((ಸೂಲಿಬೆಲೆ ಸರಕಾರಿ ಪಿಯು ಕಾಲೇಜಿನಲ್ಲಿಕ್ರೀಡಾ, ಸಾಂಸ್ಕೃತಿಕ ಕಾರ ್ಯಕ್ರಮ))ವಿಕ ಸುದ್ದಿಲೋಕ ಸೂಲಿಬೆಲೆ
ವಿದ್ಯಾರ್ಥಿಗಳ ಸಾಧನೆಗೆ ಪ್ರತಿಭಾ ಪುರಸ್ಕಾರ ಸ್ಫೂರ್ತಿಯಾಗಲಿ ಎಂದು ಸೂಲಿಬೆಲೆ ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಬಿ.ಎನ್ . ಗೋಪಾಲಗೌಡ ಹೇಳಿದರು.
ಸೂಲಿಬೆಲೆ ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಆವರಣದಲ್ಲಿಹಮ್ಮಿಕೊಂಡಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ ್ಯಕ್ರಮ, ಕಳೆದ ಸಾಲಿನಲ್ಲಿಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಧನೆ ಮಾಡಿದವರ ಆದರ್ಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿಶಿಸ್ತು ಮತ್ತು ಗುರಿ ಮೈಗೂಡಿಸಿಕೊಳ್ಳುವುದರಿಂದ ಯಶಸ್ಸು ಸಾಧಿಸಬಹುದು. ಸಮಯ ವ್ಯರ್ಥ ಮಾಡದೇ, ವಿದ್ಯಾಭ್ಯಾಸಕ್ಕೆ ಒತ್ತು ನೀಡಿ ನಿಮ್ಮ ಗುರಿಯತ್ತ ಗಮನಹರಿಸಬೇಕು. ಕಾಲೇಜಿನಲ್ಲಿ15 ವಿದ್ಯಾರ್ಥಿಗಳು ಪುರಸ್ಕಾರಕ್ಕೆ ಭಾಜನರಾಗಿದ್ದು, ಈ ಸಂಖ್ಯೆ 100 ಆಗಬೇಕು. ಸಾಧನೆ ಮಾಡುವ ಎಲ್ಲವಿದ್ಯಾರ್ಥಿಗಳಿಗೂ ವ್ಯಯಕ್ತಿಕವಾಗಿ ನಾನೇ ಪ್ರತಿಭಾ ಪುರಸ್ಕಾರ ನೀಡುತ್ತೇನೆ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಖಂಜಾಚಿ, ಜಿಪಂ ಮಾಜಿ ಅಧ್ಯಕ್ಷ ವಿ.ಪ್ರಸಾದ್ ಮಾತನಾಡಿ, ಉತ್ತಮ ವ್ಯಕ್ತಿತ್ವ ಹಾಗೂ ಬದುಕು ರೂಪಿಸಿಕೊಳ್ಳುವ ಗುರಿಯೊಂದಿಗೆ ಸಾಗಬೇಕು. ಆಗ ಸಾಧನೆ ಶಿಖರ ಮುಟ್ಟಲು ಸಾಧ್ಯ ಎಂದು ಹೇಳಿದರು.
ಅತಿ ಹೆಚ್ಚು ಅಂಕ ಪಡೆದ 15 ವಿದ್ಯಾರ್ಥಿಗಳಿಗೆ ಬಿ.ಎನ್ ಗೋಪಾಲಗೌಡ ಅವರು ವ್ಯಯಕ್ತಿಕವಾಗಿ ನಗದು ಬಹುಮಾನ ನೀಡಿ ಸನ್ಮಾನಿಸಿದರು. ಪಿಡಿಒ ವಿಜಯಕುಮಾರಿ ಅವರು ಕಾಲೇಜಿಗೆ ಸ್ಮಾರ್ಟ್ ಟಿವಿ ಕೊಡುಗೆಯಾಗಿ ನೀಡಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ ್ಯಕ್ರಮ ನಡೆಯಿತು.
ಕಾಲೇಜು ಪ್ರಾಂಶುಪಾಲ ಮಂಜುನಾಥ್ , ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ವೆಂಕಟೇಶ್ , ಜೇನುಗೂಡು ಟ್ರಸ್ಟ್ ಉಪಾಧ್ಯಕ್ಷ ಕೆ.ಎಂ.ಚೌಡೇಗೌಡ, ಗಿಡ್ಡಪ್ಪನಹಳ್ಳಿ ಪಿಡಿಒ ವಿಜಯಕುಮಾರಿ, ಟಿಎಪಿಎಂಎಸ್ ನಿರ್ದೇಶಕ ನಗರೇನಹಳ್ಳಿ ನಾಗರಾಜಪ್ಪ, ಗ್ಯಾರಂಟಿ ಸಮಿತಿ ಜಿಲ್ಲಾಸದಸ್ಯ ಸೈಯದ್ ಮೆಹಬೂಬ್ , ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಜೀಯಾವುಲ್ಲಾ, ಪ್ರಶಾಂತ್ , ಉಪನ್ಯಾಕರಾದ ಸುಬ್ರಮಣ್ಯ, ಕುಮಾರ್ ಹಾಗೂ ಸಿಬ್ಬಂದಿ ಹಾಜರಿದ್ದರು.
ಚಿತ್ರ-18 ಸೂಲಿಬೆಲೆ 1
ಸೂಲಿಬೆಲೆ ಸರಕಾರಿ ಪಿಯು ಕಾಲೇಜಿನಲ್ಲಿಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.