾವುಶು ಸಂಸ್ಥೆ ಅಧ್ಯಕ್ಷ ಅಬ್ದುಲ್ ಗನಿ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿಮಾತನಾಡಿ, ಸೆ.19ರಂದು ಬೆಳಗ್ಗೆ 8ಕ್ಕೆ ಟಿ.ಸೀನಪ್ಪಶೆಟ್ಟಿ ವೃತ್ತದಿಂದ ನೆಹರು ಒಳಾಂಗಣ ಕ್ರೀಡಾಂಗಣದವರೆಗೆ ‘ತಿರಂಗ ಯಾತ್ರೆ’ ನಡೆಯಲಿದೆ. 11ಕ್ಕೆ ಜೂನಿಯರ್ ವುಶು ಚಾಂಪಿಯನ್ ಶಿಪ್ ಉದ್ಘಾಟನೆ ಹಾಗೂ ಸಂಜೆ 6ಕ್ಕೆ ಬಹುಮಾನ ವಿತರಣೆ, ಸಮಾರೋಪ ಸಮಾರಂಭ ನಡೆಯಲಿದೆ ಎಂದು ಹೇಳಿದರು.
ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ . ಈಶ್ವರಪ್ಪ, ಶಾಸಕರಾದ ಎಸ್ .ಎನ್ . ಚನ್ನಬಸಪ್ಪ, ಡಾ. ಧನಂಜಯ ಸರ್ಜಿ, ಡಿ.ಎಸ್ . ಅರುಣ್ , ಬಲ್ಕೀಸ್ ಬಾನು ಸೇರಿದಂತೆ ಪ್ರಮುಖ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ಸೆ.20ರಂದು ಬೆಳಗ್ಗೆ 10ಕ್ಕೆ ಅಸ್ಮಿತಾ ಮಹಿಳಾ ವುಶು ಲೀಗ್ ಆರಂಭವಾಗಲಿದ್ದು, ಸಂಜೆ 6ಕ್ಕೆ ಸಮಾರೋಪ ನಡೆಯಲಿದೆ. ವಿಜೇತರಿಗೆ ಪ್ರಶಸ್ತಿ, ಪದಕ ಹಾಗೂ ಪ್ರಮಾಣಪತ್ರ ನೀಡಿ, ವಲಯ ಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.
ವಿವಿಧೆಡೆಯಿಂದ 400ಕ್ಕೂ ಹೆಚ್ಚು ಮಹಿಳಾ ವುಶು ಕ್ರೀಡಾಪಟುಗಳು ಲೀಗ್ ನಲ್ಲಿಪಾಲ್ಗೊಳ್ಳಲಿದ್ದಾರೆ. ಮಹಿಳೆಯರು ಹಾಗೂ ಬಾಲಕಿಯರಲ್ಲಿವುಶು ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸುವುದು, ಪ್ರತಿಭೆಗಳನ್ನು ಗುರುತಿಸುವುದು ಹಾಗೂ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ರೂಪಿಸುವುದು ಲೀಗ್ ನ ಉದ್ದೇಶವಾಗಿದೆ. ಕ್ರೀಡಾಪಟುಗಳಿಗೆ ಉಚಿತ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.