* ತಾಸೆ ಪೆಟ್ಟಿಗೆ ಹೆಜ್ಜೆಹಾಕಿದ ಯತ್ನಾಳ್

Contributed byajitha.m@timesofindia.com|Vijaya Karnataka
yatnal celebrates in dance at the tiger dance ceremony
ವಿಕ ಸುದ್ದಿಲೋಕ ಉಡುಪಿ

ಬ್ರಹ್ಮಾವರ ಸಾರ್ವಜನಿಕ ಗಣೇಶೋತ್ಸವದ ವಿಸರ್ಜನೆ ಮೆರವಣಿಗೆ ಹಿನ್ನೆಲೆಯಲ್ಲಿಆಯೋಜಿಸಿದ್ದ ಹುಲಿವೇಷದ ಊದುಪೂಜೆ ಕಾರ್ಯಕ್ರಮದಲ್ಲಿಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಭಾಗವಹಿಸಿ ಹುಲಿಕುಣಿತದ ಸೊಬಗನ್ನು ಸವಿದರು.
ವಾರಂಬಳ್ಳಿ ಫ್ರೆಂಡ್ಸ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿಹುಲಿವೇಷಧಾರಿಗಳ ವಿಶೇಷ ಕುಣಿತವನ್ನು ವೀಕ್ಷಿಸಿದ ಯತ್ನಾಳ್ , ಹುಲಿವೇಷದ ತಾಸೆಯ ಪೆಟ್ಟಿಗೆ ಮನಸೋತು ಹೆಜ್ಜೆ ಹಾಕಿದರು. ಹುಲಿವೇಷಧಾರಿಗಳೊಂದಿಗೆ ಕೆಲಕಾಲ ಹೆಜ್ಜೆ ಹಾಕಿ ಕುಣಿದು ಸಂಭ್ರಮಿಸಿದರು. ಯತ್ನಾಳ್ ಅವರ ಹುಲಿಕುಣಿತದ ದೃಶ್ಯ ಕಾರ್ಯಕ್ರಮದಲ್ಲಿನೆರೆದಿದ್ದವರ ಗಮನ ಸೆಳೆಯಿತು.

ಇವರ ಜತೆಗೆ ಶಾಸಕ ಯಶಪಾಲ್ ಎ.ಸುವರ್ಣ, ಉದ್ಯಮಿ ಸಂಪತ್ ಶೆಟ್ಟಿ ಸಹಿತ ಅನೇಕರು ಹೆಜ್ಜೆ ಹಾಕಿದರು.

ಫೋಟೊ: 18ಎಎ ಯತ್ನಾಳ್