ಬಂಡವಾಳ ದುಪ್ಪಟ್ಟು ಮಾಡುವ ಫಾಮ್ ರ್ ಲ್ಯಾಂಡ್

Contributed bybabitha.salian@timesgroup.com|Vijaya Karnataka
profitable farm land a financial success in bengaluru
ಬಂಡವಾಳ ದುಪ್ಪಟ್ಟು ಮಾಡುವ ಫಾಮ್ ರ್ ಲ್ಯಾಂಡ್

-ಶ್ರೀಗಂಧ, ಮಹಾಗನಿ, ತೇಗದ ಮರ ಬೆಳೆಸಲು ಅವಕಾಶ | ರೆಸಾರ್ಟ್ ಸೌಲಭ್ಯಗಳಿರುವ ಫಾಮ್ ರ್ ಹೌಸ್ ಗೆ ಬೇಡಿಕೆ
ಇಂಟ್ರೊ

ಉತ್ತಮ ಹೂಡಿಕೆ, ವಾರಾಂತ್ಯದ ವಿಶ್ರಾಂತಿ ಅಥವಾ ದೀರ್ಘಕಾಲೀನ ಸುಸ್ಥಿರ ಜೀವನಶೈಲಿಗಾಗಿ ಬೆಂಗಳೂರಿನ ಸುತ್ತಮುತ್ತವಿರುವ ಫಾಮ್ ರ್ ಲ್ಯಾಂಡ್ ಗಳು ಸುರಕ್ಷಿತ ಆಯ್ಕೆಯಾಗಿವೆ. ಪ್ರಕೃತಿ, ಐಷಾರಾಮ ಮತ್ತು ವಿಶ್ವಾಸಾರ್ಹತೆಯ ಪರಿಪೂರ್ಣ ಸಂಯೋಜನೆಯನ್ನು ಎದುರು ನೋಡುತ್ತಿರುವವರಿಗೆ ಇಂಥ ಕೃಷಿಭೂಮಿಗಳು ಮತ್ತು ಅಲ್ಲಿರುವ ಫಾಮ್ ರ್ ಹೌಸ್ ಗಳು ಹೇಳಿಮಾಡಿಸಿದಂತಿವೆ.

ಬಬಿತಾ ಎಸ್ .

ನಗರ ಜೀವನ ದಿನದಿಂದ ದಿನಕ್ಕೆ ವೇಗ ಪಡೆದುಕೊಳ್ಳುತ್ತಿದ್ದು, ಹೆಚ್ಚು ಜನಸಂದಣಿಯಿಂದ ಕೂಡುತ್ತಿದೆ. ಈ ಕಾರಣ ಬೆಂಗಳೂರಿನಲ್ಲಿವಾಸಿಸುವ ಅನೇಕರು ಪ್ರಕೃತಿಯೊಂದಿಗೆ ಮತ್ತೆ ಸಂಪರ್ಕ ಸಾಧಿಸುವ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಈ ಪರಿಣಾಮ ಬೆಂಗಳೂರಿನ ಸುತ್ತಮುತ್ತವಿರುವ ಮ್ಯಾನೇಜ್ಡ್ ಫಾಮ್ ರ್ ಲ್ಯಾಂಡ್ ಅಥವಾ ನಿರ್ವಹಿತ ಕೃಷಿಭೂಮಿಗಳಿಗೆ ಬೇಡಿಕೆ ಹೆಚ್ಚಿದೆ. ಫಾಮ್ ರ್ ಲ್ಯಾಂಡ್ ಗಳು ಇಂದಿನ ದಿನಗಳಲ್ಲಿಅತ್ಯಂತ ಆಕರ್ಷಕ ಜೀವನಶೈಲಿ ಹಾಗೂ ಹೂಡಿಕೆ ಆಯ್ಕೆಗಳಲ್ಲಿಒಂದಾಗಿದ್ದು, ಇವು ಖರೀದಿದಾರರಿಗೆ ಕಾನೂನುಬದ್ಧವಾಗಿ ಸುರಕ್ಷಿತ, ಸಮರ್ಪಕವಾಗಿ ಯೋಜಿತ ಹಾಗೂ ನಿಜವಾದ ಪ್ರೀಮಿಯಂ ಕೃಷಿ ಅನುಭವ ಒದಗಿಸುತ್ತವೆ.

ಫಾಮ್ ರ್ ಲ್ಯಾಂಡ್ ಗೆ ಬೇಡಿಕೆ

ಬೆಂಗಳೂರು ನಗರದ ವೇಗದ ಅಭಿವೃದ್ಧಿಯು ಗ್ರಾಮೀಣ ಜೀವನದತ್ತ ಜನರ ಆಸಕ್ತಿಯನ್ನು ಹೆಚ್ಚಿಸಿದೆ. ಈಗಿನ ಆಧುನಿಕ ಖರೀದಿದಾರರು ಕೇವಲ ಭೂಮಿ ಖರೀದಿಸುವುದನ್ನೇ ಬಯಸುವುದಿಲ್ಲ, ಬದಲಾಗಿ, ಸುರಕ್ಷಿತ ಮಾಲೀಕತ್ವ, ವೃತ್ತಿಪರ ನಿರ್ವಹಣೆ ಮತ್ತು ದೀರ್ಘಕಾಲೀನ ಮೌಲ್ಯವನ್ನು ಒಳಗೊಂಡ ಸಂಪೂರ್ಣ ಅನುಭವವನ್ನು ನಿರೀಕ್ಷಿಸುತ್ತಿದ್ದಾರೆ. ನಗರ ಪ್ರದೇಶಗಳಲ್ಲಿಹೆಚ್ಚುತ್ತಿರುವ ಒತ್ತಡ, ಟ್ರಾಫಿಕ್ ಸಮಸ್ಯೆ, ಗ್ರಾಮೀಣ ಆಸ್ತಿಗಳ ಭವಿಷ್ಯದ ಮೌಲ್ಯದಲ್ಲಿಏರಿಕೆ, ಪರಿಸರ ಸ್ನೇಹಿ ಕೃಷಿ ಹಾಗೂ ಸಮಗ್ರ ಜೀವನಶೈಲಿಯ ಮೇಲಿನ ಆಸಕ್ತಿ, ವಾರಾಂತ್ಯದಲ್ಲಿವಿಶ್ರಾಂತಿಗಾಗಿ ಫಾಮ್ ರ್ ಹೌಸ್ ಮತ್ತು ತೋಟಗಳ ಅಗತ್ಯ, ವಿವಿಧ ಕ್ಷೇತ್ರಗಳಲ್ಲಿಹೂಡಿಕೆಯನ್ನು ವಿಭಜಿಸುವ ಟ್ರೆಂಡ್ ಇವೆಲ್ಲವೂ ಫಾಮ್ ರ್ ಲ್ಯಾಂಡ್ ಗಳನ್ನು ಉತ್ತಮ ಜೀವನಶೈಲಿ ಮತ್ತು ಹೂಡಿಕೆ ಎರಡಕ್ಕೂ ಅತ್ಯುತ್ತಮ ಆಯ್ಕೆಯನ್ನಾಗಿ ಮಾಡಿವೆ. ಇದರಿಂದಾಗಿ ಸಕಲ ಸೌಲಭ್ಯಗಳಿರುವ ಫಾಮ್ ರ್ ಹೌಸ್ ಗಳಿರುವ ಫಾಮ್ ರ್ ಲ್ಯಾಂಡ್ ಕೂಡ ಜನರ ಪ್ರಮುಖ ಆದ್ಯತೆಯಾಗಿದೆ.

ಮ್ಯಾನೇಜ್ಡ್ ಫಾಮ್ ರ್ ಲ್ಯಾಂಡ್

ನಿರ್ವಹಿತ ಕೃಷಿಭೂಮಿ ಅಥವಾ ಮ್ಯಾನೇಜ್ಡ್ ಫಾಮ್ ರ್ ಲ್ಯಾಂಡ್ ಎಂದರೆ ಖರೀದಿದಾರರು ಕೃಷಿಗೆ ಯೋಗ್ಯವಾದ ಭೂಮಿಯ ಮಾಲೀಕರಾಗಿರುತ್ತಾರೆ. ಆದರೆ ಭೂಮಿಯ ನಿರ್ವಹಣೆ, ಭದ್ರತೆ, ನೀರಾವರಿ, ಕೃಷಿ ಕಾರ್ಯಗಳು ಮತ್ತು ದೈನಂದಿನ ಪಾಲನೆಧಿ, ಪೋಷಣೆ ಸೇರಿದಂತೆ ಎಲ್ಲಾ ಜವಾಬ್ದಾರಿಗಳನ್ನು ಡೆವಲಪರ್ ಗಳ ವೃತ್ತಿಪರ ತಜ್ಞರ ತಂಡ ನಿರ್ವಹಿಸುತ್ತದೆ. ಇದು ಉದ್ಯೋಗದಲ್ಲಿನಿರತರಾಗಿರುವ ವೃತ್ತಿಪರರು ಹಾಗೂ ವಿದೇಶದಲ್ಲಿವಾಸಿಸುವ ಭಾರತೀಯರಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಉದಾಹರಣೆಗೆ ಊರ ಹೊರಗಿನ ಫಾಮ್ ರ್ ಲ್ಯಾಂಡ್ ಖರೀದಿಸಿದ ನಂತರ ಅಲ್ಲಿಗಿಡ ನೆಡುವುದು, ಬೇಲಿ ನಿರ್ಮಾಣ, ನಿರ್ವಹಣೆ ಮತ್ತು ಇತರ ಕೃಷಿ ಚಟುವಟಿಕೆಗಳನ್ನು ಡೆವಲಪರ್ ಗಳ ಪರಿಣಿತ ತಂಡವೇ ನೋಡಿಕೊಳ್ಳುತ್ತದೆ. ಇದರಿಂದ ಮಾಲೀಕರು ಪ್ರತಿದಿನದ ನಿರ್ವಹಣೆಯಲ್ಲಿತೊಡಗದೆಯೇ ತಮ್ಮ ಭೂಮಿಯ ಮೌಲ್ಯವು ದೀರ್ಘಾವಧಿಯಲ್ಲಿಸ್ಥಿರವಾಗಿ ಹೆಚ್ಚಾಗುವ ಪ್ರಯೋಜನ ಪಡೆಯಬಹುದು.

ಫಾಮ್ ರ್ ಹೌಸ್ ಅನುಕೂಲ

ಇದೇ ರೀತಿ ಅಪಾರ್ಟ್ ಮೆಂಟ್ , ಸೈಟ್ ಗಳ ಮೇಲಿನ ಹೂಡಿಕೆಗಿಂತ ರೆಸಾರ್ಟ್ ಸೌಲಭ್ಯಗಳಿರುವ ಫೌಮ್ ರ್ ಹೌಸ್ ಗಳಿರುವ ಶ್ರೀಗಂಧದ ಫಾಮ್ ರ್ ಲ್ಯಾಂಡ್ ಗಳ ಮೇಲಿನ ಹೂಡಿಕೆ ಖರೀದಿದಾರರಿಗೆ ಅನಿರೀಕ್ಷಿತ ಲಾಭಗಳನ್ನು ತರುತ್ತಿದೆ. ಶ್ರೀಗಂಧದ ಕೃಷಿಗೆ ಅರಣ್ಯ ಇಲಾಖೆ ಮತ್ತು ಸರಕಾರ ಕೂಡ ಪ್ರೋತ್ಸಾಹ ನೀಡುತ್ತಿರುವ ಕಾರಣ ಜನರೀಗ ಫಾಮ್ ರ್ ಲ್ಯಾಂಡ್ ಗಳನ್ನು ಖರೀದಿಸಿ ಅದರಲ್ಲಿಶ್ರೀಗಂಧ ಬೆಳೆಯುತ್ತಿದ್ದಾರೆ. ಮುಖ್ಯವಾಗಿ ಬೆಂಗಳೂರಿಗರು ನಗರ ಪ್ರದೇಶದಿಂದ ದೂರದಲ್ಲಿರುವ ಮ್ಯಾನೇಜ್ಡ್ ಫಾಮ್ ರ್ ಲ್ಯಾಂಡ್ ನಲ್ಲಿಸಕಲ ಸೌಲಭ್ಯಗಳಿರುವ ಫಾಮ್ ರ್ ಹೌಸ್ ಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಅನೇಕ ನಗರವಾಸಿಗಳು ಫೌಮ್ ರ್ ಹೌಸ್ ಗಳಿರುವ ಫಲವತ್ತಾದ ಫಾಮ್ ರ್ ಲ್ಯಾಂಡ್ ಖರೀದಿಸಿ ಅಲ್ಲಿಶ್ರೀಗಂಧ, ಮಹಾಗನಿ, ತೇಗ ಸೇರಿದಂತೆ ಹಣ್ಣು, ತರಕಾರಿ, ಸಂಬಾರ ಪದಾರ್ಥಗಳನ್ನು ಬೆಳೆಸಿ ಉತ್ತಮ ಆದಾಯದ ಜತೆಗೆ ನೆಮ್ಮದಿ ಕಾಣುತ್ತಿದ್ದಾರೆ.

ಕೋಟ್

ಮೈಸೂರು-ಮಳವಳ್ಳಿ ರಸ್ತೆಯಲ್ಲಿರುವ ನಮ್ಮ ಫಾಮ್ ರ್ ಲ್ಯಾಂಡ್ ಗಳಲ್ಲಿಈಗಾಗಲೇ ಬಂಡವಾಳ ಹೂಡಿದವರು ಅನಿರೀಕ್ಷಿತ ಲಾಭಗಳನ್ನು ಗಳಿಸುತ್ತಿದ್ದಾರೆ. ಎಲ್ಲರೂ ಶ್ರೀಗಂಧ ಬೆಳೆಯುವುದಕ್ಕೆ ಆದ್ಯತೆ ನೀಡುತ್ತಿದ್ದು, ಅರಣ್ಯ ಇಲಾಖೆ ಮತ್ತು ಸರಕಾರವೂ ಇದಕ್ಕೆ ಪ್ರೋತ್ಸಾಹ ನೀಡುತ್ತಿದೆ. ಕೇವಲ ಫಾಮ್ ರ್ ಲ್ಯಾಂಡ್ ಗಳು ಬೇಕಿದ್ದರೆ ಅಲ್ಲಿಶ್ರೀಗಂಧ, ಮಹಾಗನಿ, ತೇಗ ಹಾಗೂ ಕೆಲವು ಹಣ್ಣುಗಳ ಗಿಡಗಳನ್ನು ನಾವೇ ಬೆಳೆಸಿ ಕೊಡುತ್ತೇವೆ. ಶ್ರೀಗಂಧದ ಮರಗಳೇ ಬೇಕು ಎಂದರೆ ಅದನ್ನೇ ಬೆಳೆಸಿ ಕೊಡುತ್ತೇವೆ. ಬೆಂಗಳೂರಿಗೆ ಸಮೀಪವಿರುವ ಮೈಸೂರು-ಮಳವಳ್ಳಿ ರಸ್ತೆಯಲ್ಲಿರುವ ಫಾಮ್ ರ್ ಲ್ಯಾಂಡ್ ಗಳ ಮೇಲೆ ಹೂಡಿಕೆ ಮಾಡುವವರಿಗೆ ಉತ್ತಮ ಲಾಭ ಖಂಡಿತಾ ಬರುತ್ತದೆ. ಇಲ್ಲಿಫಾಮ್ ರ್ ಹೌಸ್ ನಿರ್ಮಿಸುವುದರಿಂದ ಖರೀದಿದಾರರಿಗೆ ಮಾಸಿಕ ಆದಾಯ ಕೂಡ ಸಿಗುತ್ತದೆ.

ರಾಜೇಶ್ ವಿ.ಎಂ | ಶರಣ್ಯ ಫಾಮ್ಸ್ ರ್ ಮಾಲೀಕರು

ಬಾಕ್ಸ್

ಅಭಿವೃದ್ಧಿ ಯೋಜನೆಗಳ ತಾಣ

ಮೈಸೂರು ಸುತ್ತಮುತ್ತ ಇನ್ ಫ್ರಾಸ್ಟ್ರಕ್ಚರ್ ಯೋಜನೆಗಳು ಅಭಿವೃದ್ಧಿಗೊಳ್ಳುತ್ತಿದ್ದು, ಮೈಸೂರಿನ ಹೊಸ ಪೆರಿಫೆರಲ್ ರಿಂಗ್ ರೋಡ್ ಕೂಡ ಮೈಸೂರು-ಮಳವಳ್ಳಿ ರಸ್ತೆ ಸುತ್ತಮುತ್ತಲಿನ ಪ್ರದೇಶಗಳಿಗೆ ಅನುಕೂಲವಾಗಿ ಪರಿಣಮಿಸಿದೆ. ಈ ರಸ್ತೆ ಸಂಪರ್ಕದಿಂದಾಗಿ ಮೈಸೂರಿನಿಂದ ಇಲ್ಲಿಗೆ 15 ನಿಮಿಷಗಳಲ್ಲಿಪ್ರಯಾಣ ಬೆಳೆಸಬಹುದು. ನವ ಮೈಸೂರು ನಿರ್ಮಾಣ ಯೋಜನೆ ಉತ್ತಮವಾಗಿ ಅಭಿವೃದ್ಧಿಯಾಗುತ್ತಿರುವುದರಿಂದ ಮೈಸೂರು ಸುತ್ತಮುತ್ತಲಿನ ಪ್ರದೇಶಗಳು ನಗರ ವ್ಯಾಪ್ತಿಗೆ ಬರಲಿವೆ. ಈ ಕಾರಣ ಮೈಸೂರು-ಬೆಂಗಳೂರು ರಸ್ತೆಯಲ್ಲಿರುವ ನಮ್ಮ ಫಾಮ್ ರ್ ಲ್ಯಾಂಡ್ ಖರೀದಿ ಗ್ರಾಹಕರಿಗೆ ಉತ್ತಮ ಲಾಭ ತರಲಿದೆ ಎಂದು ರಾಜೇಶ್ ವಿ.ಎಂ ಹೇಳಿದ್ದಾರೆ.