*ಕಣ ನಿರ್ಮಾಣಕ್ಕೆ ಸಹಾಯಧನ ಧನ ಬಂದ್ | ವಾಹನ ಸಂಚಾರಕ್ಕೆ ಸಮಸ್ಯೆ
ಸವೀರ್ ಸ್ ರಸ್ತೆಗಳೇ ಕಣಪಿ.ಎಂ.ಸತ್ಯಪ್ಪನವರ ಶಿಗ್ಗಾವಿ
saಠಿyappa್ಞava್ಟpಞಃಜಞaಜ್ಝಿ.್ಚಟಞ
ರೈತರಿಗೆ ಕಣ ನಿರ್ಮಾಣಕ್ಕಾಗಿ ಕೃಷಿ ಇಲಾಖೆ ಕೃಷಿ ಸಂಸ್ಕೃರಣಾ ಯೋಜನೆಯಡಿ ಸಹಾಯಧನ ನೀಡುತ್ತಿದ್ದ ರಾಜ್ಯ ಸರಕಾರ ಈಗ ನಿಲ್ಲಿಸಿದ್ದರಿಂದ ಕ್ರಮೇಣ ಬೆಳೆಗಳ ಒಕ್ಕಣಿಕೆ ಕಣಗಳ ನಿರ್ಮಾಣವೇ ಕ್ಷೀಣಿಸಿದೆ.
ಕೃಷಿಗೆ ಪ್ರೋತ್ಸಾಹ ಮತ್ತು ಸಹಾಯ ಮಾಡುವ ಉದ್ದೇಶದಿಂದ ಮಾಜಿ ಸಿಎಂ ಬಿ.ಎಸ್ .ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ 2009ರಲ್ಲಿಕೃಷಿ ಸಂಸ್ಕೃರಣಾ ಯೋಜನೆಯಡಿ ಕಣ ನಿರ್ಮಾಣಕ್ಕೆ ರೈತರಿಗೆ ಸಹಾಯ ಧನ ನೀಡುತ್ತಿತ್ತು. ನಂತರ ಬದಲಾದ ಸರಕಾರಗಳು ಸಹಾಯಧನ ನಿಲ್ಲಿಸಿದ್ದರಿಂದ ರೈತರಿಗೆ ಕಣ ನಿರ್ಮಾಣ ಸಮಸ್ಯೆಯಾಗಿದೆ. ಅತೀವೃಷ್ಟಿ, ಅನಾವೃಷ್ಟಿಗೆ ಸಿಲುಕಿದ ರೈತರು ಸ್ವಂತ ದುಡ್ಡಿನಲ್ಲಿಕಣ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಬೆಳೆ ಕಟಾವು ಸಂದರ್ಭದಲ್ಲಿಊರಿಗೊಂದು ಕಣ ನಿರ್ಮಾಣವಾಗುತ್ತಿದ್ದವು. ಆದರೆ, ರೈತ ಕುಟುಂಬದಲ್ಲಿನ ಸದಸ್ಯರ ವಿಂಗಡಣೆ ಮತ್ತು ಕೃಷಿಯೇತರ ಚಟುವಟಿಕೆಗಳಿಗೆ ಬಳಿಕೆಯಾಗುತ್ತಿರುವುರಿಂದ ಭೂಮಿ ಕಡಿಮೆಯಾಗಿದೆ. ಪರಿಣಾಮ ಒಕ್ಕಣಿಕೆಗೆ ಸ್ಥಳಾವಕಾಶ ಇಲ್ಲದೇ ಅನಿವಾರ್ಯವಾಗಿ ರೈತರು ಹೆದ್ದಾರಿ ಪಕ್ಕದಲ್ಲಿನಿರ್ಮಿಸಿದ ಸವೀರ್ ಸ್ ರಸ್ತೆಗಳನ್ನೇ ಕಣ ಮಾಡುತ್ತಿರುವುದರಿಂದ ವಾಹನ ಸಂಚಾರ ತ್ರಾಸದಾಯಕವಾಗುತ್ತಿದೆ.
ರಸ್ತೆ ಅರ್ಧ ಭಾಗದಲ್ಲಿಕಟಾವಿಗೆ ಬಂದ ಬೆಳೆಗಳನ್ನು ಸಂಗ್ರಹಿಸಿಡುತ್ತಿದ್ದು, ವಾಹನ ಸವಾರರು ಗೊಂದಲಕ್ಕೀಡಾಗಿ ಅಪಘಾತದ ಸುಳಿಯಲ್ಲಿಸಿಲುಕುವಂತಾಗಿದೆ. ಜಿಲ್ಲೆಯ ಬಹುತೇಕ ಸವೀರ್ ಸ್ ರಸ್ತೆಗಳಲ್ಲಿನ ನಡೆದ ಅಪಘಾತದಲ್ಲಿಸಾವು, ನೋವುಗಳ ಸಂಖ್ಯೆ ಲೆಕ್ಕಕ್ಕೆ ಸಿಗದಂತಿದೆ. ಬಂಕಾಪುರ-ಮುಂಡಗೋಡ, ಬಮ್ಮನಹಳ್ಳಿ-ಕೋಣನಕೇರಿ ಮಾರ್ಗದ ಕೋಣನಕೇರಿ-ತಡಸ ಹಾಗೂ ಶಿಗ್ಗಾವಿ ಹೆದ್ದಾರಿ ಪಕ್ಕದ ಸವೀರ್ ಸ್ ರಸ್ತೆಗಳಲ್ಲಿಬೆಳೆಗಳ ಸಂಗ್ರಹ ಸಂಚಾರಕ್ಕೆ ಸಮಸ್ಯೆಯಾಗಿದೆ.
ರೈತರಿಗೆ ಅನುಕೂಲ ಕಲ್ಪಿಸುವ ಮೂಲಕ ಸುಗಮ ಸಂಚಾರಕ್ಕೂ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ. ಸರಕಾರ ಕಣ ನಿರ್ಮಾಣಕ್ಕೆ ಕೊಡುತ್ತಿದ್ದ ಸಹಾಯ ಧನ ಮುಂದುವರಿಸಬೇಕು ಎಂಬುದು ರೈತರ ಒತ್ತಾಸೆಯಾಗಿದೆ.
-
ಕೋಟ್
ಈ ಹಿಂದೆ ಬಿಜೆಪಿ ಸರಕಾರ ಕೃಷಿ ಸಂಸ್ಕೃರಣಾ ಯೋಜನೆಯಡಿ ಕಣ ನಿರ್ಮಾಣಕ್ಕೆ ಸಹಾಯ ಧನ ವಿತರಿಸುತಿತ್ತು. ಕಾಂಗ್ರೆಸ್ ರಾಜ್ಯ ಸರಕಾರ ಇದನ್ನು ಮುಂದುವರಿಸಬೇಕು. ಇದರಿಂದ ಕಣ ನಿರ್ಮಾಣಕ್ಕೆ ಒಂದಿಷ್ಟು ಸಹಾಯಕವಾಗಲಿದೆ.
-ಶಶಿಧರ ಹೊಣ್ಣಣ್ಣವರ ರೈತ ಮುಖಂಡ ಶಿಗ್ಗಾವಿ
ಬಾಕ್ಸ್
ವ್ಯಾಪಾರಸ್ಥರಿಂದ ಕಣ?
ರೈತರ ಬೆಳೆಗಳನ್ನು ಖರೀದಿಸುವ ಕೆಲವು ವ್ಯಾಪಾರಸ್ಥರು, ಈ ಸವೀರ್ ಸ್ ರಸ್ತೆಗಳಲ್ಲಿಗೋವಿನಜೋಳ, ಸೋಯಾಬಿನ್ ಬೆಳೆಗಳನ್ನು ಒಣಗಿಸಲು ಹಾಕುತ್ತಿದ್ದಾರೆ. ಯಾರೇ ಕೇಳಿದರೂ ರೈತರೇ ಹಾಕಿದ್ದಾರೆ ಎನ್ನುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.