** (ಕ್ರೀಡಾಂಗಣ ಅಭಿಯಾನ) ಅಭಿವೃದ್ಧಿಯ ನಿರೀಕ್ಷೆಯಲ್ಲಿಸ್ವರ್ಗದ ಆಟದ ಮೈದಾನ ಕಂದಾಯ ಇಲಾಖೆಯಿಂದ ಪಂಚಾಯಿತಿಗೆ ಹಸ್ತಾಂತರ ಪ್ರಕ್ರಿಯೆ ಚುರುಕು

Contributed byajithswarga@gmail.com|Vijaya Karnataka
transforming into a prestigious sports arena a new dawn for swarga sports ground
ಅಜಿತ್ ಸ್ವರ್ಗ ಪೆರ್ಲ

್ಛಛಿಛಿdಚಿa್ಚkvkಞ್ಞಜಃಜಞaಜ್ಝಿ.್ಚಟಞ
ಎಣ್ಮಕಜೆ ಗ್ರಾಮ ಪಂಚಾಯಿತಿಯ 8ನೇ ವಾರ್ಡ್ ವ್ಯಾಪ್ತಿಯ ಸ್ವರ್ಗ ಜಂಕ್ಷನ್ ನಿಂದ ಕೇವಲ 400 ಮೀಟರ್ ದೂರದಲ್ಲಿರುವ ‘ಸ್ವರ್ಗ ಆಟದ ಮೈದಾನ ’ವು ಇಂದು ಕ್ರೀಡಾ ಪ್ರೇಮಿಗಳು ಮತ್ತು ಸ್ಥಳೀಯರ ಆಶಾಕಿರಣವಾಗಿ ಮಾರ್ಪಟ್ಟಿದ್ದು, ಸುಸಜ್ಜಿತ ಕ್ರೀಡಾಂಗಣವಾಗಿ ರೂಪುಗೊಳ್ಳುವ ನಿರೀಕ್ಷೆಯಲ್ಲಿದೆ.

ಸ್ವರ್ಗ- ತೂಂಬಡ್ಕ ರಸ್ತೆಯ ಬದಿಯಲ್ಲಿರುವ ಈ ವಿಶಾಲ ಮೈದಾನವು ಸದ್ಯ ಕಂದಾಯ ಇಲಾಖೆಯ ಸ್ವಾಧೀನದಲ್ಲಿದ್ದು, ಇದನ್ನು ಅಧಿಕೃತವಾಗಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸುವ ಪ್ರಕ್ರಿಯೆಗಳು ಈಗ ಪ್ರಗತಿಯಲ್ಲಿದೆ. ಮೈದಾನದ ಅಭಿವೃದ್ಧಿಗೆ ಯಾವುದೇ ಕಾನೂನಾತ್ಮಕ ಅಡೆತಡೆಗಳು ಎದುರಾಗಬಾರದು ಎಂಬ ನಿಟ್ಟಿನಲ್ಲಿ, ಇದರ ಸುತ್ತಮುತ್ತಲಿನ ಜಾಗದ ಮಾಲೀಕರು ಹಾಗೂ ವಾರೀಸುದಾರರು ಈಗಾಗಲೇ ತಮ್ಮ ಸಂಪೂರ್ಣ ಒಪ್ಪಿಗೆ ಸೂಚಿಸಿ, ಅಗತ್ಯವಿರುವ ನಿರಾಪೇಕ್ಷಣಾ ಪತ್ರವನ್ನು (ಎನ್ ಓಸಿ) ಗ್ರಾಮಾಧಿಕಾರಿಗಳಿಗೆ ಹಸ್ತಾಂತರಿಸುವ ಮೂಲಕ ಮಾದರಿ ಒಗ್ಗಟ್ಟನ್ನು ಪ್ರದರ್ಶಿಸಿದ್ದಾರೆ.

ಬಂಜರು ಗದ್ದೆ ಈಗ ಆಟದ ಮೈದಾನ: ಭೂ ಸುಧಾರಣಾ ಕಾಯಿದೆಯಡಿ ಸರಕಾರ ವಶಪಡಿಸಿಕೊಂಡಿದ್ದ ಈ ಹೆಚ್ಚುವರಿ ಮಿಚ್ಚ ಭೂಮಿ, ಒಂದು ಕಾಲದಲ್ಲಿಹುಲುಸಾದ ಹುಲ್ಲುಬೆಳೆದು ಜಾನುವಾರುಗಳ ಮೇವು ತಾಣವಾಗಿತ್ತು. ಜಾನುವಾರುಗಳನ್ನು ಹಟ್ಟಿಯಲ್ಲಿಕಟ್ಟಿ ಹಾಕುವ ಕಾಲ ಬಂದಾಗ ಯಾರಿಗೂ ಉಪಯೋಗವಿಲ್ಲದ ಕೇವಲ ಬಂಜರು ಗದ್ದೆಯಾಗಿ ಮಾರ್ಪಟ್ಟಿತ್ತು. ಈ ಜಾಗವನ್ನು ಕ್ರೀಡಾಂಗಣವನ್ನಾಗಿ ಪರಿವರ್ತಿಸುವಲ್ಲಿಹಲವು ಹಿರಿಯರ ಅವಿರತ ಶ್ರಮ ಅಡಗಿದೆ.

ದೂರದರ್ಶಿತ್ವದ ಫಲ: ಸ್ಥಳೀಯರೇ ಆದ ನಿವೃತ್ತ ಕಂದಾಯ ಅಧಿಕಾರಿ ದಿ.ಸಂಜೀವ ಎಂ., ನಿವೃತ್ತ ಮುಖ್ಯ ಶಿಕ್ಷಕ ದಿ.ಎನ್ .ಕುಮಾರನ್ ಮಾಸ್ಟರ್ ಹಾಗೂ ಅಂದು ವಾರ್ಡ್ ಸದಸ್ಯರಾಗಿದ್ದ ದಿ.ಎಂ.ಕೆ.ಬಾಲಕೃಷ್ಣ ಅವರ ದೂರದರ್ಶಿತ್ವದ ಪರಿಶ್ರಮದ ಫಲವಾಗಿ ಈ ಮೈದಾನ ಕ್ರೀಡಾಂಗಣವಾಗಿ ರೂಪುಗೊಂಡಿದೆ.

ಅಂದಿನಿಂದ ಇಂದಿನವರೆಗೂ ಸ್ಥಳೀಯರು ಇಲ್ಲಿವಾಲಿಬಾಲ್ , ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡೆಗಳನ್ನು ಆಡುತ್ತಾ ಬಂದಿದ್ದಾರೆ. ಪ್ರತಿನಿತ್ಯ ಇಲ್ಲಿಸಂಜೆ ವೇಳೆ ಕ್ರಿಕೆಟ್ ವಾಲಿಬಾಲ್ ಆಡಲಾಗುತ್ತಿದೆ. ಹತ್ತಿರದ ಪಾಣಾಜೆ ಗ್ರಾಪಂ ವ್ಯಾಪ್ತಿಯ ಕ್ರೀಡಾಳುಗಳೂ ಇಲ್ಲಿಆಟವಾಡುತ್ತಿದ್ದಾರೆ. ಭಾನುವಾರದಂದು ಇಲ್ಲಿಸಂಘಟನೆಗಳ ನೇತೃತ್ವದಲ್ಲಿಪಂದ್ಯಾಟಗಳನ್ನೂ ಆಯೋಜಿಸಲಾಗುತ್ತಿದೆ.

ಜಾಗಿಂಗ್ , ದೈಹಿಕ ಕ್ಷಮತೆ ತರಬೇತಿ, ವಾಹನ ಚಾಲನೆ ಕಲಿಕೆಗೂ ಸೈ: ಕೇವಲ ಆಟಕ್ಕಷ್ಟೇ ಅಲ್ಲದೆ, ಜಾಗಿಂಗ್ , ಪ್ರಾದೇಶಿಕ ಯುವಕ- ಯುವತಿಯರ ವಾಹನ ಚಾಲನೆ ಕಲಿಕೆಗೆ ಮತ್ತು ಸೇನೆ, ಪೊಲೀಸ್ , ಅರಣ್ಯ, ಅಬಕಾರಿ ಇಲಾಖೆ ಉದ್ಯೋಗದ ಆಕಾಂಕ್ಷಿಗಳಿಗೆ ದೈಹಿಕ ಕ್ಷಮತೆ ತರಬೇತಿ ಪಡೆಯಲು ಈ ಮೈದಾನವೇ ಪ್ರಮುಖ ಆಶ್ರಯ ತಾಣವಾಗಿದೆ.

ಉದ್ಯೋಗ ಖಾತರಿ ಯೋಜನೆಯಡಿ ವಿಸ್ತರಣೆ: ಸ್ವರ್ಗದ ಈ ಮೈದಾನವನ್ನು ಕ್ರೀಡಾಕೂಟಗಳಿಗೆ ಯೋಗ್ಯವಾಗಿಸಲು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮತ್ತು ಸ್ಥಳೀಯ ಸಂಘಟನೆಯಾದ ‘ಮಾತೃಭೂಮಿ ಸ್ವರ್ಗ’ ನೇತೃತ್ವದಲ್ಲಿನಡೆದ ನಿರಂತರ ಶ್ರಮದಾನದ ಮೂಲಕ ಎರಡು ಗದ್ದೆಗಳನ್ನು ಒಂದೇ ರೀತಿ ಸಮತಟ್ಟು ಮಾಡಿ ಸಾಕಷ್ಟು ವಿಸ್ತರಿಸಲಾಗಿತ್ತು.

ಪ್ರಸ್ತುತ ಸ್ವರ್ಗ ವಾರ್ಡ್ ಸದಸ್ಯರಾಗಿರುವ ರಾಮಚಂದ್ರ ಎಂ. ಅವರ ವಿಶೇಷ ಮುತುವರ್ಜಿಯಲ್ಲಿಮೈದಾನವನ್ನು ಪಂಚಾಯಿತಿಗೆ ಬಿಟ್ಟುಕೊಡುವಂತೆ ಕಂದಾಯ ಇಲಾಖೆಗೆ ವ್ಯವಸ್ಥಿತವಾಗಿ ಮನವಿ ಸಲ್ಲಿಸಲಾಗಿದೆ. ಅಧಿಕಾರಿ ಮಟ್ಟದಲ್ಲಿಪೂರಕ ಸ್ಪಂದನೆ ದೊರೆತಿದ್ದು, ಶೀಘ್ರದಲ್ಲೇ ಮೈದಾನ ಪಂಚಾಯಿತಿಯ ಸುಪರ್ದಿಗೆ ಸಿಗುವ ಎಲ್ಲಲಕ್ಷಣಗಳು ದಟ್ಟವಾಗಿವೆ.

ಕ್ರೀಡಾಂಗಣದ ನವೀಕರಣಕ್ಕೆ ಸಿದ್ಧತೆ: ಕಂದಾಯ ಇಲಾಖೆಯಿಂದ ಹಸ್ತಾಂತರ ಪ್ರಕ್ರಿಯೆ ಅಧಿಕೃತವಾಗಿ ಪೂರ್ಣಗೊಂಡರೆ, ಎಣ್ಮಕಜೆ ಪಂಚಾಯಿತಿಯ ವಾರ್ಷಿಕ ಅನುದಾನ ಹಾಗೂ ಕ್ರೀಡಾ ನಿಧಿಯನ್ನು ಬಳಸಿಕೊಂಡು ಇಲ್ಲಿಗ್ಯಾಲರಿ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ಹಾಗೂ ಕ್ರೀಡಾಪಟುಗಳಿಗೆ ಸೂಕ್ತ ವಿಶ್ರಾಂತಿ ಕೊಠಡಿ ಸೇರಿದಂತೆ ಸಕಲ ಮೂಲಸೌಕರ್ಯಗಳನ್ನು ಕಲ್ಪಿಸಲು ಯೋಜನೆ ರೂಪಿಸಬೇಕಾಗಿದೆ.

ಆದರೆ, ಈ ಮೈದಾನ ವರ್ಷದ ಬಹುಪಾಲು ನೀರಿನಿಂದ ಆವೃತವಾಗಿರುವ ಜೌಗು ಪ್ರದೇಶ (ಒದ್ದೆ ಭೂಮಿ, ತೇವಭೂಮಿ) ಆಗಿರುವುದರಿಂದ ಆರ್ ಡಿಒ ಅವರ ಅನುಮೋದನೆ ಅಗತ್ಯವಿದೆ, ಮತ್ತು ಅದಕ್ಕೆ ಸಾಕಷ್ಟು ಸಮಯ ಹಿಡಿಯಲಿದೆ ಎಂದು ಕಂದಾಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರಸ್ತುತ ಪ್ರಗತಿಯಲ್ಲಿರುವ ಹಸ್ತಾಂತರ ಪ್ರಕ್ರಿಯೆ ತಡವಾಗದೆ ಶೀಘ್ರವಾಗಿ ಮುಗಿದು, ಈ ಮೈದಾನವು ಹಸಿರು ಕ್ರೀಡಾಂಗಣವಾಗಿ ಮಾರ್ಪಡಲಿ ಎಂಬುದು ಈ ಭಾಗದ ಕ್ರೀಡಾಳುಗಳು ಹಾಗೂ ಕ್ರೀಡಾ ಪ್ರೇಮಿಗಳ ಮಹದಾಸೆಯಾಗಿದೆ.

ಸ್ವರ್ಗ- ತೂಂಬಡ್ಕ ರಸ್ತೆಯ ಸ್ವರ್ಗ ಮೈದಾನ ತನಕದ ರಸ್ತೆಯನ್ನು ಈಗಾಗಲೆ ಅಭಿವೃದ್ಧಿಪಡಿಸಲಾಗಿದೆ. ಕೇರಳ ಭಾಗದ ಸಂಪೂರ್ಣ ರಸ್ತೆ ಹಾಗೂ ಮೈದಾನಕ್ಕೆ ಇಳಿಯುವ ರಸ್ತೆ ಹಾಗೂ ಇತರ ಮೂಲ ಸೌಕರ್ಯ ಅಭಿವೃದ್ಧಿಗೆ ಶ್ರಮಿಸಲಾಗುವುದು.

-ರಾಮಚಂದ್ರ ಎಂ.ಎಣ್ಮಕಜೆ, ಗ್ರಾಪಂ ಸದಸ್ಯ.

ಸ್ವರ್ಗದ ಈ ಮೈದಾನ ಸ್ಥಳೀಯ ಕ್ರೀಡಾಪಟುಗಳಿಗೆ ಏಕೈಕ ಆಸರೆಯಾಗಿದೆ. ಕಳೆದ ಕೆಲವು ವರ್ಷಗಳಿಂದ ಸಂಜೆ ವೇಳೆ ಈ ಮೈದಾನದಲ್ಲಿಕ್ರಿಕೆಟ್ ಆಡುತ್ತಿದ್ದೇನೆ. ಆದಷ್ಟು ಬೇಗ ಈ ಕ್ರೀಡಾಂಗಣ ಇನ್ನಷ್ಟು ಅಭಿವೃದ್ಧಿಯಾಗಲಿ.

-ಶಿವಶಂಕರ್ ದೈತೋಟ, ಪಾಣಾಜೆ.

( 17 ಪಿಎಲ್ ಮೈದಾನ : ಸ್ವರ್ಗದ ಆಟದ ಮೈದಾನ.

17 ಪಿಎಲ್ ಗೂಗಲ್ : ಸ್ವರ್ಗ ಮೈದಾನದ ಗೂಗಲ್ ನಕ್ಷೆ.

17 ಪಿಎಲ್ ರಾಮಚಂದ್ರ ಎಂ: ರಾಮಚಂದ್ರ ಎಂ.

17 ಪಿಎಲ್ ಶಿವಶಂಕರ: ಶಿವಶಂಕರ ದೈತೋಟ.