Innovation Creation Of Rpf Web Series Through Ai Technology
ಎಐ ತಂತ್ರಜ್ಞಾನದ ವೆಬ್ ಸರಣಿ
Contributed by: Kiran Mr. Kumar|Vijaya Karnataka•
ಎಐ ತಂತ್ರಜ್ಞಾನ ಬಳಸಿಕೊಂಡು ‘ಆರ್ ಪಿಎಫ್ ’ ಎಂಬ ವೆಬ್ ಸರಣಿ ನಿರ್ಮಾಣವಾಗುತ್ತಿದೆ. ಈ ವೆಬ್ ಸರಣಿಯನ್ನು ಮಾದೇಶ್ ಆರಾಧ್ಯ ನಿರ್ದೇಶಿಸುತ್ತಿದ್ದು, ಮಧು ಮಂದಗೆರೆ ನಾಯಕರಾಗಿ ನಟಿಸುತ್ತಿದ್ದಾರೆ.
‘ಇದು ನೈಜ ಘಟನೆಯೊಂದನ್ನು ಆಧಾರವಾಗಿಟ್ಟುಕೊಂಡು ಮಾಡುತ್ತಿರುವ ವೆಬ್ ಸರಣಿ. ಇಲ್ಲಿಕಲಾವಿದರ ಅಭಿನಯ ಮಾತ್ರ ನೈಜವಾಗಿರುತ್ತದೆ. ಉಳಿದಿದ್ದು ಎಐ ತಂತ್ರಜ್ಞಾನ. ಮೊದಲ ಹೆಜ್ಜೆಯಾಗಿ ಟೀಸರ್ ಬಿಡುಗಡೆ ಮಾಡಿದ್ದೇವೆ. ಈಗಾಗಲೇ ಐದಾರು ಕಂತುಗಳು ಸಿದ್ಧವಾಗಿವೆ’ ಎಂದಿದ್ದಾರೆ ನಿರ್ದೇಶಕ ಮಾದೇಶ್ ಆರಾಧ್ಯ .‘ನಾನು ಮೂವತ್ತು ವರ್ಷಗಳಿಂದ ಚಲನಚಿತ್ರ ಕಲಾವಿದ ಹಾಗೂ ರೈಲ್ವೇ ಪೊಲೀಸ್ ನೌಕರನಾಗಿ ಕಾರ್ಯ ನಿರ್ವಹಿಸಿದ್ದೇನೆ. ರೈಲ್ವೇ ಇಲಾಖೆಯಲ್ಲಿನಾನು ಕಂಡಿರುವ ನೈಜ ಘಟನೆಗಳು ಹಾಗೂ ಅಲ್ಲಿಅನುಭವಿಸಿರುವ ನೋವನ್ನು ಈ ಮೂಲಕ ಜನರಿಗೆ ತಲುಪಿಸುವ ಉದ್ದೇಶ ಇದರ ಹಿಂದಿದೆ’ ಎಂದಿದ್ದಾರೆ ಮಧು ಮಂದಗೆರೆ.