ಅರೇಹಳ್ಳಿ ರೋಟರಿ ಶಾಲೆಗೆ ಸಮಗ್ರ ಪ್ರಶಸ್ತಿ

Contributed byranjithkumarks1004@gmail.com|Vijaya Karnataka
arehalli rotary school wins overall trophy at inter school sports meet
ಅರೇಹಳ್ಳಿ: ಬೇಲೂರು ತಾಲೂಕಿನ ಅರೇಹಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆ ಹಾಗೂ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಂಯುಕ್ತಾಶ್ರಯದಲ್ಲಿಬೇಲೂರು ತಾಲೂಕು ಕ್ರೀಡಾಂಗಣದಲ್ಲಿಅರೇಹಳ್ಳಿ ಹೋಬಳಿ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ ನಡೆಯಿತು.

ಈ ಕ್ರೀಡಾಕೂಟದಲ್ಲಿಭಾಗವಹಿಸಿದ ರೋಟರಿ ಶಾಲೆಯು ಸಮಗ್ರ ಪ್ರಶಸ್ತಿಗೆ ಭಾಜನವಾಯಿತು. ಜತೆಗೆ ಬಾಲಕರ ಚಾಂಪಿಯನ್ ಪಟ್ಟ ಅಲಂಕರಿಸಿ ಬಾಲಕರ ವೈಯಕ್ತಿಕ ಚಾಂಪಿಯನ್ ಆಗಿ ಯೋಗಿತ್ ಹೊರಹೊಮ್ಮಿದರು. ಕ್ರೀಡಾಕೂಟದಲ್ಲಿಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಶಾಲೆಯ ಆಡಳಿತ ಮಂಡಳಿ ಸದಸ್ಯರು, ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ಸಿಬ್ಬಂದಿ ಅಭಿನಂದಿಸಿದರು.
ಪ್ರಶಸ್ತಿಗಳ ವಿವರ: ಬಾಲಕರ ವೈಯಕ್ತಿಕ ವಿಭಾಗ: ಧನುಷ್ -1500 ಮೀ.ಓ (ಪ್ರ), ಸಂಜಯ್ -3000ಮೀ. ಹಾಗೂ 800.ಮೀ. ಓಟ (ಪ್ರ), ಟ್ರಿಪಲ್ ಜಂಪ್ -(ತೃ),ಯೋಗಿತ್ -100 ಮೀ.ಓಟ,200 ಮೀ.ಓಟ, ಎತ್ತರ ಜಿಗಿತ (ಪ್ರ), ಅರ್ಜುನ್ -ಹ್ಯಾಮರ್ ಥ್ರೋ (ಪ್ರ) ಗುಂಡು ಎಸೆತ (ದ್ವಿ), ಭರ್ಜಿ ಎಸೆತ(ದ್ವಿ), ತರುಣ್ -ಹ್ಯಾಮರ್ ಥ್ರೋ(ದ್ವಿ), ದೀಕ್ಷಿತ್ -400 ಮೀ.ಓಟ (ತೃ).

ಬಾಲಕರ ಗುಂಪು ವಿಭಾಗ: ಥ್ರೋ ಬಾಲ್ - (ದ್ವಿ), 4*400 ರಿಲೇ (ದ್ವಿ).

ಬಾಲಕಿಯರ ವೈಯಕ್ತಿಕ ವಿಭಾಗ: ದೀಕ್ಷಾ-ಹ್ಯಾಮರ್ ಥ್ರೋ (ಪ್ರ) ಎತ್ತರ ಜಿಗಿತ (ತೃ), ಪ್ರತೀಕ್ಷಾ-400 ಮೀ.ಓಟ (ಪ್ರ), 200ಮೀ.ಓಟ(ದ್ವಿ), ಡಿಂಪಲ್ -3000 ಮೀ.ಓಟ (ದ್ವಿ) 100 ಮೀ.ಓಟ (ತೃ), ವಂಶಿಕಾ- ಹ್ಯಾಮರ್ ಥ್ರೋ (ದ್ವಿ), ನೈಫಾ-ಎತ್ತರ ಜಿಗಿತ (ದ್ವಿ),ಪ್ರಾರ್ಥನ-400ಮೀ.ಓಟ (ತೃ), ಗೌತಮಿ-200ಮೀ.ಓಟ(ತೃ)ಬಾಲಕಿಯರ ಗುಂಪು ಆಟ: 4*100 ರಿಲೇ (ಪ್ರ) ಹಾಗೂ 4*400 ರಿಲೇ (ಪ್ರ).